See also 2fat  3fat
1fat ಹ್ಯಾಟ್‍
ಗುಣವಾಚಕ
  1. (ಪ್ರಾಣಿಯ ವಿಷಯದಲ್ಲಿ) ಕೊಬ್ಬಿದ; ಕೊಬ್ಬಿಸಿದ; ಪುಷ್ಟಿಗೊಳಿಸಿದ; (ಆಹಾರಕ್ಕಾಗಿ) ಕೊಬ್ಬುವಂತೆ ಬೆಳೆಸಿದ; ಚೆನ್ನಾಗಿ – ಮೇಯಿಸಿದ, ತಿನ್ನಿಸಿದ.
  2. ದುಂಡುದುಂಡಾಗಿರುವ; ಪುಷ್ಟ; ಮೈತುಂಬಿಕೊಂಡಿರುವ.
  3. ಬೊಜ್ಜುಳ್ಳ; ಬೊಜ್ಜುಮೈಯ; ಬೊಜ್ಜುಬೆಳೆಸಿದ; ಸ್ಥೂಲ ಕಾಯದ.
  4. (ಮುಖ್ಯವಾಗಿ ಅಚ್ಚು ಮೊಳೆಗಳ ವಿಷಯದಲ್ಲಿ) ದಪ್ಪ; ಸ್ಥೂಲ; ಅಗಲವಾದ ಅಕ್ಷರಗಳುಳ್ಳ.
  5. ದಪ್ಪನೆಯ; ಉಬ್ಬಿದ: fat purse ದಪ್ಪನೆಯ (ತುಂಬಾ ಹಣವಿರುವ) ಹಣದ ಚೀಲ.
  6. ಜಿಡ್ಡುಳ್ಳ; ಜಿಡ್ಡಿನ; ಜಿಡ್ಡಾದ; ಎಣ್ಣೆಯುಳ್ಳ; ಎಣ್ಣೆಯ; ಕೊಬ್ಬುಳ್ಳ; ಕೊಬ್ಬಿನ; ಮೇದಸ್ಸಿನ; ನೆಣವುಳ್ಳ; ಮೇದಸ್ಸುಳ್ಳ.
  7. (ಕಲ್ಲಿದ್ದಲಿನ ವಿಷಯದಲ್ಲಿ) ಬಿಟ್ಯೂಮಿನಸ್‍ ಜಾತಿಯ; ಬಿಟ್ಯುಮಿನ್‍ ಉಳ್ಳ.
  8. (ಜೇಡಿಮಣ್ಣು ಮೊದಲಾದವುಗಳ ವಿಷಯದಲ್ಲಿ) ಅಂಟಂಟಾಗಿರುವ; ಜಿಗುಟಾದ.
  9. ಫಲವತ್ತಾದ; ಹುಲುಸಾದ; ಸಮೃದ್ಧವಾದ; ತುಂಬು ಫಲದ: fat lands ಫಲವತ್ತಾದ ಜಈನು.
  10. ತುಂಬ ವರಮಾನದ; ತುಂಬು ಆದಾಯದ: fat job ತುಂಬ ವರಮಾನದ ಉದ್ಯೋಗ.
  11. ಮಂದಬುದ್ಧಿಯ; ಮದಡ; ಜಡ; ಅಲಸ; ಸೋಮಾರಿ.
  12. (ರಂಗಭೂಮಿ, ನಟನ ಪಾತ್ರದ ವಿಷಯದಲ್ಲಿ) ಕುಶಲತೆಗೆ ಯಾ ಪ್ರದರ್ಶನಕ್ಕೆ ಅವಕಾಶವಿರುವ.
ನುಡಿಗಟ್ಟು
  1. a fat chance (ಅಶಿಷ್ಟ) ಅತ್ಯಲ್ಪ ಸಾಧ್ಯತೆ; ತೀರಾ ಕಡಮೆ ಅವಕಾಶ: he has a fat chance of winning ಅವನು ಗೆಲ್ಲುವ ಸಾಧ್ಯತೆ ತೀರಾ ಕಡಮೆ.
  2. a fat lot (ಅಶಿಷ್ಟ) ಬಹಳ ಹೆಚ್ಚು; ಯಥೇಚ್ಛ; ಸಮೃದ್ಧಿ; ಭಾರಿ; ಮಹಾ (ಬಹಳ ಸ್ವಲ್ಪ ಎನ್ನುವುದಕ್ಕೆ ಸಾಮಾನ್ಯವಾಗಿ ವ್ಯಂಗ್ಯಾರ್ಥದಲ್ಲಿ ಪ್ರಯೋಗ): a fat lot they care about anyone else’s troubles! ಇನ್ನೊಬ್ಬರ ತೊಂದರೆಗಳ ಬಗ್ಗೆ ಅವರು ಬಹಳ ಲಕ್ಷ್ಯಕೊಡುತ್ತಾರೆ!
  3. cut it fat (ಅಶಿಷ್ಟ) ಪ್ರದರ್ಶನ ಮಾಡು.
  4. cut up fat (ಸಾಯುವಾಗ) ಹೆಚ್ಚು ಐಶ್ವರ್ಯ ಬಿಟ್ಟು ಹೋಗು.
  5. fat guts (ಬಯ್ಯುವಲ್ಲಿ ಬಳಸುವ ಪ್ರಯೋಗ) ಸ್ಥೂಲಕಾಯ; ದಡಿಯ; ಬೊಜ್ಜುಬೆಳೆಸಿದವನು.
  6. fat witted ಮಂದ ಬುದ್ಧಿಯ; ದಡ್ಡ.
See also 1fat  3fat
2fat ಹ್ಯಾಟ್‍
ನಾಮವಾಚಕ
  1. (ಯಾವುದರದೇ) ಸಾರಭಾಗ; ಉತ್ಕೃಷ್ಟಭಾಗ.
  2. (ಮುಖ್ಯವಾಗಿ ಪ್ರಾಣಿಗಳ ಪುಷ್ಟಭಾಗಗಳಲ್ಲಿರುವ) ಕೊಬ್ಬು; ಚರಬಿ; ಮೇದಸ್ಸು; ನೆಣ; ವಸೆ; ಜಿಡ್ಡುಪದಾರ್ಥ.
  3. (ರಂಗಭೂಮಿ) ಒಳ್ಳೆಯ ಪಾತ್ರ; ನಟನ ಯೋಗ್ಯತೆಯನ್ನೆತ್ತಿತೋರಿಸಲು ನೆರವಾಗುವ (ಪಾತ್ರದ) ಭಾಗ.
  4. (ರಸಾಯನವಿಜ್ಞಾನ) ಕೊಬ್ಬು; ನೆಣ; ಚರಬಿ; ಮೇದಸ್ಸು; (ನಿಸರ್ಗದಲ್ಲಿ ದೊರೆಯುವ) ಗ್ಲಿಸರಾಲ್‍ ಮತ್ತು ಪರ್ಯಾಪ್ತ ಮೇದಾಮ್ಲಗಳ ಎಸ್ಟರುಗಳ ಮಿಶ್ರಣ.
  5. (ಬಹುವಚನದಲ್ಲಿ) ಕೊಬ್ಬಿದ ಪ್ರಾಣಿ; ಕೊಬ್ಬು ತುಂಬಿಕೊಂಡು ಮಾರಾಟಕ್ಕೆ ಸಿದ್ಧವಾಗಿರುವ ಮಾಂಸಲಪ್ರಾಣಿ.
  6. ಹೆಚ್ಚಾಗಿ ಮಿಕ್ಕದ್ದು; ಹೆಚ್ಚಳ; ಆಧಿಕ್ಯ; ಅಗತ್ಯವಾಗಿರುವುದಕ್ಕಿಂತ ಹೆಚ್ಚಾಗಿರುವುದು: slicing a little fat of the budget ಮುಂಗಡಪತ್ರದಲ್ಲಿನ ಹೆಚ್ಚಳವನ್ನು ಖೋತಾ ಮಾಡಿ.
  7. ಈಸಲು; ಈಸಲಾಗಿರಿಸಿದ್ದು; ಕಾಯ್ದಿರಿಸಿದ್ದು; ಕೂಡಿಟ್ಟದ್ದು.
  8. ಬೊಜ್ಜು; ಬೊಜ್ಜುತನ; ಸ್ಥೂಲಕಾಯತ್ವ.
ನುಡಿಗಟ್ಟು
  1. a bit of fat (ಆಡುಮಾತು) ಸ್ವಲ್ಪ ಅದೃಷ್ಟ; ಕೊಂಚಮಟ್ಟಿನ ಭಾಗ್ಯ.
  2. $^1$chew the fat.
  3. live on the fat of the land ಎಲ್ಲದರಲ್ಲಿಯೂ ಉತ್ತಮ ಯಾ ಉತ್ಕೃಷ್ಟವಾಗಿರುವ ಭಾಗವನ್ನು ಪಡೆ, ಅನುಭವಿಸು.
  4. the fat is in the fire
    1. ಇನ್ನೇನು ಗಲಿಬಿಲಿಯಾಗುವುದರಲ್ಲಿದೆ; ಇನ್ನು ಸ್ವಲ್ಪದರಲ್ಲೇ ಗೊಂದಲವೇಳುತ್ತದೆ, ಕೆಲಸ ಕೆಡುತ್ತದೆ.
    2. ಆದದ್ದಾಗಿಹೋಗಿದೆ, ಇನ್ನೇನೂ ಮಾಡುವಂತಿಲ್ಲ; ಒಳ್ಳೆಯದೋ ಕೆಟ್ಟದ್ದೋ ಮಾಡಿದ್ದಂತೂ ಆಗಿದೆ; ಫಲ ಬೇಯುತ್ತಿದೆ; ಕೆಲಸ ಕೈಈರಿದೆ. ಪರಿಣಾಮ ಸಿದ್ಧವಾಗುತ್ತಿದೆ.
    3. ಕೋಪ – ಕೆರಳುವುದರಲ್ಲಿದೆ, ಸ್ಫೋಟವಾಗುವುದರಲ್ಲಿದೆ.
See also 1fat  2fat
3fat ಹ್ಯಾಟ್‍
ಸಕರ್ಮಕ ಕ್ರಿಯಾಪದ
  1. ಕೊಬ್ಬಿಸು; (ಮುಖ್ಯವಾಗಿ ಆಹಾರಕ್ಕಾಗಿ ಪ್ರಾಣಿಗಳನ್ನು) ಪುಷ್ಟಿಗೊಳಿಸು.
  2. (ಕೊಬ್ಬನ್ನು ಹಚ್ಚಿ) ಚರ್ಮ – ಹದಮಾಡು, ಪರಿಷ್ಕರಿಸು.
  3. ಎಣ್ಣೆ, ಜಿಡ್ಡು, ಮೊದಲಾದವನ್ನು ತುಂಬಿ ಬೆರಸಿ, ಸೇರಿಸಿ – ತಯಾರಿಸು: a well fatted soap ಚೆನ್ನಾಗಿ ಕೊಬ್ಬು ಸೇರಿಸಿದ ಸೋಪು.
ಅಕರ್ಮಕ ಕ್ರಿಯಾಪದ

ಕೊಬ್ಬು; ಕೊಬ್ಬಿಬೆಳೆ; ಬೊಜ್ಜುಬೆಳೆ; ಮೈತುಂಬಿಕೊ.

ನುಡಿಗಟ್ಟು

kill the fatted calf ಔತಣ ಏರ್ಪಡಿಸು; ಉತ್ಸವ ಆಚರಿಸು; ಸಮಾರಂಭ ಏರ್ಪಡಿಸು; ಮುಖ್ಯವಾಗಿ ಹಿಂದಿರುಗಿ ಬಂದ ಪತಿತನನ್ನು ಸ್ವಾಗತಿಸು, ಸಂತೋಷದಿಂದ ಬರಮಾಡಿಕೊ.