See also 2fat  3fat
1fat ಹ್ಯಾಟ್‍
ಗುಣವಾಚಕ
  1. (ಪ್ರಾಣಿಯ ವಿಷಯದಲ್ಲಿ) ಕೊಬ್ಬಿದ; ಕೊಬ್ಬಿಸಿದ; ಪುಷ್ಟಿಗೊಳಿಸಿದ; (ಆಹಾರಕ್ಕಾಗಿ) ಕೊಬ್ಬುವಂತೆ ಬೆಳೆಸಿದ; ಚೆನ್ನಾಗಿ – ಮೇಯಿಸಿದ, ತಿನ್ನಿಸಿದ.
  2. ದುಂಡುದುಂಡಾಗಿರುವ; ಪುಷ್ಟ; ಮೈತುಂಬಿಕೊಂಡಿರುವ.
  3. ಬೊಜ್ಜುಳ್ಳ; ಬೊಜ್ಜುಮೈಯ; ಬೊಜ್ಜುಬೆಳೆಸಿದ; ಸ್ಥೂಲ ಕಾಯದ.
  4. (ಮುಖ್ಯವಾಗಿ ಅಚ್ಚು ಮೊಳೆಗಳ ವಿಷಯದಲ್ಲಿ) ದಪ್ಪ; ಸ್ಥೂಲ; ಅಗಲವಾದ ಅಕ್ಷರಗಳುಳ್ಳ.
  5. ದಪ್ಪನೆಯ; ಉಬ್ಬಿದ: fat purse ದಪ್ಪನೆಯ (ತುಂಬಾ ಹಣವಿರುವ) ಹಣದ ಚೀಲ.
  6. ಜಿಡ್ಡುಳ್ಳ; ಜಿಡ್ಡಿನ; ಜಿಡ್ಡಾದ; ಎಣ್ಣೆಯುಳ್ಳ; ಎಣ್ಣೆಯ; ಕೊಬ್ಬುಳ್ಳ; ಕೊಬ್ಬಿನ; ಮೇದಸ್ಸಿನ; ನೆಣವುಳ್ಳ; ಮೇದಸ್ಸುಳ್ಳ.
  7. (ಕಲ್ಲಿದ್ದಲಿನ ವಿಷಯದಲ್ಲಿ) ಬಿಟ್ಯೂಮಿನಸ್‍ ಜಾತಿಯ; ಬಿಟ್ಯುಮಿನ್‍ ಉಳ್ಳ.
  8. (ಜೇಡಿಮಣ್ಣು ಮೊದಲಾದವುಗಳ ವಿಷಯದಲ್ಲಿ) ಅಂಟಂಟಾಗಿರುವ; ಜಿಗುಟಾದ.
  9. ಫಲವತ್ತಾದ; ಹುಲುಸಾದ; ಸಮೃದ್ಧವಾದ; ತುಂಬು ಫಲದ: fat lands ಫಲವತ್ತಾದ ಜಈನು.
  10. ತುಂಬ ವರಮಾನದ; ತುಂಬು ಆದಾಯದ: fat job ತುಂಬ ವರಮಾನದ ಉದ್ಯೋಗ.
  11. ಮಂದಬುದ್ಧಿಯ; ಮದಡ; ಜಡ; ಅಲಸ; ಸೋಮಾರಿ.
  12. (ರಂಗಭೂಮಿ, ನಟನ ಪಾತ್ರದ ವಿಷಯದಲ್ಲಿ) ಕುಶಲತೆಗೆ ಯಾ ಪ್ರದರ್ಶನಕ್ಕೆ ಅವಕಾಶವಿರುವ.
ನುಡಿಗಟ್ಟು
  1. a fat chance (ಅಶಿಷ್ಟ) ಅತ್ಯಲ್ಪ ಸಾಧ್ಯತೆ; ತೀರಾ ಕಡಮೆ ಅವಕಾಶ: he has a fat chance of winning ಅವನು ಗೆಲ್ಲುವ ಸಾಧ್ಯತೆ ತೀರಾ ಕಡಮೆ.
  2. a fat lot (ಅಶಿಷ್ಟ) ಬಹಳ ಹೆಚ್ಚು; ಯಥೇಚ್ಛ; ಸಮೃದ್ಧಿ; ಭಾರಿ; ಮಹಾ (ಬಹಳ ಸ್ವಲ್ಪ ಎನ್ನುವುದಕ್ಕೆ ಸಾಮಾನ್ಯವಾಗಿ ವ್ಯಂಗ್ಯಾರ್ಥದಲ್ಲಿ ಪ್ರಯೋಗ): a fat lot they care about anyone else’s troubles! ಇನ್ನೊಬ್ಬರ ತೊಂದರೆಗಳ ಬಗ್ಗೆ ಅವರು ಬಹಳ ಲಕ್ಷ್ಯಕೊಡುತ್ತಾರೆ!
  3. cut it fat (ಅಶಿಷ್ಟ) ಪ್ರದರ್ಶನ ಮಾಡು.
  4. cut up fat (ಸಾಯುವಾಗ) ಹೆಚ್ಚು ಐಶ್ವರ್ಯ ಬಿಟ್ಟು ಹೋಗು.
  5. fat guts (ಬಯ್ಯುವಲ್ಲಿ ಬಳಸುವ ಪ್ರಯೋಗ) ಸ್ಥೂಲಕಾಯ; ದಡಿಯ; ಬೊಜ್ಜುಬೆಳೆಸಿದವನು.
  6. fat witted ಮಂದ ಬುದ್ಧಿಯ; ದಡ್ಡ.