See also 2damn  3damn  4damn
1damn ಡ್ಯಾಮ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿ ಯಾ ವಸ್ತುವನ್ನು) ಹಾಳುಗೆಡೆ; (ವ್ಯಕ್ತಿ ಯಾ ವಸ್ತುವಿಗೆ) ಕಳಂಕ ಹಚ್ಚು; ತಲೆಯೆತ್ತದಂತೆ ತಪ್ಪು ಹೊರಿಸು.
  2. ನರಕಕ್ಕೆ ನೂಕು; ಶಪಿಸು.
  3. (ಪ್ರೇಕ್ಷಕರ ವಿಷಯದಲ್ಲಿ) (ನಾಟಕವನ್ನು) ಅನಾದರದಿಂದ ಕಾಣು; ಪುನಃ ಆಡದಂತೆ ಮಾಡು.
  4. (ದೋಷವನ್ನು ಬಹಿರಂಗವಾಗಿ ಹೇಳಿ) ಖಂಡಿಸು; ತೆಗಳು; ನಿಂದಿಸು; ದೂಷಿಸು; ತಪ್ಪು ಹೊರಿಸು; ದೋಷಾರೋಪಣೆ ಮಾಡು: the book was damned by the critics ವಿಮರ್ಶಕರು ಪುಸ್ತಕವನ್ನು ಖಂಡಿಸಿದರು.
  5. ಹಾನಿ ತರು; ನಾಶ ತರು; ಕಳಂಕ, ಭಂಗ – ತರು: a democracy is damned when its leaders are slaves ನಾಯಕರು ದಾಸರಾಗಿದ್ದರೆ ಆ ಗಣತಂತ್ರ ನಾಶವಾಗುತ್ತದೆ.
  6. (ಆಡುಮಾತು) (ಕೋಪ, ಕಿರಿಕಿರಿ, ಮೊದಲಾದವನ್ನು ಸೂಚಿಸುವಾಗ) ಶಪಿಸು; ‘ಹಾಳಾಗು’ ಎನ್ನು:damn your eyes ನಿನ್ನ ಕಣ್ಣು ಇಂಗಿ ಹೋಗ.
ಅಕರ್ಮಕ ಕ್ರಿಯಾಪದ

(ಅಸಮಾಧಾನ, ಜುಗುಪ್ಸೆ, ಆಶ್ಚರ್ಯಗಳನ್ನು ಸೂಚಿಸಲು ಸಾಮಾನ್ಯವಾಗಿ ಭಾವಸೂಚಕ ಅವ್ಯಯವಾಗಿ ಬಳಸುವ ಪದ) ಹಾಳಾಗ!

ನುಡಿಗಟ್ಟು
  1. damn all (ಅಶಿಷ್ಟ) ಏನೇನೂ, ಸ್ವಲ್ಪವೂ – ಇಲ್ಲ.
  2. damn it ಹಾಳಾಗ!
  3. damn with faint praise ಮನಸ್ಸಿಲ್ಲದ ಯಾ ನಿರುತ್ಸಾಹದ ಹೊಗಳಿಕೆಯ ಮೂಲಕ ಅಸಮ್ಮತಿ ಯಾ ಅತೃಪ್ತಿ ಸೂಚಿಸು; ಶೀತಸ್ತುತಿ ಮಾಡು.
  4. I’ll be damned (ಆಡುಮಾತು) ನನಗೆ ಆಶ್ಚರ್ಯವಾಗಿದೆ; ಇದು ನನ್ನನ್ನು ಅಚ್ಚರಿಗೊಳಿಸಿದೆ.
  5. (I’m, I’ll be) damned if I will agree ನಾನು ಒಪ್ಪಿದರೆ ಆಗ ಕೇಳು; ನಾನು ಎಂದಿಗೂ ಒಪ್ಪುವುದಿಲ್ಲ.