See also 1dash  3dash  4dash
2dash ಡ್ಯಾಷ್‍
ನಾಮವಾಚಕ
  1. ಅಪ್ಪಳಿಸುವಿಕೆ; ಸಂಘಟ್ಟನ; ಡಕ್ಕಾಮುಕ್ಕಿ; ಡಿಕ್ಕಿ; ಜೋರಾದ ಬಡಿತ.
  2. ನೀರಿನ ಅಪ್ಪಳಿಕೆ; ನೀರಿನ ಹೊಡೆತದ, ಅಪ್ಪಳಿಕೆಯ, ಎರಚಿಕೆಯ ಶಬ್ದ.
  3. ಬಣ್ಣದ ಪಟ್ಟೆ, ಬಳಿತ.
  4. (ಕೆಸರು ಮೊದಲಾದವುಗಳ) ಕಲೆ; ಮಚ್ಚೆ.
  5. (ದ್ರವ ಮೊದಲಾದವುಗಳ) ಲಘುಮಿಶ್ರಣ; ತುಸು ಬೆರಕೆ; ಸ್ವಲ್ಪ ಸೇರಿಸಿದ್ದು; ನಸು ಬೆರಕೆ: dash of brandy ಬ್ರಾಂದಿಯನ್ನು ನಸು ಬೆರೆಸಿದ್ದು.
  6. = dashboard.
  7. (ಅವಸರದ) ಪೆನ್ನುಗೀಟು; ಲೇಖನಿಯ ಗೆರೆ.
  8. (ಬರವಣಿಗೆ ಯಾ ಮುದ್ರಣದಲ್ಲಿ ಅರ್ಥದಲ್ಲಾಗಿರುವ ಬದಲಾವಣೆಯನ್ನು ತೋರಿಸಲು ಹಾಕುವ) ಅಡ್ಡಗೀಟು; ಅಡ್ಡಗೆರೆ.
  9. (ಬಿಟ್ಟಿರುವ ಅಕ್ಷರಗಳು, ಪದಗಳು, ಮೊದಲಾದವನ್ನು ಸೂಚಿಸುವ) ಅಡ್ಡಗೀಟು; ಅಡ್ಡಗೆರೆ.
  10. ಪ್ರಕ್ಷಿಪ್ತ ಪದ, ವಾಕ್ಯ, ಮೊದಲಾದವನ್ನು ಸೂಚಿಸಲು ಅವುಗಳ ಹಿಂದೆ ಮುಂದೆ ಹಾಕುವ ಜೋಡಿಗೆರೆಗಳು.
  11. (ಸಂಗೀತ) ಹ್ರಸ್ವ ಸ್ವರವಿಚ್ಛೇದ ಚಿಹ್ನೆ; ಸ್ವರವಿಚ್ಛೇದ ಗೆರೆಗಳಲ್ಲಿ ಚಿಕ್ಕದು.
  12. ದೊಡ್ಡಗೆರೆ; ದೊಡ್ಡಗೀಟು; ಮಾರ್ಸ್‍ ಸಂಕೇತಲಿಪಿಯಲ್ಲಿ ಬಳಸುವ ಎರಡು ಗೆರೆಗಳಲ್ಲಿ ಉದ್ದನೆಯದು, ದೊಡ್ಡದು.
  13. ಥಟ್ಟನೆ ಮುನ್ನುಗ್ಗುವುದು; ಕ್ಷಿಪ್ರಗತಿ.
  14. (ಅಮೆರಿಕನ್‍ ಪ್ರಯೋಗ) ಓಟದ – ಪಂದ್ಯ, ಸ್ಪರ್ಧೆ: the 100 metres dash ನೂರು ಮೀಟರುಗಳ ಓಟ(ದ ಪಂದ್ಯ).
  15. (ಸಾಹಸದಿಂದ ಕಾರ್ಯಮಾಡುವ) ಶಕ್ತಿ; ಸಾಮರ್ಥ್ಯ; ಸತ್ತ್ವ; ಛಾತಿ: ಕೆಚ್ಚು: an administrator noted for his skill and dash ಕೌಶಲ ಮತ್ತು ಸಾಮರ್ಥ್ಯಕ್ಕಾಗಿ ಹೆಸರುವಾಸಿಯಾದ ಆಡಳಿತಗಾರ.
  16. ಮೆರೆತ; ಆಡಂಬರ; ಡೌಲು; ಡಬ್ಬು.
ನುಡಿಗಟ್ಟು
  1. at a dash ಬೇಗನೆ; ವೇಗವಾಗಿ; ಕ್ಷಿಪ್ರವಾಗಿ.
  2. cut a dash ಮೆರೆ; ಆಡಂಬರ ಪ್ರದರ್ಶಿಸು; ಡೌಲು ತೋರು.
  3. make a dash for ಧಾವಿಸು; ಬೇಗ ಓಡು; ದೌಡಾಯಿಸು; ಶೀಘ್ರವಾಗಿ ತಲುಪಲು ಯತ್ನಿಸು.