ರಭಸದಿಂದ ಅಪ್ಪಳಿಸು; ಸಂಘಟ್ಟಿಸು; ಡಿಕ್ಕಿಹೊಡೆ; ಜೋರಾಗಿ ತಾಗು; ಚೂರುಚೂರಾಗುವಂತೆ ಬಡಿ: flowers dashed by rain ಮಳೆಯ ಹೊಡೆತಕ್ಕೆ ಎಸಳು ಮುರಿದ ಹೂಗಳು.
(ರಭಸದಿಂದ ಯಾ ಇದ್ದಕ್ಕಿದ್ದಂತೆ)
ದೂಡು; ದಬ್ಬು; ನೂಕು.
ಎಸೆ; ಬಗೆ.
ತಾಗು; ಬಡಿ; ಡಿಕ್ಕಿ ಹೊಡೆ.
(ವ್ಯಕ್ತಿ ಯಾ ವಸ್ತುವನ್ನು)
ಎತ್ತೆಸೆ; ಅಪ್ಪಳಿಸು.
ಡಿಕ್ಕಿ ಹೊಡೆಸು; ಬಡಿಸು.
(ನೀರು, ಕೆಸರು, ಮೊದಲಾದವನ್ನು) ಎರಚು; ಹಾರಿಸು; ಸಿಡಿಸು.
ಬೆರಸು; ಸೇರಿಸು; ಮಿಶ್ರಣಮಾಡು; ಬೆರಕೆ ಮಾಡು; ಸಾರ ತಗ್ಗಿಸು; ದುರ್ಬಲಗೊಳಿಸು; ಸಾರ ಕಡಿಮೆ ಮಾಡು: vinegar dashed with water ನೀರು ಬೆರೆಸಿದ ಸಿರ್ಕ. dash the truth with fiction ಸತ್ಯಕ್ಕೆ ಸುಳ್ಳು ಬೆರಸು.
ದೊಡ್ಡಗೆರೆ; ದೊಡ್ಡಗೀಟು; ಮಾರ್ಸ್ ಸಂಕೇತಲಿಪಿಯಲ್ಲಿ ಬಳಸುವ ಎರಡು ಗೆರೆಗಳಲ್ಲಿ ಉದ್ದನೆಯದು, ದೊಡ್ಡದು.
ಥಟ್ಟನೆ ಮುನ್ನುಗ್ಗುವುದು; ಕ್ಷಿಪ್ರಗತಿ.
(ಅಮೆರಿಕನ್ ಪ್ರಯೋಗ) ಓಟದ – ಪಂದ್ಯ, ಸ್ಪರ್ಧೆ: the 100 metres dash ನೂರು ಮೀಟರುಗಳ ಓಟ(ದ ಪಂದ್ಯ).
(ಸಾಹಸದಿಂದ ಕಾರ್ಯಮಾಡುವ) ಶಕ್ತಿ; ಸಾಮರ್ಥ್ಯ; ಸತ್ತ್ವ; ಛಾತಿ: ಕೆಚ್ಚು: an administrator noted for his skill and dash ಕೌಶಲ ಮತ್ತು ಸಾಮರ್ಥ್ಯಕ್ಕಾಗಿ ಹೆಸರುವಾಸಿಯಾದ ಆಡಳಿತಗಾರ.
ಮೆರೆತ; ಆಡಂಬರ; ಡೌಲು; ಡಬ್ಬು.
ನುಡಿಗಟ್ಟು
at a dash ಬೇಗನೆ; ವೇಗವಾಗಿ; ಕ್ಷಿಪ್ರವಾಗಿ.
cut a dash ಮೆರೆ; ಆಡಂಬರ ಪ್ರದರ್ಶಿಸು; ಡೌಲು ತೋರು.
make a dash for ಧಾವಿಸು; ಬೇಗ ಓಡು; ದೌಡಾಯಿಸು; ಶೀಘ್ರವಾಗಿ ತಲುಪಲು ಯತ್ನಿಸು.