See also 2fire
1fire ಹೈಅರ್‍
ನಾಮವಾಚಕ
  1. ಬೆಂಕಿ; ಅಗ್ನಿ; ಅನಲ.
  2. ಉರಿತ; ದಹನ.
  3. (ಅಗ್ಗಿಷ್ಟಿಕೆ, ಕುಲುಮೆ, ಮೊದಲಾದವುಗಳಲ್ಲಿ) ಬೆಂಕಿ; ಉರಿಯುತ್ತಿರುವ ಸೌದೆ, ಇದ್ದಿಲು ಮೊದಲಾದವು.
  4. ದಳ್ಳುರಿ; ವಿನಾಶಕರ ಉರಿ: forest fire ಕಾಳ್ಗಿಚ್ಚು.
  5. ಪ್ರಕಾಶ; ಪ್ರಭೆ; ಕಾಂತಿ; ತೇಜಸ್ಸು.
  6. ಸುಡುಗಾವು; ತಾಪ.
  7. ಜ್ವರ.
  8. ಭಾವಾತಿರೇಕ; ಭಾವೋದ್ವೇಗ.
  9. ಹುಮ್ಮಸ್ಸು; ಉತ್ಸಾಹ; ಆವೇಶ; ಕಾವು; ಹುರುಪು.
  10. ತೀವ್ರವಾದ (ವಿ)ಭಾವನಾಶಕ್ತಿ.
  11. ಲವಲವಿಕೆ; ಚೈತನ್ಯ.
  12. ಕವಿತಾವೇಶ; ಕವಿತಾಸ್ಪೂರ್ತಿ.
  13. ಫಿರಂಗಿ, ಗುಂಡು – ಹಾರಿಸುವುದು; ಬಂದೂಕು, ತೋಪು-ಹಾರಿಸುವುದು (ರೂಪಕವಾಗಿ ಸಹ).
ಪದಗುಚ್ಛ
  1. between two fires
    1. ಎರಡು ಉರಿಗಳ ನಡುವೆ; ಎರಡು ಕಡೆಯಿಂದಲೂ ಗುಂಡಿನೇಟಿಗೆ ಸಿಕ್ಕಿ.
    2. ಎರಡು ಕಡೆಗಳಿಂದಲೂ ಪಕ್ಷಗಳಿಂದಲೂ ಟೀಕೆಗಳು, ಆಕ್ಷೇಪಗಳು, ಮೊದಲಾದವುಗಳಿಗೆ ಸಿಕ್ಕಿ.
  2. $^1$cease fire.
  3. Greek fire(ಚರಿತ್ರೆ) ದಾಹಕ ವಸ್ತು; ಶತ್ರುಗಳ ಹಡಗುಗಳು ಮೊದಲಾದವಕ್ಕೆ ಬೆಂಕಿ ಹಚ್ಚುವ ದಹ್ಯ ಸಂಯುಕ್ತ.
  4. line of fire ಗುಂಡಿನ ನೇರ; ಗುಂಡಿನ ಹಾದಿ.
  5. miss fire
    1. (ಬಂದೂಕು) ಹಾರದಿರು; ಸಿಡಿಯದಿರು.
    2. ವಿಫಲವಾಗು; ಗುರಿತಪ್ಪು; ಉದ್ದೇಶ ಫಲಿಸದಿರು: the joke missed fire ಹಾಸ್ಯ ಚಟಾಕಿ ವಿಫಲವಾಯಿತು.
  6. open fire ಫಿರಂಗಿ, ತೋಪು, ಗುಂಡು – ಹಾರಿಸು.
  7. running fire
    1. (ಸೈನಿಕರ ಸಾಲು ಮೊದಲಾದವು ಎಡೆಬಿಡದೆ ಹಾರಿಸುವ) ಗುಂಡಿನ ಏಟುಗಳು; ಗುಂಡಿನ ಸುರಿಮಳೆ.
    2. (ರೂಪಕವಾಗಿ) ಟೀಕೆಮಳೆ; ಆಕ್ಷೇಪಧಾರೆ; ಟೀಕೆಗಳು, ಆಕ್ಷೇಪಗಳು, ಮೊದಲಾದವುಗಳ ಸುರಿಮಳೆ, ಪರಂಪರೆ.
  8. strike fire ಉಜ್ಜಿ ಯಾ ಹೊಡೆತದಿಂದ ಕಿಡಿ ಬರಿಸು.
  9. under fire
    1. ಗುಂಡಿನೇಟಿಗೆ – ಸಿಕ್ಕಿ, ಗುರಿಯಾಗಿ.
    2. (ರೂಪಕವಾಗಿ) ಟೀಕೆಗಳು, ಆಕ್ಷೇಪಗಳು, ಮೊದಲಾದವುಗಳಿಗೆ ಗುರಿಯಾಗಿ.
ನುಡಿಗಟ್ಟು
  1. burnt child dreads the fire ಕೈ ಸುಟ್ಟುಕೊಂಡ ಮಗು ಬೆಂಕಿಗೆ ಹೆದರುತ್ತದೆ; ತಪ್ಪಿನ ಫಲ ಸವಿದವ ಮತ್ತೊಮ್ಮೆ ತಪ್ಪುಮಾಡ.
  2. catch fire ಬೆಂಕಿ ಹೊತ್ತಿಕೊ; ಉರಿ – ತಗುಲು, ತಾಕು; ಕಿಚ್ಚು ಹತ್ತು; ಉರಿಯಲು ಪ್ರಾರಂಭಿಸು.
  3. fire! ಬೆಂಕಿ! ಬೆಂಕಿ! (ಬೆಂಕಿ ಬಿದ್ದಾಗ ಸಹಾಯಕ್ಕಾಗಿ ಕೂಗುವ ಕೂಗು).
  4. fire and brimstone ನರಕ ಹಿಂಸೆ; ನರಕಶಿಕ್ಷೆ; ಯಮಯಾತನೆ; ರೌರವ ನರಕ.
  5. fire and sword (ಮುಖ್ಯವಾಗಿ ಯುದ್ಧದಲ್ಲಿ ಆಕ್ರಮಣ ಮಾಡುವ ಸೈನ್ಯದ ವಿಷಯದಲ್ಲಿ) ಸುಟ್ಟುಹಾಕುವುದು ಮತ್ತು ತರಿದು ಹಾಕುವುದು; ಸುಡುವುದು ಮತ್ತು ಕೊಲ್ಲುವುದು; ದಹನ ಮತ್ತು ಕೊಲೆ.
  6. fat is in the fire ಇದರಿಂದ ದೊಡ್ಡ ಸ್ಫೋಟವೇ ಆಗುತ್ತದೆ; ಇದರಿಂದ ದೊಡ್ಡ ಅವಾಂತರವೇ, ಕೋಲಾಹಲವೇ – ಆಗುತ್ತದೆ; ಇದೊಂದು ದೊಡ್ಡರಂಪಕ್ಕೇ ಇಟ್ಟುಕೊಳ್ಳುತ್ತದೆ.
  7. fire in the (or one’s) belly ಹುರುಪು; ಉತ್ಸಾಹ; ಹೆಬ್ಬಯಕೆ; ಮಹತ್ವಾಕಾಂಕ್ಷೆ.
  8. go on fire (ಸ್ಕಾಟ್ಲಂಡ್‍ ಮತ್ತು ಐರ್ಲಂಡ್‍) = ನುಡಿಗಟ್ಟು \((2)\).
  9. go through fire and water ಉರಿಯಾಗಲಿ, ನೆರೆಯಾಗಲಿ ಅನುಭವಿಸು; ಏನೇ (ಅಪಾಯಗಳು) ಬರಲಿ ಎಲ್ಲವನ್ನೂ ಎದುರಿಸು, ಅನುಭವಿಸು.
  10. hang fire
    1. ಹಾರುವುದರಲ್ಲಿ ತಡವಾಗು; ಸಿಡಿಯುವುದರಲ್ಲಿ ನಿಧಾನವಾಗು.
    2. ಅನಿಶ್ಚಿತವಾಗಿರು; ನಿರ್ಧಾರವಾಗದಿರು: the new project is hanging fire ಹೊಸ ಯೋಜನೆ ಇನ್ನೂ ಅನಿಶ್ಚಿತವಾಗಿದೆ.
    3. ತಡವಾಗು; ನಿಧಾನವಾಗು.
    4. ಮುಂದಕ್ಕೆ ಹೋಗು; ಮುಂದೂಡಲಾಗು.
  11. heap of fire $^1$coals.
  12. make fire ಸೌದೆ, ಇದ್ದಿಲು ಮೊದಲಾದವುಗಳನ್ನು ಇಟ್ಟು ಬೆಂಕಿ ಹೊತ್ತಿಸು.
  13. make up a fire ಕುಂದುತ್ತಿರುವ ಬೆಂಕಿಗೆ ಉರುವಲು, ಸೌದೆ, ಇದ್ದಿಲು, ಮೊದಲಾದವನ್ನು – ಒಟ್ಟು, ಹಾಕು, ಒದಗಿಸು.
  14. on fire
    1. ಉರಿಯುತ್ತ; ದಹಿಸಿಹೋಗುತ್ತ.
    2. ಉದ್ರೇಕಗೊಂಡು; ಕೆಂಡಾಮಂಡಲವಾಗಿ; ಕೆರಳಿ; ರೇಗಿ.
  15. out of the frying pan into the fire ಬಾಣಲೆಯಿಂದ ಬೆಂಕಿಗೆ (ಬೀಳು); ಹನಿಗೆ ಹೆದರಿ ಹೊಳೆಗೆ (ಹಾರು); ಇಲಿಗೆ ಹೆದರಿ ಹುಲಿಗೆ (ಸಿಕ್ಕು); ಅಲ್ಪಕ್ಕಂಜಿ ಅಗಾಧಕ್ಕೆ (ತುತ್ತಾಗು).
  16. play with fire ಬೆಂಕಿಯೊಡನೆ ಸರಸವಾಡು; ಅಪಾಯಕಾರಿಯಾದ ವಿಷಯಗಳನ್ನು ಲಘುವಾಗಿ ಕಾಣು; ಅಪಾಯಕಾರಿ ವಿಷಯಗಳೊಡನೆ ಹುಡುಗಾಟಿಕೆಯಾಡು.
  17. pour oil on fire
    1. ಉರಿಯುವ ಬೆಂಕಿಗೆ ತುಪ್ಪ ಹೊಯ್ಯು; ಬೆಂಕಿ ಆರಿಸುವ ಬದಲು ಉರಿ ಹೆಚ್ಚಿಸು.
    2. ವಿರಸವನ್ನು ಹೆಚ್ಚಿಸು; ಉದ್ರಿಕ್ತಪರಿಸ್ಥಿತಿಯನ್ನು ಶಾಂತಗೊಳಿಸುವ ಬದಲು ಅದನ್ನಿನ್ನೂ ಉಲ್ಬಣಗೊಳಿಸು.
  18. set fire to
    1. ಬೆಂಕಿಹೊತ್ತಿಸು; ಉರಿಯುವಂತೆ ಮಾಡು.
    2. ಪ್ರಚೋದಿಸು; ಉದ್ರೇಕಗೊಳಿಸು.
  19. set on fire
    1. ಬೆಂಕಿಯಿಡು; ಬೆಂಕಿ ಹಚ್ಚು.
    2. ಉದ್ರೇಕಗೊಳಿಸು; ವಿರಸ ತರು.
  20. set the Thames on fire (ಬ್ರಿಟಿಷ್‍ ಪ್ರಯೋಗ) ನಂಬಲಾಗದಷ್ಟು ಅದ್ಭುತ ಕೆಲಸ ಮಾಡು; ಅಸಾಧಾರಣ ಕಾರ್ಯ ಸಾಧಿಸು.
  21. set the world on fire = ನುಡಿಗಟ್ಟು \((20)\).
  22. St. anthony’s fire.
  23. St. Elmo’s fire = corposant.
  24. strike fire ಕಿಡಿಯೆಬ್ಬಿಸು; ಉಜ್ಜುವ ಯಾ ಹೊಡೆಯುವ ಮೂಲಕ ಕಿಡಿ ಬರುವಂತೆ ಮಾಡು.
  25. take fire = ನುಡಿಗಟ್ಟು \((2)\).
  26. (there is) no smoke without fire ಬೆಂಕಿ ಇಲ್ಲದೆ ಹೊಗೆ ಇಲ್ಲ; ಬುಡವಿಲ್ಲದೆ ವದಂತಿ ಹುಟ್ಟದು.