See also 2lean  3lean
1lean ಲೀನ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ leaned ಉಚ್ಚಾರಣೆ ಲೀನ್ಡ್‍ ಯಾ leant ಉಚ್ಚಾರಣೆ ಲೆಂಟ್‍).
ಸಕರ್ಮಕ ಕ್ರಿಯಾಪದ
  1. (ದೇಹ ಮೊದಲಾದವನ್ನು) ಬಗ್ಗಿಸು; ಒರಗಿಸು; ಓಲಿಸು; ಬಾಗಿಸು: leaned her head upon her arm ತನ್ನ ತಲೆಯನ್ನು ತೋಳಿನ ಮೇಲೆ ಒರಗಿಸಿದಳು.
  2. (ವಸ್ತು ಮೊದಲಾದವನ್ನು) ಓಲಿಸಿ ನಿಲ್ಲಿಸು; ವಾಲಿಸಿ ಇಡು; ಓರೆಯಾಗಿಡು: lean the ladder against the wall ಏಣಿಯನ್ನು ಗೋಡೆಗೆ ಒರಗಿಸಿಡು.
ಅಕರ್ಮಕ ಕ್ರಿಯಾಪದ
  1. (ದೇಹ, ವಸ್ತು, ಮೊದಲಾದವುಗಳ ವಿಷಯದಲ್ಲಿಆಧಾರಕ್ಕಾಗಿ) ಒರಗು; ಆನು; ಓಲು; ಬಾಗು; ಒರಗಿರು: lean against the wall ಗೋಡೆಯನ್ನು ಒರಗಿ ನಿಲ್ಲು.
  2. ಓಲಿಕೊಂಡು, ಓರೆಯಾಗಿ, ವಾಲಿ, ಬಾಗಿ – ನಿಲ್ಲು: leaning tower ಓಲು ಗೋಪುರ.
  3. ಅವಲಂಬಿಸು; ಆಶ್ರಯಿಸು; ಆಧರಿಸು; ನೆಚ್ಚು; ನೆಮ್ಮು: not to lean on his father ತನ್ನ ತಂದೆಯನ್ನು ಅವಲಂಬಿಸುವುದಿಲ್ಲವೆಂದು.
  4. (ಕರುಣೆ, ಕ್ಷಮೆ, ಮೊದಲಾದವುಗಳ ಕಡೆ) ಓಲಿರು; ವಾಲು; ಒಲವಿರು.
  5. (ಒಂದು ಪಕ್ಷ, ಅಭಿಪ್ರಾಯ, ವ್ಯಕ್ತಿ, ಮೊದಲಾದವುಗಳ ಬಗ್ಗೆ) ಪಕ್ಷಪಾತವಿರು; ಒಲವು ಹೊಂದಿರು; ವಾಲು: leaned towards a teaching career ಅಧ್ಯಾಪನ ವೃತ್ತಿಯ ಕಡೆ ಓಲಿದ, ವಾಲಿದ.
ನುಡಿಗಟ್ಟು
  1. lean on (ಅಶಿಷ್ಟ) ನಿರ್ದಿಷ್ಟ ರೀತಿಯಲ್ಲಿ ನಡೆಯುವಂತೆ, ವರ್ತಿಸುವಂತೆ (ವ್ಯಕ್ತಿಯ ಮೇಲೆ) ಪ್ರಭಾವ ಬೀರು, ಒತ್ತಡ ತರು; (ವ್ಯಕ್ತಿಯನ್ನು) ಒತ್ತಾಯಿಸು, ಬಲಾತ್ಕರಿಸು.
  2. lean over backwards.
    1. (ಸಂಭವನೀಯ ಒಲವು, ಪಕ್ಷಪಾತ, ಮೊದಲಾದವುಗಳನ್ನು ತಪ್ಪಿಸಲು) ತೀರ ವಿರುದ್ಧ ದಿಕ್ಕಿಗೆ, ಕಡೆಗೆ – ಹೋಗು, ಬಾಗು; ಯಾವುದೋ ಪ್ರಭಾವದಿಂದ ದೂರವಾಗಲು ಯಾ ಹೊರಬರಲು ಸಾಕಷ್ಟು ಯಾ ಬಹು ದೂರ ಹೋಗು.
    2. (ಯಾರನ್ನೇ ಒಪ್ಪಿಸುವುದು ಮೊದಲಾದವುಗಳಲ್ಲಿ) ತನ್ನ ಕೈಲಾದದ್ದನ್ನೆಲ್ಲಾ ಮಾಡು; ಪೂರ್ಣ ಪ್ರಯತ್ನ ಮಾಡು.
  3. lean upon (ಸೈನ್ಯ) ರಕ್ಷಣೆಯಾಗಿ ಪಕ್ಕದಲ್ಲಿಟ್ಟುಕೊಂಡಿರು.