See also 2crank  3crank  4crank
1crank ಕ್ರಾಂಕ್‍
ನಾಮವಾಚಕ
  1. (ಯಂತ್ರಶಾಸ್ತ್ರ) ವಂಕ; ಕ್ರ್ಯಾಂಕು; ಹಿಂದಕ್ಕೂ ಮುಂದಕ್ಕೂ ಆಗುವ ಚಲನೆಯನ್ನು ಸುತ್ತುಚಲನೆಯಾಗಿಯೂ, ಸುತ್ತುಚಲನೆಯನ್ನು ಹಿಂದಕ್ಕೂ ಮುಂದಕ್ಕೂ ಆಗುವ ಚಲನೆಯಾಗಿಯೂ ಪರಿವರ್ತಿಸಲು, ಚಾಲಕದಂಡದಲ್ಲಿ ಮಾಡಿರುವ ಕೊಂಕು.
  2. ಗಂಟೆ ತೂಗುಹಾಕಲು ಬಳಸುವ ಮೊಣಕೈ ಆಕಾರದ ಸಲಕರಣೆ.
  3. ಅಪರಾಧಿಗಳು ಶಿಕ್ಷೆಯಾಗಿ ತಿರುಗಿಸಬೇಕಾದ ತಿರುಗುತಟ್ಟೆ.