See also 1check  3check  4check  5check  6check
2check ಚೆಕ್‍
ನಾಮವಾಚಕ
  1. (ಚದುರಂಗ) ರಾಜ ಎದುರಾಳಿಗೆ ಗುರಿಯಾಗುವುದು.
  2. ಸ್ಥಗನ; (ಚಲನೆಯನ್ನು) ಚಕ್ಕನೆ, ಥಟ್ಟನೆ–ನಿಲ್ಲಿಸುವುದು.
  3. ತಡೆ; ಅಡ್ಡಿ; ಅಡಚಣೆ; ನಿರೋಧ; ಪ್ರತಿರೋಧ.
  4. (ಸೈನ್ಯದ) ತುಸುಸೋಲು; ಸ್ವಲ್ಪ ಹಿಮ್ಮೆಟ್ಟಿಕೆ.
  5. (ಬೇಟೆಯ ನಾಯಿಗೆ) ವಾಸನೆಗಳೆತ; ವಾಸನೆ ತಪ್ಪುವುದು.
  6. ಅಂಕೆ; ಹತೋಟಿ; keep in check ಅಂಕೆಯಲ್ಲಿಡು.
  7. ನಿರೋಧಕ; ಪ್ರತಿರೋಧಕ; ಅಂಕೆಯಲ್ಲಿಡುವ ವ್ಯಕ್ತಿ ಯಾ ವಸ್ತು.
  8. (ನಿಷ್ಕೃಷ್ಟತೆ, ಶುದ್ಧತೆ, ಲೆಕ್ಕ ಮೊದಲಾದವುಗಳನ್ನು ನಿರ್ಧರಿಸಲು ಮಾಡುವ) ತಾಳೆ; ತನಿಖೆ; ಪರೀಕ್ಷೆ; ಶೋಧನೆ; ಪರಿಶೀಲನೆ; ಸರಿ ನೋಡುವುದು.
  9. ತಾಳೆ ಗುರುತು; ಸರಿ ಚಿಹ್ನೆ; ರೈಟ್‍ ಮಾರ್ಕು.
  10. (ಹಿಡಿದ ಜಾಗ, ಇಟ್ಟ ಸಾಮಾನು ಮೊದಲಾದವುಗಳ) ಗುರುತುಚೀಟಿ; ಗುರುತುಬಿಲ್ಲೆ.
  11. (ಅಮೆರಿಕನ್‍ ಪ್ರಯೋಗ) ಹೋಟೆಲು ಬಿಲ್ಲು.
  12. (ಅಮೆರಿಕನ್‍ ಪ್ರಯೋಗ) (ಇಸ್ಪೀಟಾಟದಲ್ಲಿ ಹಣದ ಬದಲು ಬಳಸುವ) ಗುಂಡಿ; ಬಿಲ್ಲೆ.
  13. (ಮರ ಮೊದಲಾದವುಗಳಲ್ಲಿ) ಬಿರುಕು ಯಾ ಐಬು.
ಪದಗುಚ್ಛ

checks and balances ಇತಿಮಿತಿಗಳು; ಪರಿಮಿತಿಗಳು; ಸರಕಾರದ ಒಂದು ವಿಭಾಗದ ವ್ಯಾಪ್ತಿಗೆ ಸೇರಿದ ವಿಷಯಗಳ ಮೇಲೆ ಬೇರೊಂದು ವಿಭಾಗ ಕ್ರಮ ಕೈಗೊಂಡಾಗ ಆ ಕ್ರಮವನ್ನು ತಿದ್ದುಪಡಿ ಮಾಡುವ ಯಾ ರದ್ದು ಮಾಡುವ ಅಧಿಕಾರವನ್ನು ಎಲ್ಲ ವಿಭಾಗಗಳಿಗೂ ನೀಡುವ ಮೂಲಕ ಪ್ರತಿಯೊಂದು ವಿಭಾಗದ ಮೇಲೂ ವಿಧಿಸಿರುವ ಪರಿಮಿತಿಗಳು, ನಿರ್ಬಂಧಗಳು.

ನುಡಿಗಟ್ಟು
  1. hand in one’s checks (ಆಡುಮಾತು) ಸಾಯು.
  2. pass in one’s checks = ನುಡಿಗಟ್ಟು \((1)\).