See also 2look  3look
1look ಲುಕ್‍
ಸಕರ್ಮಕ ಕ್ರಿಯಾಪದ
  1. ನೋಡು; ದಿಟ್ಟಿಸು; ಒಂದರ ಮೇಲೆ ಕಣ್ಣಿಡು: looked me in the eyes ನನ್ನನ್ನು ದಿಟ್ಟಿಸಿ ನೋಡಿದ.
  2. ಅವಲೋಕಿಸು; ಪರೀಕ್ಷಿಸು; ಪರಿಶೀಲಿಸು: looked me through and through ನನ್ನನ್ನು (ಮರ್ಮ ತಿಳಿದುಕೊಳ್ಳುವಂತೆ) ಪರೀಕ್ಷಿಸಿ ನೋಡಿದ.
  3. ನೋಟದಿಂದ (ಯಾವುದೇ ಭಾವ ಮೊದಲಾದವನ್ನು) – ವ್ಯಕ್ತಪಡಿಸು, ಪ್ರಕಟಿಸು, ತೋರಿಸು, ಬೆದರಿಸು ಯಾ ಹೆದರಿಸು: look compassion ಕರುಣೆಯಿಂದ ನೋಡು. look death ಕೊಲ್ಲುವಂತೆ ನೋಡು.
  4. ನೋಡಿ, ನೋಡುವುದರ ಮೂಲಕ – ಖಚಿತಪಡಿಸಿಕೊ, ಖಾತರಿ ಮಾಡಿಕೊ, ನಿಶ್ಚಿತವಾಗಿ ತಿಳಿದುಕೊ: look where we are ನಾವು ಎಲ್ಲಿದ್ದೇವೆಂದು ನೋಡು, ನೋಡಿ ತಿಳಿದುಕೊ.
ಅಕರ್ಮಕ ಕ್ರಿಯಾಪದ
  1. ನೋಡು; ಕಾಣು; ಒಂದು ಕಡೆಗೆ ಕಣ್ಣು, ದೃಷ್ಟಿ – ತಿರುಗಿಸು, ಹರಿಸು, ಹಾಯಿಸು.
    1. ಕಣ್ಣಿನಿಂದ – ಅರಸು; ಹುಡುಕು; ಶೋಧನೆ ಮಾಡು: I’ll look in the morning ನಾನು ಬೆಳಿಗ್ಗೆ ಹುಡುಕುತ್ತೇನೆ.
    2. (ರೂಪಕವಾಗಿ) ಮನಸ್ಸಿನಲ್ಲಿ – ಶೋಧಿಸು, ವಿಚಾರ ಮಾಡು: instead of reforming others let us look at home ಇತರರನ್ನು ಸುಧಾರಣೆ ಮಾಡುವ ಬದಲು ನಮ್ಮನ್ನೇ ಶೋಧಿಸಿಕೊಳ್ಳೋಣ. when one looks deeper ಒಳಹೊಕ್ಕು ವಿಚಾರ ಮಾಡಿದರೆ.
  2. ಪರಿಗಣಿಸು; ಪರಿಶೀಲಿಸು; ಪರೀಕ್ಷಿಸು; ಪರಾಮರ್ಶಿಸು: we must look at the facts ನಾವು ಸತ್ಯಾಂಶಗಳನ್ನು ಪರಿಶೀಲಿಸಬೇಕು.
  3. ಹುಡುಕು; ಶೋಧಿಸು; ಅನ್ವೇಷಿಸು: Columbus was looking for a shorter route to the East ಕೊಲಂಬಸನು ಪೂರ್ವ ದೇಶಗಳಿಗೆ ಇನ್ನೂ ಹತ್ತಿರದ ಮಾರ್ಗವನ್ನು ಹುಡುಕುತ್ತಿದ್ದನು.
  4. ನಿರೀಕ್ಷಿಸು; ಇದಿರು ಯಾ ಎದುರು ನೋಡು; ಪ್ರತೀಕ್ಷಿಸು: we look to greater advances in science ನಾವು ವಿಜ್ಞಾನದಲ್ಲಿ ಇನ್ನೂ ಹೆಚ್ಚಿನ ಮುನ್ನಡೆಯನ್ನು ನಿರೀಕ್ಷಿಸುತ್ತೇವೆ.
  5. ಗಮನಿಸು; ಪರಿಗಣಿಸು; ಗಮನಕೊಡು; ಗಮನಕೊಟ್ಟು ನೋಡು: way of looking at things ವಸ್ತುಗಳನ್ನು ಗಮನಿಸುವ ರೀತಿ.
  6. (ಹಾಗೆ, ಅಂತೆ, ಆ ರೀತಿ) ಕಾಣು; ತೋರು: look grave ಗಂಭೀರವಾಗಿ ಕಾಣು. look foolish ದಡ್ಡನಂತೆ ತೋರು. look a fool ಪೆದ್ದನಂತೆ ಕಾಣಿಸು.
  7. ಗಮನಿಸು; ಪರಿಗಣಿಸು; ಗಮನದಲ್ಲಿಡು: look to the future ಭವಿಷ್ಯವನ್ನು ಗಮನದಲ್ಲಿಡು.
  8. ಎಚ್ಚರಿಕೆ ವಹಿಸು; ಜೋಕೆಯಿಂದಿರು; ಹುಷಾರಾಗಿ ನೋಡಿಕೊ; ಉಸ್ತುವಾರಿ ವಹಿಸು: look to your manners ನಿನ್ನ ನಡವಳಿಕೆಯ ವಿಷಯದಲ್ಲಿ ಎಚ್ಚರಿಕೆಯಿಂದಿರು. look to your prisoner ನಿನ್ನ ಬಂದಿಯನ್ನು ಜೋಕೆಯಿಂದ ನೋಡಿಕೊ.
  9. (ವ್ಯಕ್ತಿಯ ಯಾ ವಸ್ತುವಿನ ಮೇಲೆ) ಅವಲಂಬಿಸು; ಭರವಸೆಯಿಡು; ನೆಚ್ಚು; ನಂಬು: all look to you for help ಎಲ್ಲರೂ ಸಹಾಯಕ್ಕಾಗಿ ನಿನ್ನನ್ನು ನೆಚ್ಚಿಕೊಂಡಿದ್ದಾರೆ.
  10. ಆಶಿಸು; ನಿರೀಕ್ಷಿಸು; ಉದ್ದೇಶಿಸು; ಎದುರುನೋಡು: look to quiet in my old age ನನ್ನ ಮುಪ್ಪಿನಲ್ಲಿ ನೆಮ್ಮದಿಯನ್ನು ಎದುರುನೋಡುತ್ತೇನೆ.
  11. ಪರೀಕ್ಷಿಸು; ಪರಿಶೀಲಿಸು; ತನಿಖೆ ನಡೆಸು: the auditors are looking into the records ಲೆಕ್ಕಾಧಿಕಾರಿಗಳು ದಾಖಲೆಗಳನ್ನು ತನಿಖೆ ನಡೆಸುತ್ತಿದ್ದಾರೆ.
  12. (ವಸ್ತುವಿನ ವಿಷಯದಲ್ಲಿ)
    1. ಯಾವುದೇ ದಿಕ್ಕಿಗೆ ಯಾ ಕಡೆಗೆ – ತಿರುಗಿರು, ಮುಖಮಾಡಿಕೊಂಡಿರು, ಅಭಿಮುಖವಾಗಿರು.
    2. ಯಾವುದೇ ಕಡೆಯ – ನೋಟ ನೀಡುವಂತಿರು, ದೃಶ್ಯ ತೋರುವಂತಿರು: the window looks upon the street ಕಿಟಕಿ ಬೀದಿಯ ಕಡೆಗೆ ತೆರೆದಿದೆ, ಬೀದಿಯನ್ನು ತೋರಿಸುತ್ತದೆ; ಕಿಟಕಿಯಿಂದ ಬೀದಿ ಕಾಣಿಸುತ್ತದೆ.
  13. ಜಾಗರೂಕನಾಗಿರು; ಖಚಿತಪಡಿಸಿಕೊ; ಖಾತರಿ ಮಾಡಿಕೊಂಡಿರು.
  14. ಬಯಸು; ಆಶಿಸು; ಅಂದುಕೊ; ನಿರೀಕ್ಷಿಸು: am looking to finish this today ಇದನ್ನು ಇಂದು ಮುಗಿಸಬೇಕೆಂದಿದ್ದೇನೆ, ಮುಗಿಸಬೇಕೆಂದು ಅಂದುಕೊಂಡಿದ್ದೇನೆ.
  15. ಹಾಗಿರುವಂತೆ ಕಾಣು; ಅಂತಿರುವಂತೆ ತೋರು: look one’s age ವಯಸ್ಸಿಗೆ ತಕ್ಕಂತೆ, ಅನುಗುಣವಾಗಿ – ಕಾಣಿಸು, ತೋರು, ಕಾಣು. look oneself again ಮತ್ತೆ ಚೇತರಿಸಿಕೊಂಡಂತೆ ಕಾಣು; ಮತ್ತೆ ಸುಧಾರಿಸಿದಂತೆ ತೋರು.
ಪದಗುಚ್ಛ
  1. look about
    1. ಕಾಯುತ್ತಿರು; ನಿರೀಕ್ಷಿಸುತ್ತಿರು.
    2. ಹುಡುಕು; ಅರಸು; ಅನ್ವೇಷಿಸು: are you still looking about for a job ನೀನು ಇನ್ನೂ ಕೆಲಸ ಹುಡುಕುತ್ತಿದ್ದೀಯಾ?
    3. ಸುತ್ತಮುತ್ತ ನೋಡು; ಸುತ್ತಲೂ – ದೃಷ್ಟಿಹರಿಸು, ಕಣ್ಣುಹಾಯಿಸು.
  2. look about one
    1. ಸುತ್ತಲೂ ಕಣ್ಣುಹಾಯಿಸು; ತನ್ನ ಸುತ್ತಮುತ್ತಣ ಪರಿಸ್ಥಿತಿಗಳನ್ನು ಪರೀಕ್ಷಿಸು.
    2. (ಯೋಜನೆ ಮೊದಲಾದವನ್ನು) ಸಾವಕಾಶವಾಗಿ, ನಿಧಾನವಾಗಿ – ಮಾಡು; ಮಾಡಲು ಅವಸರಪಡಬೇಡ.
    3. ಎಚ್ಚರಿಕೆಯಿಂದಿರು; ಜಾಗ್ರತೆ ವಹಿಸು.
  3. look after
    1. ನೋಡಿಕೊ; ಸಲಹು; ರಕ್ಷಿಸು; ಕಾಪಾಡು; ಜೋಪಾನ ಮಾಡು.
    2. ಕಣ್ಣಿನಿಂದ – ಅನುಸರಿಸು, ಹಿಂಬಾಲಿಸು.
    3. ಹುಡುಕು; ಅರಸು.
  4. look ahead.
    1. (ದೋಣಿ ನಡೆಸುವವನ ವಿಷಯದಲ್ಲಿ) (ಮುಖ್ಯವಾಗಿ ವಿಧಿ ರೂಪದಲ್ಲಿ) (ದೋಣಿ ಎತ್ತ ಸಾಗುತ್ತಿದೆಯೆಂದು ತಿಳಿಯಲು) ತಿರುಗಿ, ಸುತ್ತ – ನೋಡು.
    2. ಮುಂದಾಗುವುದನ್ನು ಆಲೋಚಿಸು.
  5. look as if ಹಾಗಿರುವಂತೆ ತೋರು; ನೋಡಿದರೆ ಇರಬಹುದೇನೋ – ಎಂಬಂತೆ ಕಾಣು ಯಾ ಎಂಬ ನಂಬಿಕೆ ಹುಟ್ಟಿಸು: it looks as if he’s gone ಅವನು ಹೊರಟುಹೋದಂತೆ ಕಾಣುತ್ತದೆ.
  6. look at
    1. (ಒಂದನ್ನು) ನೋಡು.
    2. (ಒಂದಕ್ಕೆ) ಗಮನಕೊಡು.
    3. ಪರೀಕ್ಷಿಸು; ಪರಿಶೀಲಿಸು.
  7. look back
    1. ಗತಿಸಿರುವುದನ್ನು ಚಿಂತಿಸು; ಯಾವುದೋ ನಡೆದುಹೋದ ಘಟನೆಯ ಕಡೆಗೆ ಮನಸ್ಸು ತಿರುಗಿಸು; ಆಗಿಹೋಗಿರುವುದನ್ನು ಕುರಿತು ಯೋಚಿಸು: looking back on our school days ನಮ್ಮ ಶಾಲೆಯ ದಿನಗಳನ್ನು ಕುರಿತು ಯೋಚಿಸಿದಾಗ.
    2. (ಸಾಮಾನ್ಯವಾಗಿ ನಿಷೇಧಾರ್ಥಕದೊಡನೆ) (ಕೈಗೊಂಡ ಕಾರ್ಯ ಮೊದಲಾದವುಗಳ ವಿಷಯದಲ್ಲಿ) ಮುಂದುವರಿಯದಿರು; ಮುನ್ನಡೆಯದಿರು; ಪ್ರಗತಿ ಹೊಂದದಿರು; ಮುಂದುವರಿಯದೆ ನಿಂತುಬಿಡು: since then he has never looked back ಅಂದಿನಿಂದ ಅವನು ಹಿಂದಕ್ಕೆ ನೋಡಿಲ್ಲ (ಒಂದೇ ಸಮನೆ ಮುನ್ನಡೆ ಸಾಧಿಸಿದ್ದಾನೆ).
    3. (ಬ್ರಿಟಿಷ್‍ ಪ್ರಯೋಗ) ಮತ್ತೊಮ್ಮೆ ಭೇಟಿನೀಡು.
    4. ನೆನೆ; ಸ್ಮರಿಸು; ಜ್ಞಾಪಿಸಿಕೊ; ಜ್ಞಾಪಕಕ್ಕೆ, ನೆನಪಿಗೆ – ತಂದುಕೊ.
    5. (ಕೈಕೊಂಡ ಕಾರ್ಯದ ವಿಷಯದಲ್ಲಿ) (ಸಾಮಾನ್ಯವಾಗಿ ನಿಷೇಧಾರ್ಥಕದಲ್ಲಿ) ಹಿಂಜರಿ; ಹಿಂದೇಟು ಹೊಡೆ; ಅರೆಮನಸ್ಸಿನಿಂದಿರು; ಉದಾಸೀನಭಾವ ತಾಳು; ಧೈರ್ಯ, ಉತ್ಸಾಹ – ಕುಗ್ಗು.
  8. look bad = ಪದಗುಚ್ಛ \((13)\).
  9. look down
    1. ನೋಟದಿಂದ ಅಡಗಿಸು; ದೃಷ್ಟಿಯಿಂದಲೇ – ಗೆಲ್ಲು, ಅಧೀನ ಮಾಡಿಕೊ: never could look the boy down ಆ ಹುಡುಗನನ್ನು ಕಣ್ಣಿನಿಂದ (ನೋಟದಿಂದ) ಅಡಗಿಸಲು ಸಾಧ್ಯವೇ ಆಗಲಿಲ್ಲ.
    2. (ವಾಣಿಜ್ಯ) ಬೆಲೆ – ಇಳಿ, ಬಿದ್ದುಹೋಗು, ಕುಗ್ಗು: when the shares look down ಷೇರುಗಳ ಬೆಲೆಗಳು ಇಳಿಮುಖವಾದಾಗ.
    3. (ರೂಪಕವಾಗಿ) ತಾನು ಶ್ರೇಷ್ಠನೆಂದು ಭಾವಿಸು; ಇತರರನ್ನು ಕಡೆಗಣಿಸು; ಕೀಳಾಗಿ ಕಾಣು; ತಿರಸ್ಕಾರದಿಂದ ನೋಡು: they look down on all foreigners ಅವರು ಎಲ್ಲಾ ವಿದೇಶಿಯರನ್ನೂ ಕಡೆಗಣಿಸುತ್ತಾರೆ.
  10. look for $^2$trouble.
  11. look forward to (ಕಾತುರದಿಂದ ಯಾ ವಿಶೇಷ ಭಾವನೆಗಳಿಂದ, ಅನಿರೀಕ್ಷಿತ ಘಟನೆಯನ್ನು) ಎದುರು ನೋಡು; ನಿರೀಕ್ಷಿಸು; ಕಾಯು: we are looking forward to seeing you again ನಾವು ನಿಮ್ಮನ್ನು ಪುನಃ ನೋಡುವ ನಿರೀಕ್ಷೆಯಲ್ಲಿದ್ದೇವೆ.
  12. look good ಚೆನ್ನಾಗಿರುವಂತೆ, ಸುಸ್ಥಿತಿಯಲ್ಲಿರುವಂತೆ – ಕಾಣಿಸು, ತೋರು.
  13. look ill
    1. ಕಾಯಿಲೆಬಿದ್ದಂತೆ ಕಾಣು; ಅನಾರೋಗ್ಯವಿದ್ದಂತೆ ಕಾಣು.
    2. (ವಸ್ತುಗಳ ವಿಷಯದಲ್ಲಿ) ಹದಗೆಟ್ಟಿರುವ ಹಾಗೆ ಕಾಣು.
  14. look in ಹೊಕ್ಕುಹೋಗು; ಭೇಟಿಮಾಡು; ನೋಡಿಬಾ: the doctor will look in again this evening ವೈದ್ಯರು ಈ ಸಂಜೆ ಮತ್ತೆ ನೋಡಿಕೊಂಡು ಹೋಗುತ್ತಾರೆ (ಭೇಟಿ ನೀಡುವರು).
  15. look into
    1. (ಪೆಟ್ಟಿಗೆ ಮೊದಲಾದವುಗಳ) ಒಳಭಾಗವನ್ನು ಪರೀಕ್ಷಿಸು.
    2. ಪರಿಶೀಲಿಸು; ಪರೀಕ್ಷಿಸು; ತನಿಖೆ ಮಾಡು; ಶೋಧಿಸು.
  16. look like
    1. ಹೋಲು; ಸದೃಶವಾಗಿರು; ಅಂತಿರು; ಅಂತೆ – ಕಾಣು, ತೋರು; ಹೋಲಿಕೆಯಿರು.
    2. (ಬ್ರಿಟಿಷ್‍ ಪ್ರಯೋಗ) ಅಂತೆ ತೋರು; ಎಂದು ಅನಿಸು: they look like winning ಅವರು ಗೆಲ್ಲುತ್ತಾರೆಂದು ಅನಿಸುತ್ತದೆ.
    3. ಕಾಣು; ಹೆದರಿಸು ಯಾ ಭರವಸೆ ನೀಡು: it looks like rain ಮಳೆ ಬರುವಂತೆ ಕಾಣುತ್ತದೆ.
    4. ಯಾವುದೋ ಒಂದು ಇರುವಂತೆ – ತೋರು, ಕಾಣು, ಸೂಚಿಸು: it looks like rats ಇಲಿಗಳಿರುವಂತೆ ಕಾಣುತ್ತದೆ.
  17. look on
    1. (ಎಂದು) ಕಾಣು; ಭಾವಿಸು; ಗಣಿಸು; ನೋಡು; ಎಣಿಸು: looks on you as a friend ನಿನ್ನನ್ನು ಸ್ನೇಹಿತನೆಂದು ಭಾವಿಸುತ್ತಾನೆ. looked on them with disfavour ಅವರನ್ನು ದ್ವೇಷದಿಂದ ಕಂಡ.
    2. (ಸುಮ್ಮನೆ) ನೋಡುತ್ತಿರು; ಪ್ರೇಕ್ಷಕನಾಗಿರು; ಭಾಗವಹಿಸದಿರು: why don’t you play cricket instead of just looking on? ಕ್ರಿಕೆಟ್‍ ಆಟವನ್ನು ಸುಮ್ಮನೆ ನೋಡುವ ಬದಲು ನೀನು ಯಾಕೆ ಆಡಬಾರದು?
    3. (ಸ್ಥಳ, ಕೋಣೆ, ಮೊದಲಾದವುಗಳ ವಿಷಯದಲ್ಲಿ) ದೃಶ್ಯ ತೋರು; ನೋಟ ಕಾಣಿಸು: my bedroom looks on (to) the garden ನನ್ನ ಮಲಗುವ ಕೋಣೆಯಿಂದ ತೋಟ ಕಾಣಿಸುತ್ತದೆ.
  18. look on with (ಮತ್ತೊಬ್ಬನು ಓದುತ್ತಿರುವಾಗಲೇ) ಪುಸ್ತಕ ಮೊದಲಾದವನ್ನು ತಾನೂ ಜೊತೆಯಲ್ಲಿ ನೋಡು, ಓದು: may I look on with you ನಿನ್ನೊಡನೆಯೇ ನಾನು ನೋಡಲೇ (ಓದಲೇ)?
  19. look out
    1. (ಕಿಟಕಿ ಮೊದಲಾದವುಗಳಿಂದ) ಹೊರಕ್ಕೆ ನೋಡು.
    2. ತಲೆ ಹೊರಗೆ ಹಾಕಿ ನೋಡು.
    3. ಎಚ್ಚರಿಕೆಯಿಂದಿರು; ಜಾಗರೂಕತೆಯಿಂದಿರು; ಹುಷಾರಾಗಿರು: you had better look out, she is in a rage ಅವಳು ಬಹಳ ಸಿಟ್ಟಿನಲ್ಲಿದ್ದಾಳೆ, ನೀನು ಹುಷಾರಾಗಿರುವುದು ಮೇಲು.
    4. ಹುಡುಕಿ ಕೊಡು: shall look out one for you ನಿನಗೆ ಒಂದು ಹುಡುಕಿ ಕೊಡುತ್ತೇನೆ. look out some old clothes for poor relations ಬಡ ನೆಂಟರಿಗಾಗಿ ಕೆಲವು ಹಳೇ ಬಟ್ಟೆಗಳನ್ನು ಹುಡುಕಿ ತಾ.
    5. (ನಿರೀಕ್ಷಿತ ವ್ಯಕ್ತಿಗಾಗಿ) ಕಣ್ಣು ತೆರೆದುಕೊಂಡಿರು; ನೋಡುತ್ತಿರು; ಗಮನ ಹರಿಸಿರು: will you go to the station and look out for my son? ನೀನು ನಿಲ್ದಾಣಕ್ಕೆ ಹೋಗಿ ನನ್ನ ಮಗ ಬಂದನೇ ಎಂದು ನೋಡುತ್ತೀಯಾ?
    6. (ಬಿರುಗಾಳಿ ಮೊದಲಾದವಕ್ಕೆ) ಸಿದ್ಧನಾಗಿರು.
  20. look over
    1. ಒಂದೊಂದಾಗಿ, ಬಿಡಿಬಿಡಿಯಾಗಿ – ಪರೀಕ್ಷಿಸು; ಅಜಮಾಯಿಷಿ ಮಾಡು; (ಕ್ರಮವಾಗಿ) ಪರಾಮರ್ಶಿಸು: looked over the house ಮನೆಯನ್ನು ಅಜಮಾಯಿಷಿ ಮಾಡಿದ.
    2. (ದಾಖಲೆ ಮೊದಲಾದವನ್ನು) (ಮುಖ್ಯವಾಗಿ) ಸ್ಥೂಲವಾಗಿ – ನೋಡು, ಪರೀಕ್ಷಿಸು, ತನಿಖೆ ಮಾಡು: shall look it over ಸ್ಥೂಲವಾಗಿ ಪರೀಕ್ಷಿಸುತ್ತೇನೆ.
  21. look round
    1. ಸುತ್ತಲೂ ನೋಡು; ಇನ್ನೊಂದು ಕಡೆಯೂ ನೋಡು; ಪ್ರತಿಯೊಂದು ದಿಕ್ಕಿನಲ್ಲೂ, ಕಡೆಯೂ ನೋಡು.
    2. ಒಂದು ಸ್ಥಳದ ಸ್ವಾರಸ್ಯವಾದ ವಿಷಯಗಳನ್ನು, ಸ್ಥಳಗಳನ್ನು ಪರಿಶೀಲಿಸು, ನೋಡು: you must come and look round sometime ನೀನು ಬಂದು ಯವಾಗಲಾದರೂ ಎಲ್ಲ ಸ್ವಾರಸ್ಯವಾದ ಸ್ಥಳಗಳನ್ನು ನೋಡಬೇಕು.
    3. (ರೂಪಕವಾಗಿ) ಸುತ್ತಮುತ್ತ ನೋಡು; ಹಿಂದುಮುಂದು ಯೋಚಿಸು; ಪೂರ್ವಾಪರ ಆಲೋಚಿಸು; ಮುಖ್ಯವಾಗಿ ಯಾವುದೇ ಮಾರ್ಗವನ್ನು ನಿರ್ಧರಿಸಲು, ಸಾಧ್ಯಾಸಾಧ್ಯತೆಗಳು ಮೊದಲಾದವನ್ನು ಪರಿಶೀಲಿಸು, ವಿವೇಚಿಸು: looked round before deciding which car to purchase ಯಾವ ಕಾರನ್ನು ಕೊಳ್ಳಬೇಕೆಂದು ತೀರ್ಮಾನಿಸುವ ಮುನ್ನ ಎಲ್ಲಾ ಸಾಧ್ಯತೆಗಳನ್ನು ಕುರಿತು ಯೋಚಿಸಿದೆ.
  22. look sharp (ಆಜ್ಞೆ)
    1. (ಈಗಿನ ಅರ್ಥ) ತಡಮಾಡಬೇಡ; ಸ್ವಲ್ಪ ಕಾಲವನ್ನೂ ಕಳೆಯಬೇಡ; ಚುರುಕಾಗಿರು.
    2. (ಪ್ರಾಚೀನ ಪ್ರಯೋಗ) ಬಿಗಿಯಾಗಿ ಕಾವಲಿರು; ಕಟ್ಟುನಿಟ್ಟಾಗಿ ನೋಡಿಕೊ.
  23. looks to be ಅನ್ನಿಸುತ್ತದೆ; ಕಾಣುತ್ತದೆ; ತೋರುತ್ತದೆ: looks to be good ಒಳ್ಳೆಯವನಂತೆ ಕಾಣುತ್ತಾನೆ.
  24. look through
    1. (ಪುಸ್ತಕ ಮೊದಲಾದವನ್ನು) ಅಲ್ಲಲ್ಲಿ, ಮೇಲೆ ಮೇಲೆ, ಅವಸರವಸರವಾಗಿ – ನೋಡು, ಕಣ್ಣಾಡಿಸು, ಕಣ್ಣುಹಾಯಿಸು.
    2. (ನಟನೆಯನ್ನು ಯಾ ಬೂಟಾಟಿಕೆಯವನನ್ನು) ಮರ್ಮ ತಿಳಿಯುವಂತೆ, ಒಳಹೊಕ್ಕು, ದೃಷ್ಟಿಹಾಯಿಸಿ, ತೀಕ್ಷ್ಣದೃಷ್ಟಿಯಿಂದ ನೋಡು: he looks quite through the deeds of men ಅವನು ಮನುಷ್ಯರ ಕೃತ್ಯಗಳನ್ನು ಪೂರ್ತಿ ಒಳಹೊಕ್ಕು ನೋಡುತ್ತಾನೆ.
    3. ನೋಡದೆ ಇರುವಂತೆ ನಟಿಸಿ ಕಡೆಗಣಿಸು; ನೋಡಿದರೂ ನೋಡದಂತಿರು: I waved, but you just looked through me ನಾನು ಕೈಯಾಡಿಸಿದೆ, ಆದರೆ ನೀನು ನೋಡಿದರೂ ನೋಡದೆ ಇರುವಂತೆ ಇದ್ದೆ.
    4. ಕಾಣು; ಕಾಣಿಸಿಕೊಳ್ಳು; ಗೋಚರಿಸು; ಪ್ರಕಟಿಸಿಕೊ; ವ್ಯಕ್ತವಾಗು: his greed looks through his eyes ಅವನ ದುರಾಶೆ ಅವನ ಕಣ್ಣುಗಳಲ್ಲಿ ಕಾಣುತ್ತದೆ.
    5. ಸಮಗ್ರವಾಗಿ, ಸಂಪೂರ್ಣವಾಗಿ, ಪೂರ್ತಿ - ನೋಡು; ಮುಖ್ಯವಾಗಿ ಆಮೂಲಾಗ್ರವಾಗಿ, ಕೂಲಂಕಷವಾಗಿ, ಆದ್ಯಂತವಾಗಿ – ಪರಿಶೀಲಿಸು: if one looks through Indian history ಯಾರಾದರೂ ಭಾರತದ ಇತಿಹಾಸವನ್ನು ಸಮಗ್ರವಾಗಿ ನೋಡಿದರೆ.
  25. look to = look (ಅಕರ್ಮಕ ಕ್ರಿಯಾಪದ 9, 10).
  26. look towards
    1. (ಆಡುಮಾತು) ಆರೋಗ್ಯವಾಗಿರಲೆಂದು ಹರಸಿ ಕುಡಿ; ಶುಭಕೋರಿ ಪಾನಮಾಡು; ಸ್ವಸ್ತಿಪಾನಮಾಡು.
    2. (-ಒಂದರ ಕಡೆಗೆ) ಮುಖಮಾಡು; ತಿರುಗಿರು; ಅಭಿಮುಖವಾಗಿರು: a house looking towards the river ನದಿಯ ಕಡೆಗೆ ಮುಖಮಾಡಿಕೊಂಡಿರುವ ಮನೆ.
  27. look up
    1. (ಮುಖ್ಯವಾಗಿ ಗ್ರಂಥದಲ್ಲಿ, ಪುಸ್ತಕದಲ್ಲಿ) ವಿಷಯಕ್ಕಾಗಿ – ಹುಡುಕು, ಅರಸು, ಹುಡುಕಿನೋಡು: look up the answer in the encyclopaedia ಉತ್ತರವನ್ನು ವಿಶ್ವಕೋಶದಲ್ಲಿ ಹುಡುಕು.
    2. (ಆಡುಮಾತು) (ವ್ಯಕ್ತಿಯನ್ನು) ಭೇಟಿಯಾಗು; ಸಂದರ್ಶಿಸು; ಹೋಗಿ ನೋಡು: to look up an old friend ಹಳೆಯ ಸ್ನೇಹಿತನನ್ನು ಭೇಟಿಯಾಗಲು. had intended to look them up ಅವರನ್ನು ಭೇಟಿಯಾಗಬೇಕೆಂಬ ಉದ್ದೇಶವಿಟ್ಟುಕೊಂಡಿದ್ದ.
    3. ಕಣ್ಣೆತ್ತು; ದೃಷ್ಟಿಯೆತ್ತು; ಕಣ್ಣೆತ್ತಿ ನೋಡು: he looked up when I went in ನಾನು ಒಳಗೆ ಹೋದಾಗ ಕಣ್ಣೆತ್ತಿ ನೋಡಿದ.
    4. (ಮುಖ್ಯವಾಗಿ ವಾಣಿಜ್ಯ, ಬೆಳೆ, ಅಭಿವೃದ್ಧಿ ಯಾ ಯೋಗಕ್ಷೇಮಗಳಲ್ಲಿ) ಹೆಚ್ಚು; ಏರು; ಉತ್ತಮವಾಗು; ಊರ್ಜಿತವಾಗು; ಏಳಿಗೆಯಾಗು; ಅಭಿವೃದ್ಧಿಗೆ ಬರು: business is looking up ವ್ಯಾಪಾರ ಹೆಚ್ಚುತ್ತಿದೆ. oil prices are looking up ಎಣ್ಣೆ ಧಾರಣೆ ಏರುತ್ತಿದೆ.
  28. look upon ಭಾವಿಸು; ಪರಿಗಣಿಸು; ಅಭಿಪ್ರಾಯ ಹೊಂದಿರು; ನಿರ್ದಿಷ್ಟ ಭಾವನೆಯಿಂದ ನೋಡು: each family looked upon this zone as personal property ಒಂದೊಂದು ಕುಟುಂಬವೂ ಈ ವಲಯವನ್ನು ವೈಯಕ್ತಿಕ ಆಸ್ತಿಯಾಗಿ ಭಾವಿಸಿತು.
  29. look well
    1. ಆರೋಗ್ಯ ಚೆನ್ನಾಗಿರುವಂತೆ ಕಾಣು.
    2. (ವಸ್ತುಗಳ ವಿಷಯದಲ್ಲಿ) ಸರಿಯಾಗಿರುವಂತೆ, ಒಳ್ಳೆಯ ಸ್ಥಿತಿಯಲ್ಲಿರುವಂತೆ – ಕಾಣು; ಚೆನ್ನಾಗಿ ನಡೆಯುತ್ತಿರುವಂತೆ ತೋರು.
  30. look you! (ಈ ವಿಷಯ) ಗಮನಿಸು! ನೋಡು! ಜೋಕೆ! ಲಕ್ಷ್ಯವಿಡು!
  31. to look at ಹೊರನೋಟಕ್ಕೆ; ಬಾಹ್ಯದೃಷ್ಟಿಗೆ; ಹೊರರೂಪದಲ್ಲಿ: innocent to look at ನೋಡಿದರೆ ಸಾಧುವಾಗಿ; ಹೊರನೋಟಕ್ಕೆ ಮುಗ್ಧನಾಗಿ, ನಿರಪಾಯನಾಗಿ.
  32. to look at him etc. ಅವನ ಮುಖ, ಚಹರೆ, ಮೊದಲಾದವನ್ನು ನೋಡಿ – ಹೇಳುವುದಾದರೆ, ನಿರ್ಧರಿಸುವುದಾದರೆ; ಅವನನ್ನು ನೋಡಿದರೆ.
ನುಡಿಗಟ್ಟು
  1. I will not look at ಕಣ್ಣೆತ್ತಿ ನೋಡುವುದಿಲ್ಲ; ಮುಟ್ಟುವುದಿಲ್ಲ; ತೆಗೆದುಕೊಳ್ಳಲು ಒಪ್ಪುವುದಿಲ್ಲ; ತಿರಸ್ಕರಿಸುತ್ತೇನೆ; ನಿರಾಕರಿಸುವೆನು; ತುಚ್ಛೀಕರಿಸುತ್ತೇನೆ.
  2. look a gift horse in the mouth ದಾನಕೊಟ್ಟ ಕುದುರೆಯ ಹಲ್ಲು ಎಣಿಸು; ದಾನಕೊಟ್ಟ ಎಮ್ಮೆಯ ಹಲ್ಲು ಹಿಡಿದು ನೋಡು; ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳಹಾಕು; ದಾನವಾಗಿ ಕೊಟ್ಟಿದ್ದರಲ್ಲಿ ಹುಳುಕು ಹುಡುಕು.
  3. look alive (ಆಜ್ಞೆ) ತ್ವರೆ ಮಾಡು; ಜಾಗ್ರತೆಯಾಗಿ ಮಾಡು; ಬೇಗ ಬೇಗ ಮಾಡು.
  4. look a person in the eye (or eyes or face) ಒಬ್ಬನನ್ನು ಯಾ ಒಬ್ಬಳನ್ನು ನಾಚಿಕೆಯಿಲ್ಲದೆ ದುರುಗುಟ್ಟಿ ನೋಡು.
  5. look person up and down (ವ್ಯಕ್ತಿಯನ್ನು) ಮೇಲಿನಿಂದ ಕೆಳಗಿನವರೆಗೆ ದಿಟ್ಟಿಸು; ತೀಕ್ಷ್ಣವಾಗಿ, ತೀಕ್ಷ್ಣ ದೃಷ್ಟಿಯಿಂದ ಯಾ ತುಚ್ಛವಾಗಿ, ತಿರಸ್ಕಾರದಿಂದ – ನೋಡು, ಪರಿಶೀಲಿಸು.
  6. look before you leap ನೋಡಿ ನುಗ್ಗು; ದುಡುಕಿ ಕೆಲಸ ಮಾಡಬೇಡ; ನೆಗೆಯುವ ಮುನ್ನ ನೋಡು.
  7. look down on (or upon) = ನುಡಿಗಟ್ಟು \((8)\).
  8. look down one’s nose at ಮೂಗುಮುರಿ; ಮುಖ ಮುರಿ; ಅಸಡ್ಡೆ ಯಾ ಅಹಂಕಾರದಿಂದ ನೋಡು; ತಿರಸ್ಕಾರ ಯಾ ಅಹಂಭಾವದಿಂದ ಕಾಣು.
  9. look here! (ಗಮನ ಸೆಳೆಯುವ ಯಾ ಎಚ್ಚರಿಸುವ ಯಾ ಬುದ್ಧಿ ಹೇಳುವ ಮಾತಾಗಿ) ನೋಡು! ಇಗೋ!
  10. look lively = ನುಡಿಗಟ್ಟು \((3)\).
  11. look (one, death, etc.) in the face (ವ್ಯಕ್ತಿ, ಮೃತ್ಯು, ಮೊದಲಾದವನ್ನು) ಧೈರ್ಯವಾಗಿ ಎದುರಿಸು; ಮುಖಾಮುಖಿ, ಮುಖ ಕೊಟ್ಟು ನೋಡು.
  12. look $^1$small.
  13. look up to ಗೌರವಿಸು; ಮನ್ನಣೆ ಮಾಡು; ಪೂಜ್ಯಭಾವದಿಂದ ಕಾಣು; ಮರ್ಯಾದೆಯಿಂದ ನೋಡು: they all looked up to him as their leader ಅವರೆಲ್ಲಾ ಅವನನ್ನು ತಮ್ಮ ನಾಯಕನೆಂದು ಗೌರವಿಸಿದರು.
  14. look, what you’ve done! (ಆಕ್ಷೇಪಣೆಯ ಮಾತಾಗಿ) ನೀನು ಏನು ಮಾಡಿಬಿಟ್ಟೆ, ನೋಡು!
  15. look, who’s here! (ಆಶ್ಚರ್ಯ ಸೂಚಿಸಲು) ನೋಡು, ಯಾರು ಬಂದಿದ್ದಾರೆ ಇಲ್ಲಿ!