1new
ನ್ಯೂ
ಗುಣವಾಚಕ
- ಹೊಸ(ದಾದ); ನವ; ನವೀನ; ನೂತನ; ಆಗ ತಾನೆ ನಿರ್ಮಿಸಿದ; ಹೊಸದಾಗಿ ಬಳಕೆಗೆ ತಂದ; ಆಗ ತಾನೆ ಕಂಡುಹಿಡಿದ; ಹೊಸದಾಗಿ – ಕೇಳಿದ, ತಿಳಿದ, ಅನುಭವಕ್ಕೆ ಬಂದ.
- ಪರಿಚಿತವಲ್ಲದ; ಗೊತ್ತಿಲ್ಲದ ideas new to us ನಮಗೆ ಗೊತ್ತಿಲ್ಲದ ವಿಚಾರಗಳು.
- ನವೀಕರಿಸಿದ.
- ತಾಜಾ.
- ಹೆಚ್ಚಿನ.
- ಸೇರಿಸಿದ.
- ಬೇರೆಯಾದ.
- ಮಾರ್ಪಾಡಾದ; the new chairman ಹೊಸ(ದಾಗಿ ಬದಲಾಯಿಸಿದ) ಅಧ್ಯಕ್ಷರು. my new tailor ನನ್ನ ಹೊಸ(ದಾಗಿ ಈಚೆಗೆ ಪರಿಚಯವಾದ) ದರ್ಜಿ.
- (ಸ್ಥಳದ ಹೆಸರುಗಳ ವಿಷಯದಲ್ಲಿ, ‘ಮೂಲದ ಹೆಸರಿಗಿಂತಲೂ ಈಚಿನ’. ‘ಈಚೆಗೆ ಸ್ಥಾಪಿಸಿದ’ ಎಂಬರ್ಥದಲ್ಲಿ) ಹೊಸ; ನವೀನ: new Orleansಹೊಸ ಆರ್ಲಿಯನ್ಸ್.
- ತಾಜಾ; ಹೊಸದಾಗಿ – ತಯಾರಿಸಿದ, ಹುಟ್ಟಿದ, ಬೆಳೆದ, ಬಂದ; ಈಗ ತಾನೇ ಮೊಟ್ಟಮೊದಲು ಬಳಸುತ್ತಿರುವ; ಇನ್ನೂ ಹಳತಾಗಿ ಹೋಗದ. new bread ತಾಜಾ ಬ್ರೆಡ್ಡು.
- (ಭಾಷೆಯ ವಿಷಯದಲ್ಲಿ) ಆಧುನಿಕ; ಮಧ್ಯಯುಗದಿಂದೀಚೆಗೆ ಬಳಕೆಗೆ ಬಂದ.
ಪದಗುಚ್ಛ
- a new life ಹೊಸ – ಬಾಳು, ಬದುಕು, ಜೀವನ; ಹಿಂದಿನ ಪರಿಸ್ಥಿತಿಗಳಿಗಿಂತ ಬಹಳ ಭಿನ್ನವಾದ ಪರಿಸ್ಥಿತಿಯಲ್ಲಿ – ಜೀವನ ನಡೆಸುವುದು.
- a new one on(ಆಡುಮಾತು) ಹೊಸದಾದ, ಹಿಂದೆಂದೂ ಕಾಣದ, ತಿಳಿಯದ – ಕಥೆ, ಸಂದರ್ಭ, ಮೊದಲಾದವು.
- as good as new ಬಹುತೇಕ ಹೊಸ; ಇನ್ನೂ ಬಳಕೆಯಿಂದ ಮಾಸಿಲ್ಲದ.
- new birth.
- new $^1$broom.
- New Christian ನವ ಕ್ರೈಸ್ತ; ಬಲವಂತದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ, ಮಧ್ಯಯುಗದ ಸ್ಪೇನಿನ ಯೆಹೂದ್ಯ ಯಾ ಮೊರಾಕೊದವನು.
- new $^2$chum.
- new $^1$deal.
- new fashioned ಹೊಸ ಹ್ಯಾಷನ್ನಿನ; ಇತ್ತೀಚಿನ (ಅತ್ಯಾಧುನಿಕ) ಹ್ಯಾಷನ್ನಿಗನುಸಾರವಾಗಿ ಮಾಡಿದ, ತಯಾರಾದ.
- new foundation ಹೊಸ ಸಂಸ್ಥಾಪನೆ; ರೆಹರ್ಮೇಷನ್ನಿಂದೀಚೆಗೆ ಸ್ಥಾಪಿತವಾದ ಕೆಥೆಡ್ರಲ್ ಮೊದಲಾದವು.
- new light(ಮತಧರ್ಮಗಳ ವಿಷಯದಲ್ಲಿ) ಆಧುನಿಕ ಯಾ ವಿಶಾಲ ಭಾವನೆಗಳು ಯಾ ಅವನ್ನು ಒಪ್ಪಿಕೊಳ್ಳುವ ವ್ಯಕ್ತಿ.
- new man(ದೇವತಾಶಾಸ್ತ್ರ) ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವನು.
- put on the new man ಗುಣ ಬದಲಾವಣೆಯಿಂದ, ತನ್ನನ್ನು ತಾನೇ ಸುಧಾರಿಸಿಕೊಂಡು ಮತಾಂತರವೆಂದರೇನೆಂಬುದನ್ನು ತೋರಿಸು.
- the new
- (ಗುಣಭೇದವನ್ನು ಸೂಚಿಸುವ ವಿಶಿಷ್ಟ ಶಬ್ಧವಾಗಿ) ಇತ್ತೀಚಿನ; ಆಧುನಿಕ.
- (ನಿಂದಾರ್ಥದಲ್ಲಿ) ನವ್ಯತಾ ಅಭಿಮಾನವುಳ್ಳ; ಅತಿ ನವೀನವಾದ,
- the new mathematics ನವೀನ, ನವ್ಯ – ಗಣಿತ; ಪ್ರಾಥಮಿಕ ಹಂತದಲ್ಲಿಯೇ ಗಣಸಿದ್ಧಾಂತ (set theory) ಮುಂತಾದವನ್ನು ಉಪಯೋಗಿಸಿ ಕಲಿಸುವ ಗಣಿತ.
- the new poor ಹೊಸ ಬಡವರು; ನವದರಿದ್ರರು; ಈಚಿನ ಸಾಮಾಜಿಕ ಬದಲಾವಣೆಗಳಿಂದ ಬಡವರಾದವರು.
- the new rich ನವ ಶ್ರೀಮಂತರು; ಈಚಿನ ಸಾಮಾಜಿಕ ಬದಲಾವಣೆಯಿಂದ ಶ್ರೀಮಂತರಾದವರು.
- the new woman (ನಿಂದಾರ್ಥಕ) ನವ ಮಹಿಳೆ; (ಸಂಪ್ರದಾಯವನ್ನು ನಿರಾಕರಿಸಿ ಸ್ವಾತಂತ್ರ್ಯವನ್ನು ಬಯಸುವ) ನವೀನ ಸ್ತ್ರೀ(ಯರು).
- turn over a new leaf(ರೂಪಕವಾಗಿ) ಹೊಸ ಅಧ್ಯಾಯ ಪ್ರಾರಂಭಿಸು.