See also 1lean  2lean
3lean ಲೀನ್‍
ಗುಣವಾಚಕ
  1. (ವ್ಯಕ್ತಿಯ ಯಾ ಪ್ರಾಣಿಯ ವಿಷಯದಲ್ಲಿ) ತೆಳ್ಳಗಿನ; ತೆಳುವಾದ; ಕೃಶಕಾಯದ; ಪುಷ್ಟವಾಗಿರದ; ಸಪುರಾದ; ಸಣಕಲಾದ; ಬಡಕಲಾದ; ಹೆಚ್ಚು ಕೊಬ್ಬಿಲ್ಲದ; ತುಂಬಿಕೊಂಡಿಲ್ಲದ.
  2. (ಮಾಂಸದ ವಿಷಯದಲ್ಲಿ) ಕೊಬ್ಬಿರದ; ಕೊಬ್ಬಿಲ್ಲದ; ಚರಬಿಯಿಲ್ಲದ; ಬರಿ ಸ್ನಾಯುವಾಗಿರುವ.
  3. ಸ್ವಲ್ಪದ; ಅಲ್ಪ ಪ್ರಮಾಣದ; ಸುಮಾರಾದ; ಸಾಲದಾಗಿರುವ: lean crop ಸುಮಾರಾದ ಯಾ ಸ್ವಲ್ಪ ಪ್ರಮಾಣದ ಬೆಳೆ.
  4. ಹಸನಾಗಿರದ; ಒಳ್ಳೆಯ ಗುಣಮಟ್ಟದ್ದಲ್ಲದ.
  5. ಸತ್ತ್ವವಿಲ್ಲದ; ಸಾರವಿಲ್ಲದ: ಪುಷ್ಟಿದಾಯಕವಲ್ಲದ; ಪುಷ್ಟಿಕರವಲ್ಲದ: lean diet ಪುಷ್ಟಿಕರವಲ್ಲದ ಊಟ, ತಿಂಡಿ.
  6. ಲಾಭಕರವಲ್ಲದ; ಪ್ರತಿಫಲ ದೊರೆಯದ.
ಪದಗುಚ್ಛ

lean years ದುರ್ಭಿಕ್ಷದ ವರ್ಷಗಳು; ಬರಗಾಲ; ಬಹಳ ಕಡಿಮೆ ಬೆಳೆಯ ವರ್ಷಗಳು.