ಚೌಕಳಿ ಮಾಡು; ಚೌಕಳಿ ಗುರುತು ಹಾಕು: to check fabric ಬಟ್ಟೆಗೆ ಚೌಕಳಿ ಮಾಡು.
(ರಸೀತಿ ಪಡೆದು ಸಾಮಾನುಗಳನ್ನು) ಇಡು: check your hat and coat at the theatre ಚಿತ್ರಮಂದಿರದಲ್ಲಿ ನಿಮ್ಮ ಟೋಪಿ ಮತ್ತು ಕೋಟುಗಳನ್ನು ಇಡಿ.
ಅಕರ್ಮಕ ಕ್ರಿಯಾಪದ
(ಬೇಟೆ ನಾಯಿಯ ವಿಷಯದಲ್ಲಿ) ವಾಸನೆ ತಪ್ಪಿ ಯಾ ವಾಸನೆ ಹಿಡಿಯಲು–ನಿಲ್ಲು, ನಿಂತುಬಿಡು.
(ಅಮೆರಿಕನ್ ಪ್ರಯೋಗ) ತಾಳೆಯಾಗು; ಸರಿತೂಗು.
(ಅಮೆರಿಕನ್ ಪ್ರಯೋಗ) ಪರಿಶೀಲಿಸು; ತನಿಖೆ ಮಾಡು; ಪರೀಕ್ಷಿಸು.
(ಅಮೆರಿಕನ್ ಪ್ರಯೋಗ) ಒಪ್ಪಿಗೆ ಯಾ ಸಮ್ಮತಿಯನ್ನು ತಿಳಿಯಪಡಿಸು.
ನುಡಿಗಟ್ಟು
check in
(ಹೋಟೆಲ್ ಯಾ ಕಾರ್ಖಾನೆಗೆ) ಬರು; ಪ್ರವೇಶಿಸು; ತಲುಪು.
ದಾಖಲಾಗು; ವಿಮಾನದಲ್ಲಿ ಹಾರುವುದಕ್ಕೆ ಮುಂಚೆ ವಿಮಾನ ನಿಲ್ದಾಣದಲ್ಲಿ, ಯಾ ಒಂದು ಸ್ಥಳ, ಸಮಾರಂಭ ಮೊದಲಾದವುಗಳಲ್ಲಿ ಆಗಮನ ಯಾ ಹಾಜರಾತಿಯನ್ನು, ಸಾಮಾನ್ಯವಾಗಿ ದಾಖಲೆ ಪುಸ್ತಕದಲ್ಲಿ ಸಹಿ ಮಾಡುವುದರ ಮೂಲಕ, ಸೂಚಿಸು.
(ಹೋಟೆಲ್ ಯಾ ಕಾರ್ಖಾನೆಗೆ) ಬಂದದ್ದನ್ನು ದಾಖಲೆ ಮಾಡು; ಪ್ರವೇಶದಾಖಲೆ ಮಾಡು.
check out (ಅಮೆರಿಕನ್ ಪ್ರಯೋಗ)
(ಕಾರ್ಖಾನೆಯನ್ನು, ಹೋಟೆಲನ್ನು) ಬಿಡು.
(ಕಾರ್ಖಾನೆ ಯಾ ಹೋಟೆಲನ್ನು) ಬಿಡುವುದನ್ನು ದಾಖಲೆ ಮಾಡು; ನಿರ್ಗಮನ ದಾಖಲೆ ಮಾಡು.