See also 2dash  3dash  4dash
1dash ಡ್ಯಾಷ್‍
ಸಕರ್ಮಕ ಕ್ರಿಯಾಪದ
  1. ರಭಸದಿಂದ ಅಪ್ಪಳಿಸು; ಸಂಘಟ್ಟಿಸು; ಡಿಕ್ಕಿಹೊಡೆ; ಜೋರಾಗಿ ತಾಗು; ಚೂರುಚೂರಾಗುವಂತೆ ಬಡಿ: flowers dashed by rain ಮಳೆಯ ಹೊಡೆತಕ್ಕೆ ಎಸಳು ಮುರಿದ ಹೂಗಳು.
  2. (ರಭಸದಿಂದ ಯಾ ಇದ್ದಕ್ಕಿದ್ದಂತೆ)
    1. ದೂಡು; ದಬ್ಬು; ನೂಕು.
    2. ಎಸೆ; ಬಗೆ.
    3. ತಾಗು; ಬಡಿ; ಡಿಕ್ಕಿ ಹೊಡೆ.
  3. (ವ್ಯಕ್ತಿ ಯಾ ವಸ್ತುವನ್ನು)
    1. ಎತ್ತೆಸೆ; ಅಪ್ಪಳಿಸು.
    2. ಡಿಕ್ಕಿ ಹೊಡೆಸು; ಬಡಿಸು.
  4. (ನೀರು, ಕೆಸರು, ಮೊದಲಾದವನ್ನು) ಎರಚು; ಹಾರಿಸು; ಸಿಡಿಸು.
  5. ಬೆರಸು; ಸೇರಿಸು; ಮಿಶ್ರಣಮಾಡು; ಬೆರಕೆ ಮಾಡು; ಸಾರ ತಗ್ಗಿಸು; ದುರ್ಬಲಗೊಳಿಸು; ಸಾರ ಕಡಿಮೆ ಮಾಡು: vinegar dashed with water ನೀರು ಬೆರೆಸಿದ ಸಿರ್ಕ. dash the truth with fiction ಸತ್ಯಕ್ಕೆ ಸುಳ್ಳು ಬೆರಸು.
  6. (ಆಶೆ, ನಿರೀಕ್ಷೆ, ಯೋಜನೆ, ಮೊದಲಾದವನ್ನು) ಹಾಳುಮಾಡು; ನಾಶಮಾಡು; ಭಗ್ನಗೊಳಿಸು; ಮುರಿ; ಭಂಗತರು: dash one’s hopes ಆಶೆಯನ್ನು ನುಚ್ಚುನೂರು ಮಾಡು.
  7. ಎದೆಗುಂದಿಸು; ಅಧೈರ್ಯಗೊಳಿಸು; ಅಂಜಿಸು.
  8. ಕುಗ್ಗಿಸು; ತಗ್ಗಿಸು; ಉತ್ಸಾಹಭಂಗಮಾಡು; ನಿರುತ್ಸಾಹಗೊಳಿಸು.
  9. ಗಾಬರಿ ಹಿಡಿಸು; ದಿಕ್ಕುತೋಚದಂತೆ ಮಾಡು.
  10. (ಪತ್ರ, ಚಿತ್ರ, ಬರಹ, ಮೊದಲಾದವನ್ನು) (ಆಲೋಚಿಸದೆ) ಥಟ್ಟನೆ ಬರೆದು ಹಾಕು; ಬೇಗ ಗೀಚಿ ಹಾಕು.
  11. ಅಡಿಗೀಟು ಎಳೆ.
  12. (ಅಶಿಷ್ಟ) = 1damn ಸಕರ್ಮಕ ಕ್ರಿಯಾಪದ \((2)\).
ಅಕರ್ಮಕ ಕ್ರಿಯಾಪದ
  1. ಬಿರುಸಾಗಿ ಚಲಿಸು; ವೇಗವಾಗಿ ಓಡು; ಧಾವಿಸು.
  2. ರಭಸವಾಗಿ ಬೀಳು.
  3. ರಭಸದಿಂದ ನುಗ್ಗು.
  4. ರಭಸದಿಂದ – ಬಡಿ, ತಾಗು; ಡಿಕ್ಕಿಹೊಡೆ; ಅಪ್ಪಳಿಸು; ಡಕ್ಕಾಮುಕ್ಕಿಯಾಗು.
  5. (ಉತ್ಸಾಹದಿಂದ ಯಾ ಆಡಂಬರ ಪ್ರದರ್ಶಿಸುತ್ತಾ)
    1. ಮೆರೆ; ಮೆರೆದಾಡು; ಓಡಾಡು.
    2. ಓಡು.
    3. ಸವಾರಿ ಮಾಡು; ವಾಹನ ನಡೆಸು.