See also 1very
2very ವೆರಿ
ಕ್ರಿಯಾವಿಶೇಷಣ
  1. (-ತಮರೂಪದ ಗುಣವಾಚಕ ದೊಡನೆ).
    1. ಅತ್ಯಂತ; ಕಟ್ಟಕಡೆಯ; ಅತ್ಯಧಿಕ; ಗರಿಷ್ಠ; ಪರಮಾವಧಿ : drink it to the very last drop ಅದನ್ನು ಕಟ್ಟಕಡೆಯ ಹನಿಯವರೆಗೂ ಕುಡಿದುಬಿಡು. the very last thing I expected (ನಿಷೇಧಾರ್ಥದಲ್ಲಿ ಮಾತ್ರ) ನಾನು ನಿರೀಕ್ಷಿಸಿದ್ದರಲ್ಲಿ ಅತ್ಯಂತ ಕಡೆಯದು (ಎಂದರೆ ಅದನ್ನು ನಾನು ನಿರೀಕ್ಷಿಸಿರಲೇ ಇಲ್ಲ). did the very best I could ನನ್ನ ಕೈಯಲ್ಲಾದ ಪರಮಾವಧಿಯನ್ನು ಮಾಡಿದೆ. did my very utmost ನನ್ನ ಅತ್ಯಧಿಕ ಪ್ರಯತ್ನವನ್ನೂ ಮಾಡಿದೆ.
    2. own ಪದದೊಡನೆ ಪೂರ್ತಿಯಾಗಿ; ಸಂಪೂರ್ಣಾರ್ಥದಲ್ಲಿ: my very own room ನನ್ನದೇ ಕೋಣೆ. you may keep it for your very own ಅದನ್ನು ನೀನು ಪೂರ್ತಿ ನಿನ್ನ ಸ್ವಂತಕ್ಕಾಗಿ ಇಟ್ಟುಕೊಳ್ಳಬಹುದು.
  2. ( ಗುಣವಾಚಕಗಳು, ವಿಶೇಷ ಕೃದಂತಗಳು ಮತ್ತು ಕ್ರಿಯಾವಿಶೇಷಣಗಳೊಡನೆ) ತುಂಬ; ಬಹಳ; ಬಹು; ಬಲು; ತೀರ: that is very easy ಅದು ಬಹಳ ಸುಲಭ. it is very annoying ಅದು ತೀರ ಕಿರಿಕಿರಿಯನ್ನುಂಟು ಮಾಡುವಂಥದು. it is very easily done ಅದನ್ನು ಬಹು ಸುಲಭವಾಗಿ ಮಾಡಬಹುದು. it is a very trying time ಇದು ತೀರ ಕಷ್ಟಕರವಾದ ಕಾಲ. it very often fails ಅದು ಬಹುವೇಳೆ ವಿಫಲವಾಗುತ್ತದೆ. we find very few instances ನಿದರ್ಶನಗಳು ದೊರಕುವುದು ತೀರ ವಿರಳ. he gives very little trouble ಅವನಿಂದಾಗುವ ಶ್ರಮ ಅತ್ಯಲ್ಪ. is very much better ಬಹುಮಟ್ಟಿಗೆ ಉತ್ತಮವಾಗಿದ್ದಾನೆ. I am very much annoyed ನನಗೆ ತೀರ ಕಿರಿಕಿರಿಯುಂಟಾಗಿದೆ.
ಪದಗುಚ್ಛ
  1. not very
    1. ತೀರ ಕಡಿಮೆ, ಅತ್ಯಲ್ಪ.
    2. ತೀರ ಅಸಂಭವ.
  2. very good (or well) (ಸಮ್ಮತಿ ಸೂಚಿಸುವಲ್ಲಿ) ಒಳ್ಳೆಯದು; ಆಗಲಿ; ಸರಿ; ಆಯಿತು.