See also 2small  3small
1small ಸ್ಮಾಲ್‍
ಗುಣವಾಚಕ
  1. ಸಣ್ಣ; ಚಿಕ್ಕ; ಪುಟ್ಟ; ದೊಡ್ಡದಲ್ಲದ; ಭಾರಿಯಲ್ಲದ; ಬೃಹತ್ತಾಗಿರದ.
  2. ತೆಳು; ಕೃಶ; ಸಣಕಲಾಗಿರುವ; ದಪ್ಪವಲ್ಲದ.
  3. (ಗಾತ್ರದಲ್ಲಿ) ಚಿಕ್ಕ; ಪುಟ್ಟ; ಕಿರು; ಸಣ್ಣ.
  4. (ಮೊತ್ತದಲ್ಲಿ) ಕಡಮೆ; ಸ್ವಲ್ಪ; ಕೊಂಚ; ತುಸು; ಅಲ್ಪ.
  5. (ಸಂಖ್ಯೆಯಲ್ಲಿ) ಅಲ್ಪ; ಕಡಮೆ; ಚಿಕ್ಕ.
  6. (ಬಲ ಯಾ ಶಕ್ತಿಯಲ್ಲಿ) ಅಲ್ಪ; ದುರ್ಬಲ.
  7. (ಪ್ರಾಮುಖ್ಯದಲ್ಲಿ) ಅಲ್ಪ; ಅಮುಖ್ಯ; ಹೆಚ್ಚು ಮಹತ್ತ್ವವಿಲ್ಲದ.
  8. ಹೆಚ್ಚಲ್ಲದ; ಅಲ್ಪ; ಸ್ವಲ್ಪ; ಕೊಂಚ: paid small attention to etiquette ನಡೆವಳಿಯ ಮರ್ಯಾದೆಗಳಿಗೆ ಹೆಚ್ಚು ಗಮನ ಕೊಡಲಿಲ್ಲ.
  9. ಕ್ಷುದ್ರ; ಕ್ಷುಲ್ಲಕ; ಸಣ್ಣ; ಸಾಮಾನ್ಯ; ಅಲ್ಪ: grew from small beginnings ಸಣ್ಣದಾಗಿ ಆರಂಭವಾಗಿ ಬೆಳೆಯಿತು. the small worries of life ಬದುಕಿನ ಸಣ್ಣಪುಟ್ಟ ತೊಂದರೆಗಳು. is only a small matter ಕೇವಲ ಅಲ್ಪ ಸಂಗತಿ. is great in small matters ಸಣ್ಣ ವಿಷಯಗಳಲ್ಲಿ ದೊಡ್ಡವ.
  10. ಸಣ್ಣ ಸಣ್ಣ; ಚಿಕ್ಕಚಿಕ್ಕ; ಚಿಕ್ಕ ಭಾಗಗಳಿಂದ ಕೂಡಿದ; ಸಣ್ಣ ಕಣಗಳನ್ನು ಹೊಂದಿರುವ: small gravel ಸಣ್ಣ ಜಲ್ಲಿ (ಕಲ್ಲು). small shot ಸಣ್ಣ ಚರೆ. small rain ತುಂತುರು ಮಳೆ; ಹನಿಮಳೆ. small ads ಸಣ್ಣ ಜಾಹೀರಾತುಗಳು.
  11. (ಕರ್ತೃವಿನ ವಿಷಯದಲ್ಲಿ) ಸಣ್ಣ ಯಾ ಚಿಕ್ಕ ಪ್ರಮಾಣದಲ್ಲಿ ಮಾಡುವ: small farmer ಸಣ್ಣ ರೈತ; ಚಿಕ್ಕ ಪ್ರಮಾಣದಲ್ಲಿ ಕೃಷಿ ಮಾಡುವವ. small shopkeeper ಸಣ್ಣ ವ್ಯಾಪಾರಿ; ಚಿಲ್ಲರೆ ಅಂಗಡಿಯವ.
  12. (ಸಮಾಜದಲ್ಲಿ) ಸಣ್ಣ; ಕೆಳವರ್ಗದ; ಬಡ; ದೀನ; ಸಾಮಾನ್ಯ; ಅಪ್ರಸಿದ್ಧ: lives in a small way ಬಡವನಂತೆ ಬಾಳುತ್ತಿದ್ದಾನೆ.
  13. ಅಲ್ಪತನದ; ಸಣ್ಣತನದ; ತುಚ್ಛ; ನೀಚ; ಕ್ಷುದ್ರ; ಉದಾರವಲ್ಲದ; ನೈತಿಕವಾಗಿ ಕೀಳು: his small spiteful nature ಅವನ ಅಸೂಯಾಪರ ಕೀಳು ಸ್ವಭಾವ. only small man would think of that at such a time ಅಂಥ ಸಮಯದಲ್ಲಿ ಒಬ್ಬ ಅಲ್ಪ ಮನುಷ್ಯ ಮಾತ್ರ ಅದನ್ನು ಯೋಚಿಸುತ್ತಾನೆ. I call it small of him to remind me of it ಅದನ್ನು ನನಗೆ ಜ್ಞಾಪಿಸುವುದು ಅವನ ಅಲ್ಪತನ ಎನ್ನುತ್ತೇನೆ.
  14. ಎಳೆಯ; ಚಿಳ್ಳೆ; ಸಣ್ಣ; ಪುಟ್ಟ; ಪೂರ್ಣವಾಗಿ ಬೆಳೆಯದ: small deer ಎಳೆಯ ಜಿಂಕೆ; ಜಿಂಕೆ ಮರಿ. a small child ಪುಟ್ಟ ಮಗು.
  15. (ಧ್ವನಿಯ ವಿಷಯದಲ್ಲಿ) ಮೆಲು; ಸಣ್ಣ; ಕ್ಷೀಣ; ದುರ್ಬಲ: small voice ಮೆಲು, ಕ್ಷೀಣ – ದನಿ.
  16. (ಪಾನೀಯ, ಮದ್ಯ, ಮೊದಲಾದವುಗಳ ವಿಷಯದಲ್ಲಿ) ತೆಳು; ಸಪ್ಪೆ; ನಿಸ್ಸಾರ; ಮದ್ಯಸಾರವಿಲ್ಲದ; ನೀರು ಬೆರೆಸಿರುವ: this beer is very small ಈ ಬಿಯರು ಮದ್ಯ ಬಹಳ ಸಪ್ಪೆ, ನೀರಾಗಿದೆ.
  17. (ವೈಶಿಷ್ಟ್ಯಸೂಚಕ ಗುಣವಾಚಕವಾಗಿ) ಚಿಕ್ಕ ಪ್ರಮಾಣದ; ಕಿರು.
  18. ಇಲ್ಲದ; ಸ್ವಲ್ಪವೂ ಇಲ್ಲದ: have small cause for gratitude ಕೃತಜ್ಞತೆಗೆ ಸ್ವಲ್ಪವೂ ಕಾರಣವಿಲ್ಲ. has small Latin ಲ್ಯಾಟಿನ್‍ ಭಾಷೆ ಗೊತ್ತಿಲ್ಲ. small wonder ಆಶ್ಚರ್ಯವೇನಿಲ್ಲ.
ಪದಗುಚ್ಛ
  1. chronicle small beer ಅಲ್ಪ ವಿಷಯಗಳನ್ನು ದೊಡ್ಡದಾಗಿರುವಂತೆ ಹೇಳು.
  2. feel small
    1. ಅವಮಾನಪಡು; ಮುಖ ಚಿಕ್ಕದು ಮಾಡಿಕೊ; ತೇಜೋವಧೆಗೆ ಒಳಗಾಗು; ಮುಖಭಂಗವಾಗು; ಅವಮಾನಕ್ಕೊಳಗಾಗು.
    2. ಅಲ್ಪನಾಗಿ ಕಾಣಿಸಿಕೊ; ಅಲ್ಪತನ ಹೊಂದಿರುವಂತೆ ಭಾವಿಸಿಕೊ, ಕಾಣಿಸಿಕೊ.
  3. in a small way
    1. ಸಣ್ಣ ಪ್ರಮಾಣದಲ್ಲಿ; ಚಿಕ್ಕದಾಗಿ.
    2. ಮಹತ್ವಾಕಾಂಯಿಲ್ಲದೆ; ಹೆಚ್ಚು ನಿರೀಕ್ಷಿಸದೆ.
    3. ಆಡಂಬರವಿಲ್ಲದೆ; ಪ್ರದರ್ಶನವಿಲ್ಲದೆ; ಹೆಚ್ಚು ಹೇಳಿಕೊಳ್ಳದೆ: contributed to scientific progress in a small way ಹೆಚ್ಚು ಆಡಂಬರವಿಲ್ಲದೆ ವೈಜ್ಞಾನಿಕ ಪ್ರಗತಿಗೆ ಕಾಣಿಕೆ ನೀಡಿದ್ದಾನೆ.
    4. ಸಣ್ಣದಾಗಿ; ಸಾಮಾನ್ಯ ರೀತಿಯಲ್ಲಿ.
  4. in small ಸ್ವಲ್ಪದರಲ್ಲಿ; ಚಿಕ್ಕದಾಗಿ; ಸಂಪವಾಗಿ; ಸಂಗ್ರಹವಾಗಿ.
  5. look = ಪದಗುಚ್ಛ \((2)\).
  6. no small ಸಾಕಷ್ಟು ಹೆಚ್ಚಾಗಿ; ಗಣನೀಯವಾಗಿ: no small excitement about it ಅದರ ಬಗ್ಗೆ ಸಾಕಷ್ಟು ಸಂಭ್ರಮ ಆಗಿತ್ತು.
  7. small and early ಕೆಲವರು ಮತ್ತು ಬೇಗ; ಸ್ವಲ್ಪ ಮತ್ತು ಶೀಘ್ರ; ಅನೌಪಚಾರಿಕ ಸಂಜೆಕೂಟ; ಸ್ವಲ್ಪ ಜನರಿದ್ದು ಬೇಗ ಮುಗಿಯುವ ಕೂಟ, ಸಮಾರಂಭ.
  8. small profits and quick returns ಅಲ್ಪ ಲಾಭ, ಕ್ಷಿಪ್ರ (ಯಾ ಶೀಘ್ರ) ವ್ಯಾಪಾರ; ಕಡಿಮೆ ಲಾಭ, ಬೇಗ ಮಾರಾಟ; (ಹೆಚ್ಚು) ವ್ಯಾಪಾರ ಮಾಡಬೇಕೆಂದಿರುವ ಅಗ್ಗದ ಅಂಗಡಿ ಮೊದಲಾದವುಗಳ ಸೂತ್ರ.
  9. small wonder ಆಶ್ಚರ್ಯಕರವಲ್ಲ.
  10. still small voice ಒಳದನಿ; ಆತ್ಮಸಾಕ್ಷಿ; ಅಂತರ್ವಾಣಿ; ಮನಸ್ಸಾಕ್ಷಿ; ಅಂತಸ್ಸಾಕ್ಷಿ.
  11. the smallest room (ಆಡುಮಾತು) ಮನೆಯೊಳಗಿನ ಕಕ್ಕಸು; ಪಾಯಿಖಾನೆ; ಶೌಚಗೃಹ.
  12. think no small beer of oneself ತನ್ನ ವಿಷಯದಲ್ಲಿ ಗರ್ವಿತ ನಾಗಿರು, ಪ್ರತಿಷ್ಠೆಯಿಂದಿರು, ಬಹಳ ಹೆಮ್ಮೆಪಡು, ಅಭಿಮಾನ ಪಡು.