See also 2chew
1chew ಚೂ
ಸಕರ್ಮಕ ಕ್ರಿಯಾಪದ
  1. (ಹಲ್ಲಿನಿಂದ) ಅಗಿ; ಜಗಿ; ನುಣ್ಣಗೆ ಅಗಿ; ಕಚ್ಚುಕಚ್ಚಾಗುವಂತೆ ಕಡಿ.
  2. ಮೆಲುಕು ಹಾಕು; ತಿರುತಿರುಗಿ ಯೋಚಿಸು; ಮನಸ್ಸಿನಲ್ಲಿ ತಿರುವಿ ಹಾಕು.
  3. ಚಿಂತನೆ ಮಾಡು; ಮಥನ ಮಾಡು; ಧ್ಯಾನಿಸು.
  4. ಚರ್ಚಿಸು.
ಅಕರ್ಮಕ ಕ್ರಿಯಾಪದ
  1. ಅಗಿ; ಜಗಿ; ಕಡಿ.
  2. ಹೊಗೆಸೊಪ್ಪು, ವೀಳ್ಯ–ಅಗಿ.
  3. ಚಿಂತಿಸು; ಮಥನ ಮಾಡು.
ನುಡಿಗಟ್ಟು
  1. chew out (ಅಮೆರಿಕನ್‍ ಪ್ರಯೋಗ) (ಆಡುಮಾತು) ಛೀಮಾರಿ ಹಾಕು.
  2. chew the cud ಮೆಲಕು ಹಾಕು; ಮೆಲುಕಾಡಿಸು:
    1. ನೆಮರು ಹಾಕು; (ಹಸು ಮೊದಲಾದವುಗಳಂತೆ) ಅರೆ ಜೀರ್ಣಿಸಿದ ಆಹಾರವನ್ನು ಮರಳಿ ಬಾಯಿಗೆ ತಂದುಕೊಂಡು ಅಗಿ.
    2. ಮಥನ ಮಾಡು; ಮರಳಿ ಮರಳಿ ಮನಸ್ಸಿನಲ್ಲಿ ತಿರುವಿ ಹಾಕು.
  3. chew the fat (ಅಶಿಷ್ಟ)
    1. ವಿಷಯ ಚರ್ಚಿಸು.
    2. (ಬ್ರಿಟಿಷ್‍ ಪ್ರಯೋಗ) ಹಳೆಯ ದೂರು ಹೇಳಿಕೊ; ಹಳೆಯ ಬೇಗುದಿ ತೋಡಿಕೊ; ಹಳೆಯ ಅಸಮಾಧಾನವನ್ನು, ಅತೃಪ್ತಿಯನ್ನು ಪುನಃ ವ್ಯಕ್ತಪಡಿಸು; ಹಳೆಯ ಕಡತ ಬಿಚ್ಚು ಯಾ ತೆಗೆ.
  4. chew the rag = ನುಡಿಗಟ್ಟು (3).
  5. like a piece of chewed string (ಆಡುಮಾತು) ಬಳಲಿ ಬೆಂಡಾಗಿರುವ; ದಣಿದು ದುರ್ಬಲವಾಗಿರುವ; ಆಯಾಸ, ನಿಶ್ಯಕ್ತಿಗಳಿಂದ ಕೂಡಿದ.