See also 1half  2half
3half ಹಾಹ್‍
ಕ್ರಿಯಾವಿಶೇಷಣ
  1. ಅರೆಯಷ್ಟು; ಅರ್ಧ; ಅರ್ಧದಷ್ಟು; ಅರ್ಧದವರೆಗೆ: it is only half cooked ಅದು ಅರ್ಧಮಾತ್ರ ಬೆಂದಿದೆ. a half-cooked potato ಅರೆಬೆಂದ ಆಲೂಗಡ್ಡೆ.
  2. (ಸಡಿಲವಾಗಿ) ಬಹುಮಟ್ಟಿಗೆ; ಬಹುತೇಕ: half dead ಬಹುಮಟ್ಟಿಗೆ ಸತ್ತ; ಮೃತಪ್ರಾಯ. I half wish ನಾನು ಬಹುಮಟ್ಟಿಗೆ ಬಯಸುತ್ತೇನೆ. half inclined to agree ಒಪ್ಪಲು ಬಹುಮಟ್ಟಿಗೆ ಒಲವುಳ್ಳ.
  3. (ಗಂಟೆ ಮೊದಲಾದವುಗಳ ವಿಷಯದಲ್ಲಿ) ಅರ್ಧದಷ್ಟು: half past two ಎರಡೂವರೆ ಗಂಟೆ; ಎರಡು ಗಂಟೆ 30 ನಿಮಿಷ. half three (ನಾವೆ) ಮೂರೂವರೆ (ಆಳುದ್ದ).
ಪದಗುಚ್ಛ
  1. east half-south ಪೂರ್ವದಿಂದ ಅರ್ಧಬಿಂದು ದಕ್ಷಿಣಕ್ಕೆ; ಪೂರ್ವದಿಕ್ಕಿನಿಂದ $5\frac{ 5}{ 8}$ ಡಿಗ್ರಿಗಳಷ್ಟು ದಕ್ಷಿಣಕ್ಕೆ.
  2. half and half
    1. ಬೆರಕೆ ಮದ್ಯ; (ಮುಖ್ಯವಾಗಿ) ಏಲ್‍ ಮತ್ತು ಒಗಚು ಬಿಯರ್‍ ಮದ್ಯಗಳ ಮಿಶ್ರಣ.
    2. ಅರೆಬೆರಕೆ; ಒಂದು ಪದಾರ್ಥ ಅರ್ಧಭಾಗ, ಬೇರೊಂದು ಪದಾರ್ಥ ಅರ್ಧಭಾಗ ಸೇರಿರುವ, ಮಿಶ್ರವಾಗಿರುವ.
  3. half as much (or many) again.
ನುಡಿಗಟ್ಟು

not half

  1. (ಅಶಿಷ್ಟ) ತೀರ; ತುಂಬ; ಅತ್ಯಂತ; ಬಹಳ: he didn’t half swear ಅವನು ಬಹಳ ಬಯ್ದ; ಅವನು ಕಡಮೆಯೇನೂ ಬಯ್ಯಲಿಲ್ಲಿ. ‘was she annoyed’?‘not half!’ ‘ಅವಳಿಗೆ ಕಿರಿಕಿರಿಯಾಯಿತೆ?’ ‘ಅಷ್ಟಿಷ್ಟಲ್ಲ, ಬಹಳವೇ ಆಯಿತು!’
  2. ಅಷ್ಟಿಲ್ಲ; ಅಷ್ಟೂ ಇಲ್ಲ: not half long enough ಅರ್ಧದಷ್ಟೂ ಉದ್ದವಿಲ್ಲ.
  3. (ಆಡುಮಾತು) ಸ್ವಲ್ಪವೂ ಇಲ್ಲ: not half bad ಸ್ವಲ್ಪವೂ ಕೆಟ್ಟದಾಗಿಲ್ಲ.