See also 1fat  3fat
2fat ಹ್ಯಾಟ್‍
ನಾಮವಾಚಕ
  1. (ಯಾವುದರದೇ) ಸಾರಭಾಗ; ಉತ್ಕೃಷ್ಟಭಾಗ.
  2. (ಮುಖ್ಯವಾಗಿ ಪ್ರಾಣಿಗಳ ಪುಷ್ಟಭಾಗಗಳಲ್ಲಿರುವ) ಕೊಬ್ಬು; ಚರಬಿ; ಮೇದಸ್ಸು; ನೆಣ; ವಸೆ; ಜಿಡ್ಡುಪದಾರ್ಥ.
  3. (ರಂಗಭೂಮಿ) ಒಳ್ಳೆಯ ಪಾತ್ರ; ನಟನ ಯೋಗ್ಯತೆಯನ್ನೆತ್ತಿತೋರಿಸಲು ನೆರವಾಗುವ (ಪಾತ್ರದ) ಭಾಗ.
  4. (ರಸಾಯನವಿಜ್ಞಾನ) ಕೊಬ್ಬು; ನೆಣ; ಚರಬಿ; ಮೇದಸ್ಸು; (ನಿಸರ್ಗದಲ್ಲಿ ದೊರೆಯುವ) ಗ್ಲಿಸರಾಲ್‍ ಮತ್ತು ಪರ್ಯಾಪ್ತ ಮೇದಾಮ್ಲಗಳ ಎಸ್ಟರುಗಳ ಮಿಶ್ರಣ.
  5. (ಬಹುವಚನದಲ್ಲಿ) ಕೊಬ್ಬಿದ ಪ್ರಾಣಿ; ಕೊಬ್ಬು ತುಂಬಿಕೊಂಡು ಮಾರಾಟಕ್ಕೆ ಸಿದ್ಧವಾಗಿರುವ ಮಾಂಸಲಪ್ರಾಣಿ.
  6. ಹೆಚ್ಚಾಗಿ ಮಿಕ್ಕದ್ದು; ಹೆಚ್ಚಳ; ಆಧಿಕ್ಯ; ಅಗತ್ಯವಾಗಿರುವುದಕ್ಕಿಂತ ಹೆಚ್ಚಾಗಿರುವುದು: slicing a little fat of the budget ಮುಂಗಡಪತ್ರದಲ್ಲಿನ ಹೆಚ್ಚಳವನ್ನು ಖೋತಾ ಮಾಡಿ.
  7. ಈಸಲು; ಈಸಲಾಗಿರಿಸಿದ್ದು; ಕಾಯ್ದಿರಿಸಿದ್ದು; ಕೂಡಿಟ್ಟದ್ದು.
  8. ಬೊಜ್ಜು; ಬೊಜ್ಜುತನ; ಸ್ಥೂಲಕಾಯತ್ವ.
ನುಡಿಗಟ್ಟು
  1. a bit of fat (ಆಡುಮಾತು) ಸ್ವಲ್ಪ ಅದೃಷ್ಟ; ಕೊಂಚಮಟ್ಟಿನ ಭಾಗ್ಯ.
  2. $^1$chew the fat.
  3. live on the fat of the land ಎಲ್ಲದರಲ್ಲಿಯೂ ಉತ್ತಮ ಯಾ ಉತ್ಕೃಷ್ಟವಾಗಿರುವ ಭಾಗವನ್ನು ಪಡೆ, ಅನುಭವಿಸು.
  4. the fat is in the fire
    1. ಇನ್ನೇನು ಗಲಿಬಿಲಿಯಾಗುವುದರಲ್ಲಿದೆ; ಇನ್ನು ಸ್ವಲ್ಪದರಲ್ಲೇ ಗೊಂದಲವೇಳುತ್ತದೆ, ಕೆಲಸ ಕೆಡುತ್ತದೆ.
    2. ಆದದ್ದಾಗಿಹೋಗಿದೆ, ಇನ್ನೇನೂ ಮಾಡುವಂತಿಲ್ಲ; ಒಳ್ಳೆಯದೋ ಕೆಟ್ಟದ್ದೋ ಮಾಡಿದ್ದಂತೂ ಆಗಿದೆ; ಫಲ ಬೇಯುತ್ತಿದೆ; ಕೆಲಸ ಕೈಈರಿದೆ. ಪರಿಣಾಮ ಸಿದ್ಧವಾಗುತ್ತಿದೆ.
    3. ಕೋಪ – ಕೆರಳುವುದರಲ್ಲಿದೆ, ಸ್ಫೋಟವಾಗುವುದರಲ್ಲಿದೆ.