See also 2first  3first
1first ಹರ್ಸ್‍
ಗುಣವಾಚಕ
  1. (ಕಾಲ ಯಾ ಕ್ರಮದಲ್ಲಿ) ಮೊದಲನೆಯ; ಪ್ರಥಮ; ಪೂರ್ವದ; ಆದಿಯ: January, the first month of the year ವರ್ಷದ ಮೊದಲನೇ ತಿಂಗಳು, ಜನವರಿ. the first man to arrive ಬಂದವರಲ್ಲಿ ಮೊದಲಿಗ.
  2. (ಸ್ಥಾನ, ದರ್ಜೆ, ಅಧಿಕಾರ ಯಾ ಪ್ರಾಧಾನ್ಯದಲ್ಲಿ) (ಎಲ್ಲಕ್ಕಿಂತ, ಎಲ್ಲರಿಗಿಂತ) ಮುಂದಾಗಿರುವ; ಪ್ರಮುಖ; ಅಗ್ರಗಣ್ಯ: head first ತಲೆ ಮುಂದಾಗಿ, ಮುಂಚಾಚಿ. feet first ಕಾಲು ಮುಂದಾಗಿ, ಮುಂಚಾಚಿ.
  3. (ನಿರ್ದೇಶಿಸಿದ ಯಾ ಸೂಚಿಸಿದ ಕಾಲಾವಧಿಯ ನಂತರ) ಮೊದಲು ಬರುವ; ಮೊಟ್ಟಮೊದಲನೆಯ; ಪ್ರಪ್ರಥಮ: the first cuckoo (ಋತುವಿನ) ಮೊಟ್ಟಮೊದಲ ಕೋಗಿಲೆ.
  4. (ಕೇವಲ) ಮೊದಲ; ಒಂದೇ ಒಂದನೆಯ: obeyed at her first word ಅವಳ ಮೊದಲ ಮಾತಿಗೇ ಅವಳು ಹೇಳಿದಂತೆ ಕೇಳಿದ.
  5. ಮೂಲಾಧಾರವಾಗಿರುವ ಯಾ ಸ್ವತಸ್ಸಿದ್ಧವಾಗಿರುವ: first principles ಮೂಲಾಧಾರ ಸೂತ್ರಗಳು; ಆಧಾರತತ್ವಗಳು.
  6. (ಸಂಗೀತ) ಎರಡು ಯಾ ಹೆಚ್ಚು ಸ್ಥಾಯಿಗಳ ಪ್ರಥಮ ಸ್ವರವನ್ನು ಹಾಡುವ ಯಾ ವಾದನಮಾಡುವ.
  7. (ಯಾವುದನ್ನೇ ಮಾಡಲು ಇಷ್ಟವುಳ್ಳವನಾಗಿರುವುದು, ಸಿದ್ಧನಾಗಿರುವುದು, ಮೊದಲಾದವುಗಳಲ್ಲಿ) ಮೊದಲಿಗನಾದ; ಪ್ರಥಮನಾದ: should be the first to admit the difficulty ಕಷ್ಟವನ್ನು ಒಪ್ಪುವುದರಲ್ಲಿ ಮೊದಲಿಗನಾಗಿರಬೇಕು.
ಪದಗುಚ್ಛ
  1. at first blush ಮೊದಲ ನೋಟಕ್ಕೇ; ಪ್ರಥಮ ದರ್ಶನದಲ್ಲೇ.
  2. at first sight = ಪದಗುಚ್ಛ \((1)\).
  3. at first view = ಪದಗುಚ್ಛ \((1)\).
  4. come in first ಮೊದಲು ಬರು; ಮೊದಲನೆಯವನಾಗು; ಪಂದ್ಯದಲ್ಲಿ (ಮೊದಲನೆಯವನಾಗಿ) ಗೆಲ್ಲು.
  5. first form (ಸ್ಕೂಲಿನಲ್ಲಿ) ಮೊಟ್ಟಮೊದಲ ತರಗತಿ; ಒಂದನೆಯ ಇಯತ್ತೆ.
  6. First Lord of the Admiralty (ಬ್ರಿಟನ್‍) ನೌಕಾಖಾತೆಯ ಪ್ರಥಮ ಸಚಿವ (ಅಂದರೆ ನೌಕಾಸಚಿವ).
  7. First Sea Lord ನೌಕಾಸೇನಾನಿ; ದಂಡನಾಯಕ.
  8. first thing (ಆಡುಮಾತು) ಎಲ್ಲಕ್ಕಿಂತ ಮುಂಚೆ; ಮೊಟ್ಟಮೊದಲು; ಪ್ರಪ್ರಥಮವಾಗಿ.
  9. first things ಎಲ್ಲಕ್ಕಿಂತ ಅತ್ಯಂತ ಮುಖ್ಯವಾದ ವಸ್ತುಗಳು, ವಿಷಯಗಳು.
  10. first violin
    1. ಆರ್ಕೆಸ್ಟ್ರಾ (ವಾದ್ಯಮೇಳ)ದ ತಂತೀವಾದ್ಯಗಾರರಲ್ಲಿ ಅತ್ಯುನ್ನತ ಸ್ಥಾಯಿಯಲ್ಲಿ ನುಡಿಸುವವನು.
    2. ವಾದ್ಯಮೇಳದ ನಾಯಕ.
    3. ತಂತೀವಾದ್ಯಚತುಷ್ಟಯದ ನಾಯಕ.
  11. in the first place ಮೊದಲನೆಯದಾಗಿ.
  12. the first two ಮೊದಲನೆಯವೆರಡೂ ಯಾ ಮೊದಲನೆಯವರಿಬ್ಬರೂ; ಮೊದಲನೆಯದು(ಯವನು) ಮತ್ತು ಎರಡನೆಯದು(ಯವನು).
  13. the two first = ಪದಗುಚ್ಛ \((12)\).
ನುಡಿಗಟ್ಟು
  1. first past the post (ಚುನಾವಣೆಯ ಉಮೇದುದಾರನ ವಿಷಯದಲ್ಲಿ) ಬಹುಶಃ ಪೂರ್ಣ ಬಹುಮತದಿಂದಲ್ಲದೆ ಇದ್ದರೂ ಹೆಚ್ಚು ಮತಗಳಿಂದ ಗೆದ್ದ.
  2. the first ಓನಾಮ; ಸಾಮಾನ್ಯ ವಿಷಯ; ಸ್ಥೂಲ ತತ್ತ್ವ: he doesn’t know the first thing about it ಅದರ ಬಗ್ಗೆ ಅವನಿಗೆ ಓನಾಮವೂ ಗೊತ್ತಿಲ್ಲ.