See also 1fire
2fire ಹೈಅರ್‍
ಸಕರ್ಮಕ ಕ್ರಿಯಾಪದ
  1. (ನಾಶಮಾಡುವ ಉದ್ದೇಶದಿಂದ) ಬೆಂಕಿ ಇಡು; ಬೆಂಕಿ ಹಚ್ಚು; ಕಿಚ್ಚಿಡು.
  2. (ಸಿಡಿಮದ್ದು, ಸ್ಫೋಟಕ) ಹೊತ್ತಿಸು.
  3. (ರೂಪಕವಾಗಿ) (ಭಾವನಾಶಕ್ತಿಯನ್ನು) ಪ್ರಚೋದಿಸು; ಉತ್ತೇಜಿಸು; ಉದ್ದೀಪಿಸು.
  4. (ರೂಪಕವಾಗಿ) (ವ್ಯಕ್ತಿಯ ವಿಷಯದಲ್ಲಿ) ಉತ್ಸಾಹ ತುಂಬು; ಹುರಿದುಂಬಿಸು; ಉತ್ತೇಜಿಸು.
  5. ಹೊಳೆಯಿಸು; ಜ್ವಲಂತಗೊಳಿಸು; ಕೆಂಪೇರಿಸು.
  6. (ಮಣ್ಣಿನ ಪಾತ್ರೆಗಳು, ಇಟ್ಟಿಗೆ, ಮೊದಲಾದವನ್ನು) ಸುಡು; ಕಾಯಿಸು.
  7. (ಟೀ, ಹೊಗೆಸೊಪ್ಪುಗಳನ್ನು ಕೃತಕ ಶಾಖದಿಂದ) ಹದಮಾಡು; ಸಂಸ್ಕರಿಸು.
  8. (ಅಶ್ವವೈದ್ಯ) ಬರೆಹಾಕು; ಸೂಡುಹಾಕು.
  9. (ಕುಲುಮೆಗೆ, ಎಂಜಿನಿಗೆ, ಬಾಯ್ಲರಿಗೆ) ಉರುವಲು ತುಂಬು; ಇಂಧನ ಒದಗಿಸು.
  10. (ಸಿಡಿಮದ್ದು, ಬಂದೂಕುಗಳನ್ನು) ಸಿಡಿಸು; ಸ್ಫೋಟಿಸು; ಹಾರಿಸು.
  11. (ಬಂದೂಕು ಮೊದಲಾದವುಗಳಿಂದ ಗುಂಡು ಮೊದಲಾದ ಕ್ಷಿಪಣಿಯನ್ನು) ಹಾರಿಸು; ಉಡಾಯಿಸು (ರೂಪಕವಾಗಿ ಸಹ).
  12. (ವ್ಯಕ್ತಿಯನ್ನು)
    1. ಹೊರದೂಡು.
    2. ವಜಾಮಾಡು.
    3. ನಿರಾಕರಿಸು; ಸೇರಿಸಿಕೊಳ್ಳದಿರು.
  13. ಹಡಗಿನ ಒಂದೇ ಪಕ್ಕದ ಎಲ್ಲ ತೋಪುಗಳನ್ನು ಒಟ್ಟಿಗೆ ಹಾರಿಸು.
  14. (ತೋಪು, ಬಂದೂಕುಗಳ) ಸುರುಟಿನಿಂದ ಗೌರವ ಮೊದಲಾದವನ್ನು ಸೂಚಿಸು.
ಅಕರ್ಮಕ ಕ್ರಿಯಾಪದ
  1. (ಸ್ಫೋಟಕಗಳು, ಸುರಂಗಗಳು, ಮೊದಲಾದವುಗಳ ವಿಷಯದಲ್ಲಿ) ಬೆಂಕಿ ಹೊತ್ತಿಕೊ; ಉರಿ ಹತ್ತಿ ಸಿಡಿ.
  2. ಕಾವೇರು, ಕೆಂಡವಾಗು.
  3. (ರೂಪಕವಾಗಿ) ರೇಗಿ ಬೀಳು; ಉರಿದುಬೀಳು; ಕೆಂಡವಾಗು; ಕೆರಳು.
  4. ಕೆಂಪೇರು.
  5. (ಬಂದೂಕು ಮೊದಲಾದವುಗಳ ವಿಷಯದಲ್ಲಿ) ಹಾರು; ಸಿಡಿ.
  6. (ಅಂತರ್ದಹನಯಂತ್ರದ ಸಿಲಿಂಡರಿನ ವಿಷಯದಲ್ಲಿ) ದಹಿಸು.
ಪದಗುಚ್ಛ
  1. fire broadside
    1. ಹಡಗಿನ ಒಂದು ಪಕ್ಕದ ಎಲ್ಲ ಫಿರಂಗಿಗಳಿಂದ ಒಟ್ಟಿಗೆ ಗುಂಡುಹಾರಿಸು.
    2. (ರೂಪಕವಾಗಿ) ತೀಕ್ಷ್ಣವಾಗಿ, ಆಮೂಲಾಗ್ರವಾಗಿ – ಖಂಡಿಸು.
  2. fire off a postcard (ರೂಪಕವಾಗಿ) ಟಪಾಲುಕಾರ್ಡನ್ನು ಬರೆದು ಹಾಕಿಬಿಡು.
  3. fire off a remark (ರೂಪಕವಾಗಿ) ಒಂದು ಟೀಕೆಯನ್ನು ಮಾಡಿಬಿಡು.
  4. fire salute (ವಂದನಾರ್ಥವಾಗಿ ಅನೇಕ ತೋಪುಗಳಿಂದ ಯಾ ಬಂದೂಕುಗಳಿಂದ ಒಮ್ಮೆಲೇ) ಗುಂಡುಹಾರಿಸು; ಸುರುಟು ಹೊಡೆ.
  5. fire up ಥಟ್ಟನೆ ಕೆರಳು; ಇದ್ದಕ್ಕಿದ್ದಂತೆ ಉರಿದು ಬೀಳು; ಕಿಡಿಕಿಡಿಯಾಗು.
ನುಡಿಗಟ್ಟು
  1. fire away (ಆಡುಮಾತು)
    1. ಗುಂಡಿನ ಸುರಿಮಳೆ ಸುರಿಸಿ ಮುಗಿಸು: they fired away all their ammunition ಅವರು ಗುಂಡಿನ ಸುರಿಮಳೆಗರೆದು ಮದ್ದು ಗುಂಡುಗಳನ್ನೆಲ್ಲ ಮುಗಿಸಿಬಿಟ್ಟರು.
    2. ಲಗಾಯಿಸು; ಪ್ರಾರಂಭಿಸು; ಶುರುಮಾಡು: I am ready to answer questions, fire away ನಾನು ಪ್ರಶ್ನೆಗಳಿಗೆ ಉತ್ತರ ನೀಡಲು ಸಿದ್ಧನಾಗಿದ್ದೇನೆ, ಶುರು ಮಾಡು.
  2. fire out(ಅಮೆರಿಕನ್‍ ಪ್ರಯೋಗ)(ವ್ಯಕ್ತಿಯನ್ನು) ಹೊರಹಾಕು; ವಜಾಮಾಡು.