See also 2haul
1haul ಹಾಲ್‍
ಸಕರ್ಮಕ ಕ್ರಿಯಾಪದ
  1. ಬಲವಂತವಾಗಿ ಎಳೆ, ಸೆಳೆ.
  2. (ಬಂಡಿ ಯಾ ಇತರ ವಾಹನದಿಂದ) ಸಾಗಿಸು; ಒಯ್ಯು.
  3. (ನೌಕಾಯಾನ) ಹಡಗಿನ ಗತಿಯನ್ನು, ದಿಕ್ಕನ್ನು, ಪಥವನ್ನು – ಬದಲಾಯಿಸು, ತಿರುಗಿಸು.
  4. (ಆಡುಮಾತು) ಛೀಮಾರಿ ಹಾಕಲು ಯಾ ವಿಚಾರಣೆಗೆ ಗುರಿಪಡಿಸಲು ಸೆಳೆದು ತರು.
ಅಕರ್ಮಕ ಕ್ರಿಯಾಪದ
  1. (ಹಗ್ಗ ಮೊದಲಾದವನ್ನು) ಎಳೆ; ತುಯ್ಯು.
  2. (ನೌಕಾಯಾನ) ಹಡಗಿನ – ದಿಕ್ಕು ಬದಲಾಯಿಸು, ಪಥ ಬದಲಾಯಿಸು.
  3. (ಗಾಳಿಯ ವಿಷಯದಲ್ಲಿ) ದಿಕ್ಕು ಬದಲಾಯಿಸು.
ಪದಗುಚ್ಛ

haul to (or upon) the wind (ಹಡಗಿನ ವಿಷಯದಲ್ಲಿ) ಗಾಳಿಯ ದಿಕ್ಕಿಗೆ ಆದಷ್ಟು ವಿರುದ್ಧವಾಗಿ ಚಲಿಸುವಂತೆ ಹಡಗನ್ನು ತಿರುಗಿಸು.

ನುಡಿಗಟ್ಟು
  1. haul down one’s $^1$colours.
  2. haul over the $^1$coals.