See also 1look  3look
2look ಲುಕ್‍
ನಾಮವಾಚಕ
  1. ನೋಡುವುದು; ನೋಡುವಿಕೆ; ದರ್ಶನ; ಅವಲೋಕನ; ವೀಕ್ಷಣೆ.
  2. ನೋಟ; ದೃಷ್ಟಿ: a kind look ದಯಾದೃಷ್ಟಿ; ದಯೆಯ ನೋಟ.
  3. ನಸುನೋಟ; ಕುಡಿನೋಟ.
  4. (ಏಕವಚನ ಯಾ ಬಹುವಚನದಲ್ಲಿ) ರೂಪ; ಮುಖ – ಲಕ್ಷಣ, ಭಾವ, ಭಂಗಿ, ಮುದ್ರೆ: good looks ಅಂದ; ಚೆಲುವು; ಸೌಂದರ್ಯ; ಸುಂದರ ರೂಪ.
  5. (ವಸ್ತುಗಳ ವಿಷಯದಲ್ಲಿ) ತೋರ್ಕೆ; ರೂಪ; ಆಕಾರ: the place has a European look ಈ ಸ್ಥಳ ಯೂರೋಪಿನಂತಿದೆ; ಈ ಸ್ಥಳಕ್ಕೆ ಯೂರೋಪೀಯ ರೂಪವಿದೆ.
ನುಡಿಗಟ್ಟು

not like the look of ಅದರ ನೋಟವೇ, ಅದನ್ನು ನೋಡುವುದೇ ನನಗೆ ಹಿಡಿಸುವಿದಿಲ್ಲ; ಅದು ಹೆದರಿಕೆ ಯಾ ಅನುಮಾನ ಹುಟ್ಟಿಸುತ್ತದೆ.