See also 1card  2card
3card ಕಾರ್ಡ್‍
ನಾಮವಾಚಕ
  1. ಇಸ್ಪೀಟೆಲೆ; ಇಸ್ಪೀಟು; ಗಂಜೀಪು.
  2. (ಬಹುವಚನದಲ್ಲಿ) ಇಸ್ಪೀಟಾಟ ಯಾ ಇಸ್ಪೀಟು ಆಡುವುದು: play cards ಇಸ್ಪೀಟಾಡು.
  3. ಹಂಚಿಕೆ; ಯೋಜನೆ: doubtful card ಸಂದೇಹಾಸ್ಪದ ಹಂಚಿಕೆ. safe card ಸುಭದ್ರವಾದ ಯೋಜನೆ.
  4. (ಆಡುಮಾತು) ವ್ಯಕ್ತಿ; ಆಸಾಮಿ: odd card ವಿಲಕ್ಷಣ ವ್ಯಕ್ತಿ.
  5. (ಆಡುಮಾತು) ವಿಚಿತ್ರ ವ್ಯಕ್ತಿ; ವಕ್ರಮನುಷ್ಯ.
  6. (ವಿವಿಧ ಉದ್ದೇಶಗಳಿಗಾಗಿ ಬಳಸುವ) ತೆಳುರಟ್ಟು ಯಾ ದಪ್ಪ ಕಾಗದ.
  7. ಅಂಚೆ ಕಾರ್ಡು.
  8. ಪ್ರವೇಶ–ಪತ್ರ, ಚೀಟಿ.
  9. ಸದಸ್ಯತ್ವದ–ಚೀಟಿ, ಪತ್ರ.
  10. ಕರೆಪತ್ರ; ಆಹ್ವಾನ ಪತ್ರ; ಆಮಂತ್ರಣ.
  11. ವಾಣಿಜ್ಯಸಂಸ್ಥೆಯ (ಹೆಸರು, ವಿವರ ಮೊದಲಾದವನ್ನೊಳಗೊಂಡ) ಆಯತಾಕಾರದ ಚಿಕ್ಕ–ಕಾರ್ಡು, ಚೀಟಿ; ವಾಣಿಜ್ಯಸಂಸ್ಥೆ ಕಾರ್ಡು.
  12. ಭೇಟಿಚೀಟಿ; ಪರಿಚಯ ಪತ್ರ; ವಿಸಿಟಿಂಗ್‍ ಕಾರ್ಡು; ಹೆಸರುಚೀಟಿ; ಹೆಸರು, ವಿಳಾಸ ಮೊದಲಾದವುಗಳಿರುವ, ಔಪಚಾರಿಕ ಭೇಟಿಗೆ ಬದಲಾಗಿ ಕೊಡುವ ಯಾ ಇಟ್ಟು ಬರುವ–ಕಾರ್ಡು, ಚೀಟಿ.
  13. ಶುಭಾಶಯ ಕಾರ್ಡು; ಹುಟ್ಟಿದ ಹಬ್ಬ, ವಿವಾಹ, ಕ್ರಿಸ್‍ಮಸ್‍, ಮೊದಲಾದ ಸಂದರ್ಭಗಳಲ್ಲಿ ಅಭಿನಂದಿಸಲು ಯಾ ಶುಭಾಶಯಗಳನ್ನು ತಿಳಿಸಲು ಕೊಡುವ ಯಾ ಕಳುಹಿಸುವ–ಕಾರ್ಡು, ಪತ್ರ.
  14. ಪಂದ್ಯಪಟ್ಟಿ; ಸೂಚಿಪಟ್ಟಿ; ಕುಸ್ತಿ, ಕುದುರೆಜೂಜು, ಮೊದಲಾದವುಗಳಲ್ಲಿಯ ಕಾರ್ಯಕ್ರಮಗಳನ್ನು ಗುರುತಿಸಿರುವ ಚೀಟಿ.
  15. (ಕ್ರಿಕೆಟ್‍ನಲ್ಲಿ) ಸ್ಕೋರುಪಟ್ಟಿ; ಎಣಿಕೆಪಟ್ಟಿ.
  16. (ಗಾಲ್‍ ಆಟ) ಸ್ಕೋರುಪಟ್ಟಿ; ಪ್ರತಿಯೊಂದು ಕುಳಿಯಲ್ಲಿಯೂ ಆದ ಸ್ಕೋರನ್ನು ದಾಖಲೆ ಮಾಡಲು ಇಟ್ಟಿರುವ, ಕುಳಿಗಳ ಪಟ್ಟಿ.
  17. ಪ್ರಕಟನಪತ್ರ; ಸೂಚೀಪಟ್ಟಿ; ಮುದ್ರಿಸಿರುವ ಯಾ ಬರೆದಿರುವ ಸೂಚನೆ, ನಿಬಂಧನೆಗಳು ಮೊದಲಾದವುಗಳಿರುವ ತಿಳಿವಳಿಕೆ ಚೀಟಿ.
  18. (ಬಹುವಚನದಲ್ಲಿ ಆಡುಮಾತು) (ಯಜಮಾನನ ಹತ್ತಿರ ಇರುವ) ನೌಕರನ ದಾಖಲೆಗಳು.
  19. (ನಾವಿಕರ) ದಿಕ್ಸೂಚಿಬಿಲ್ಲೆ; ದಿಕ್ಕುಗಳನ್ನು ಗುರುತಿಸಿರುವ, ಗುಂಡು–ರಟ್ಟು ಯಾ ಕಾಗದ.
ಪದಗುಚ್ಛ
  1. business card = 3card(11).
  2. collecting card ಚಂದಾಪಟ್ಟಿ; ವಂತಿಗೆಚೀಟಿ; ಧಾರ್ಮಿಕ ಸಂಸ್ಥೆಗಳಿಗೆ ವಂತಿಗೆ ನೀಡಿದ ಬಗ್ಗೆ ಕೊಡುವ–ಚೀಟಿ, ಪತ್ರ.
  3. greeting card ಶುಭಾಶಯಪತ್ರ.
  4. make a card (ಇಸ್ಪೀಟಿನಲ್ಲಿ) ಒಂದು ಪಟ್ಟು–ತೆಗೆದುಕೊ, ಹೊಡೆ.
  5. visiting-card = 3card(12).
  6. wedding card ಲಗ್ನಪತ್ರಿಕೆ; ಮದುವೆಯ ಕರೆಯೋಲೆ; ವಿವಾಹದ ಆಹ್ವಾನಪತ್ರಿಕೆ.
ನುಡಿಗಟ್ಟು
  1. ask for one’s card ಚೀಟಿ ಕೇಳು; ಕೆಲಸ–ಬಿಟ್ಟು ಹೋಗಲು ಕೇಳು ಯಾ ಬಿಡುವುದಾಗಿ ತಿಳಿಸು.
  2. card up one’s sleeve ರಹಸ್ಯಯೋಜನೆ; ಮೊದಲೇ ಯೋಚಿಸಿ ಗುಟ್ಟಾಗಿಟ್ಟುಕೊಂಡಿರುವ ಹಂಚಿಕೆ.
  3. doubtful card ಖಾತ್ರಿಯಿಲ್ಲದ ವ್ಯವಸ್ಥೆ; ಫಲಿತಾಂಶ ಖಂಡಿತವಲ್ಲದ ಯೋಜನೆ.
  4. get one’s cards ಚೀಟಿ ಪಡೆ; ಕೆಲಸ ಬಿಟ್ಟು ಹೋಗುವಂತೆ ಹೇಳಿಸಿಕೊ.
  5. house of cards.
  6. in the cards (ಅಮೆರಿಕನ್‍ ಪ್ರಯೋಗ) = ನುಡಿಗಟ್ಟು \((10)\).
  7. lay (all) one’s cards on the table = ನುಡಿಗಟ್ಟು \((13)\).
  8. leave a card on ಬಂದಿದ್ದುದಾಗಿ ತಿಳಿಸು; ಭೇಟಿ ಚೀಟಿ ಬಿಟ್ಟುಬರು.
  9. one’s best card
    1. ಒಬ್ಬನ ಪ್ರಬಲವಾದ–ವಾದ ಯಾ ವಾದಾಂಶ.
    2. (ತನಗೆ ಬೇಕಾದ್ದನ್ನು ಪಡೆದುಕೊಳ್ಳುವ) ಶ್ರೇಷ್ಠಮಾರ್ಗ; ಅತ್ಯುತ್ತಮ ವಿಧಾನ.
  10. on the cards ಆಗಬಹುದಾದ; ಸಾಧ್ಯ; ಸಂಭವನೀಯ: ಸಂಭಾವ್ಯ.
  11. play one’s cards badly ವಿವೇಚನೆಯಿಲ್ಲದೆ ಕೆಲಸ ಮಾಡು; ತಲೆ ಓಡಿಸದೆ ಕೆಲಸ ಮಾಡು.
  12. play one’s cards well ವಿವೇಚಿಸಿ ಕೆಲಸ ಮಾಡು; ಯೋಚಿಸಿ, ಬುದ್ಧಿವಂತಿಕೆಯಿಂದ ಕೆಲಸ ಮಾಡು; ತಲೆ ಓಡಿಸಿ ಕೆಲಸ ಮಾಡು.
  13. put (all) one’s cards on the table (ಉದ್ದೇಶ, ಯೋಜನೆಗಳು, ಮೊದಲಾದ) ಎಲ್ಲವನ್ನೂ ಹೇಳಿಬಿಡು; ಪೂರ್ತಿ ಪ್ರಕಟಿಸಿಬಿಡು; ಯಾವುದನ್ನೂ–ಮರೆಮಾಚದಿರು, ಗುಟ್ಟಾಗಿಡದಿರು, ಗೋಪ್ಯ ಮಾಡದಿರು.
  14. queer card ವಿಚಿತ್ರ ಮನುಷ್ಯ; ವಿಲಕ್ಷಣ ಮನುಷ್ಯ.
  15. show one’s cards ಗುಟ್ಟು ಬಿಟ್ಟುಕೊಡು; ಮರ್ಮವನ್ನು ಹೊರಗೆಡಹು; ಉದ್ದೇಶ, ಅಭಿಪ್ರಾಯ ಮೊದಲಾದವನ್ನು ಬಯಲುಮಾಡು.
  16. speak by the card ಕರಾರುವಾಕ್ಕಾಗಿ ಮಾತಾಡು; ನಿಖರವಾಗಿ ಹೇಳು; ನಿಷ್ಕೃಷ್ಟವಾಗಿ ನುಡಿ.
  17. sure card ಖಂಡಿತವಾಗಿ ಗೆಲ್ಲುವ ಹೂಟ ಯಾ ವ್ಯಕ್ತಿ.
  18. the card ಸರಿಯಾದ್ದು: ನಿರೀಕ್ಷಿಸಿದ್ದು; ನಿರೀಕ್ಷಿಸಿದ ವಸ್ತು, ವಿಷಯ ಮೊದಲಾದವು.
  19. throw up one’s cards ಸೋಲೊಪ್ಪಿಕೊ; ಕೆಲಸ, ಯೋಜನೆ ಮೊದಲಾದವುಗಳನ್ನು ಕೈಬಿಡು.