(ಕಾಲ ಯಾ ಕ್ರಮದಲ್ಲಿ) ಮೊದಲನೆಯ; ಪ್ರಥಮ; ಪೂರ್ವದ; ಆದಿಯ: January, the first month of the year ವರ್ಷದ ಮೊದಲನೇ ತಿಂಗಳು, ಜನವರಿ. the first man to arrive ಬಂದವರಲ್ಲಿ ಮೊದಲಿಗ.
(ಸ್ಥಾನ, ದರ್ಜೆ, ಅಧಿಕಾರ ಯಾ ಪ್ರಾಧಾನ್ಯದಲ್ಲಿ) (ಎಲ್ಲಕ್ಕಿಂತ, ಎಲ್ಲರಿಗಿಂತ) ಮುಂದಾಗಿರುವ; ಪ್ರಮುಖ; ಅಗ್ರಗಣ್ಯ: head first ತಲೆ ಮುಂದಾಗಿ, ಮುಂಚಾಚಿ. feet first ಕಾಲು ಮುಂದಾಗಿ, ಮುಂಚಾಚಿ.
(ನಿರ್ದೇಶಿಸಿದ ಯಾ ಸೂಚಿಸಿದ ಕಾಲಾವಧಿಯ ನಂತರ) ಮೊದಲು ಬರುವ; ಮೊಟ್ಟಮೊದಲನೆಯ; ಪ್ರಪ್ರಥಮ: the first cuckoo (ಋತುವಿನ) ಮೊಟ್ಟಮೊದಲ ಕೋಗಿಲೆ.
(ಕೇವಲ) ಮೊದಲ; ಒಂದೇ ಒಂದನೆಯ: obeyed at her first word ಅವಳ ಮೊದಲ ಮಾತಿಗೇ ಅವಳು ಹೇಳಿದಂತೆ ಕೇಳಿದ.
ಮೂಲಾಧಾರವಾಗಿರುವ ಯಾ ಸ್ವತಸ್ಸಿದ್ಧವಾಗಿರುವ: first principles ಮೂಲಾಧಾರ ಸೂತ್ರಗಳು; ಆಧಾರತತ್ವಗಳು.
(ಸಂಗೀತ) ಎರಡು ಯಾ ಹೆಚ್ಚು ಸ್ಥಾಯಿಗಳ ಪ್ರಥಮ ಸ್ವರವನ್ನು ಹಾಡುವ ಯಾ ವಾದನಮಾಡುವ.
(ಯಾವುದನ್ನೇ ಮಾಡಲು ಇಷ್ಟವುಳ್ಳವನಾಗಿರುವುದು, ಸಿದ್ಧನಾಗಿರುವುದು, ಮೊದಲಾದವುಗಳಲ್ಲಿ) ಮೊದಲಿಗನಾದ; ಪ್ರಥಮನಾದ: should be the first to admit the difficulty ಕಷ್ಟವನ್ನು ಒಪ್ಪುವುದರಲ್ಲಿ ಮೊದಲಿಗನಾಗಿರಬೇಕು.