See also 2crank  3crank  4crank
1crank ಕ್ರಾಂಕ್‍
ನಾಮವಾಚಕ
  1. (ಯಂತ್ರಶಾಸ್ತ್ರ) ವಂಕ; ಕ್ರ್ಯಾಂಕು; ಹಿಂದಕ್ಕೂ ಮುಂದಕ್ಕೂ ಆಗುವ ಚಲನೆಯನ್ನು ಸುತ್ತುಚಲನೆಯಾಗಿಯೂ, ಸುತ್ತುಚಲನೆಯನ್ನು ಹಿಂದಕ್ಕೂ ಮುಂದಕ್ಕೂ ಆಗುವ ಚಲನೆಯಾಗಿಯೂ ಪರಿವರ್ತಿಸಲು, ಚಾಲಕದಂಡದಲ್ಲಿ ಮಾಡಿರುವ ಕೊಂಕು.
  2. ಗಂಟೆ ತೂಗುಹಾಕಲು ಬಳಸುವ ಮೊಣಕೈ ಆಕಾರದ ಸಲಕರಣೆ.
  3. ಅಪರಾಧಿಗಳು ಶಿಕ್ಷೆಯಾಗಿ ತಿರುಗಿಸಬೇಕಾದ ತಿರುಗುತಟ್ಟೆ.
See also 1crank  3crank  4crank
2crank ಕ್ರಾಂಕ್‍
ನಾಮವಾಚಕ
  1. ವಿಚಿತ್ರೋಕ್ತಿ; ವಕ್ರೋಕ್ತಿ; ಮಾತು ತಿರುಗಿಸಿ ವಿಚಿತ್ರ ಅರ್ಥಬರುವಂತೆ ಮಾಡುವುದು: quips and cranks ಟೀಕೆಗಳೂ ವಕ್ರೋಕ್ತಿಗಳೂ.
  2. ವಿಚಿತ್ರ–ಭಾವನೆ, ಕಾರ್ಯ.
  3. ವಕ್ರ; ಕೊಂಕ; ಕೊಂಗಿ; ತಿಕ್ಕಲ; ವಿಚಿತ್ರ ಯಾ ವಕ್ರ ವ್ಯಕ್ತಿ.
See also 1crank  2crank  4crank
3crank ಕ್ರಾಂಕ್‍
ಗುಣವಾಚಕ
  1. (ಸಾಮಾನ್ಯವಾಗಿ ಯಂತ್ರಗಳ ವಿಷಯದಲ್ಲಿ) ಸಡಿಲವಾದ; ಕಂಪಿಸುವ; ಅಳ್ಳಾಡುವ.
  2. (ನೌಕಾಯಾನ) ಮಗುಚಿಕೊಳ್ಳುವಂತಿರುವ; ಉರುಳುವಂತಿರುವ; ತಲೆಕೆಳಗಾಗುವಂತಿರುವ.
  3. (ವ್ಯಕ್ತಿಯ ವಿಷಯದಲ್ಲಿ) ವಕ್ರ; ವಿಚಿತ್ರ; ತಿಕ್ಕಲು; ಕೊಂಗಿಯಾದ.
  4. ಸಿಡುಕಿನ.
See also 1crank  2crank  3crank
4crank ಕ್ರಾಂಕ್‍
ಸಕರ್ಮಕ ಕ್ರಿಯಾಪದ
  1. ಕ್ರ್ಯಾಂಕಿಸು; ವಂಕಿಸು; ಕ್ರ್ಯಾಂಕ್‍ ಆಕಾರವಾಗಿ–ಬಾಗಿಸು, ಬಗ್ಗಿಸು.
  2. ಕ್ರ್ಯಾಂಕನ್ನು–ಜೋಡಿಸು, ತೊಡಿಸು.
  3. ಕ್ರ್ಯಾಂಕ್‍ (ದಂಡವನ್ನು) ತಿರುಗಿಸಿ ಎಂಜಿನ್ನನ್ನು ನಡೆಸು.
ಅಕರ್ಮಕ ಕ್ರಿಯಾಪದ

ಕ್ರ್ಯಾಂಕು ಹೊಡಿ; (ಮೋಟಾರು ಗಾಡಿಯ ಎಂಜಿನ್ನನ್ನು ನಡೆಸುವಂತೆ) ಕ್ರ್ಯಾಂಕ್‍ ತಿರುಗಿಸು.

ಪದಗುಚ್ಛ

crank up

  1. ಕ್ರ್ಯಾಂಕನ್ನು ತಿರುಗಿಸಿ (ಮೋಟಾರು ಕಾರಿನ ಎಂಜಿನ್ನನ್ನು) ಚಾಲನೆಗೊಳಿಸು; ಸ್ಟಾರ್ಟ್‍ ಮಾಡು.
  2. (ಅಶಿಷ್ಟ) ತೀವ್ರಪ್ರಯತ್ನದಿಂದ (ವೇಗ ಮೊದಲಾದವನ್ನು) ಹೆಚ್ಚಿಸು; ಏರಿಸು.