See also 2colour
1colour ಕಲರ್‍
ನಾಮವಾಚಕ
  1. ದೃಕ್‍ಸಂವೇದನೆ; ಚಾಕ್ಷುಷಸಂವೇದನೆ; ವಿಭಜಿಸಿದ ಬೆಳಕಿನ ಕಿರಣಗಳು ನಮ್ಮ ಕಣ್ಣಿನಲ್ಲಿ ಉತ್ಪಾದಿಸುವ ಸಂವೇದನೆ (black ಕಪ್ಪು; ಬೆಳಕಿಲ್ಲದಾಗ ಯಾ ಮೇಲ್ಮೈಯಿಂದ ಬೆಳಕು ಪ್ರತಿಫಲಿತವಾಗದಿದ್ದಾಗ ಕಣ್ಣಿನ ಮೇಲೆ ಆಗುವ ಪರಿಣಾಮ. white ಬಿಳುಪು; ವಿಭಜಿಸದ ಬೆಳಕಿನ ಕಿರಣಗಳು ಉಂಟುಮಾಡುವ ಪರಿಣಾಮ).
  2. (ಒಂದು ನಿರ್ದಿಷ್ಟ) ಬಣ್ಣ; ಛಾಯೆ; ರಂಗು.
  3. ಬಣ್ಣ; ವರ್ಣ; ಬೆಳಕಿನ ಕಿರಣದ ವಿಭಜನೆಯಿಂದ ಉಂಟಾದ ವರ್ಣಪಟಲದ ಏಳು ಬಣ್ಣಗಳಲ್ಲಿ, ಸಡಿಲಪ್ರಯೋಗದಲ್ಲಿ ಕಪ್ಪು ಬಿಳುಪುಗಳನ್ನೂ ಒಳಗೊಂಡಂತೆ, ಯಾವುದೇ ಒಂದು ಅಥವಾ ಒಂದಕ್ಕಿಂತ ಹೆಚ್ಚಿನದರ ಬೆರಕೆಯಾದ ಒಂದು ಬಣ್ಣ.
  4. ಮುಖದ ಕೆಂಪು ಬಣ್ಣ: lose colour ಕಳೆಗುಂದು; ಬಿಳಿಚಿಕೊ; ಬಣ್ಣಗೆಡು. gain colour ಬಣ್ಣವೇರು; ಕೆಂಪೇರು.
  5. (ರೂಪಕವಾಗಿ) (ಸಾಮಾನ್ಯವಾಗಿ ಬಹುವಚನದಲ್ಲಿ) ಸ್ವರೂಪ; ರೂಪ; ಬಣ್ಣ: see something in its true colours ಯಾವುದನ್ನೇ ಅದರ ನಿಜವಾದ ಬಣ್ಣದಲ್ಲಿ, ಸ್ವರೂಪದಲ್ಲಿ ಕಾಣು.
  6. ಬಣ್ಣ–ಹಾಕಿರುವಿಕೆ, ಬಳಿದಿರುವಿಕೆ, ಸವರಿರುವಿಕೆ.
  7. ವರ್ಣವಿನ್ಯಾಸ; ಬಣ್ಣದ ಹಂಚಿಕೆ.
  8. ವರ್ಣಸಂವೇದನೆ; ಬಣ್ಣದ ಗ್ರಹಿಕೆ.
  9. ವರ್ಣ–ಪರಿಣಾಮ, ಪ್ರಭಾವ; ಚಿತ್ರಕೆತ್ತನೆಯ ಕೆಲಸದಲ್ಲಿ ನೆರಳು ಬೆಳಕುಗಳಿಂದ ಮೂಡುವ ಪರಿಣಾಮ.
  10. ವರ್ಣದ್ರವ್ಯ; ರಂಗು; ಬಣ್ಣ; ಬಣ್ಣ ಕೊಡುವ ವಸ್ತು.
  11. (ಬಹುವಚನದಲ್ಲಿ) (ಒಂದು ಪಕ್ಷದ ಕ್ರೀಡಾತಂಡ, ಸಂಘದ ಸದಸ್ಯತ್ವ, ಮೊದಲಾದವುಗಳ ಸಂಕೇತವಾಗಿ ಧರಿಸುವ ಯಾವುದೇ) ಬಣ್ಣದ ಪಟ್ಟಿ, ಉಡುಪು, ಮೊದಲಾದವು.
  12. ಹಡಗಿನ ಬಾವುಟ; ನೌಕಾಧ್ವಜ.
  13. ಜೋಡಿನಿಶಾನಿ; ಜೋಡಿ ಬಾವುಟ; ಜೋಡಿಪತಾಕೆ; ಸೇನಾದಳ ಮೆರೆಸುವ ರೇಷ್ಮೆಯ ಜೋಡಿಧ್ವಜ: Queen’s or King’s colour ರಾಣಿಯ ಯಾ ರಾಜನ ನಿಶಾನಿ. regiment’s colour ದಳಧ್ವಜ; ದಳಪತಾಕೆ.
  14. ಬಣ್ಣಬಣ್ಣದ ಉಡುಪುಗಳು.
  15. ತೋರ್ಕೆ; ವೇಷ; ಹೊರ ರೂಪ; ಹೊರ ಭಾವ.
  16. ನೆವ; ಸಬೂಬು; ವ್ಯಾಜ; ಕುಂಟುನೆಪ: under the colour of doing good ಒಳ್ಳೆಯದನ್ನು ಮಾಡುವ ನೆಪದಲ್ಲಿ.
  17. (ಸಂಗೀತ) ನಾದಗುಣ; ವಾದ್ಯ ಯಾ ಕಂಠದಿಂದ ಹೊರಡುವ ಧ್ವನಿಯ ವೈಶಿಷ್ಟ್ಯ.
  18. (ಸಾಮಾನ್ಯವಾಗಿ) ಲಕ್ಷಣ; ರೀತಿ; ಗುಣ; ಮನೋಧರ್ಮ; ಬಣ್ಣ; ಅರ್ಥಛಾಯೆ; ಧ್ವನಿ: the word takes its colour from the context ಪದಕ್ಕೆ ಅದರ ಸಂದರ್ಭಾನುಸಾರ ಅರ್ಥಛಾಯೆ ಬರುತ್ತದೆ.
  19. (ಸಂಗೀತ) ಗಾಯನದ ಯಾ ವಾದನದ ವೈವಿಧ್ಯ.
  20. (ಸಾಹಿತ್ಯ) ಚಿತ್ರಸದೃಶತೆ; ಕಣ್ಣಿಗೆ ಕಟ್ಟುವಂತಹ ಗುಣ; ಕಣ್ಣಿಗೆ ಕಟ್ಟುವ–ವರ್ಣನೆ, ನಿರೂಪಣೆ.
  21. (ಸಾಹಿತ್ಯ) ಆಲಂಕಾರಿಕ ಶೈಲಿ.
  22. (ಛಾಯಾಚಿತ್ರ ಮೊದಲಾದವುಗಳ ವಿಷಯದಲ್ಲಿ) ಸರ್ವವರ್ಣಕ; ಸಾರ್ವವರ್ಣಕ; ಸಕಲವರ್ಣಕ; ಕೇವಲ ಕಪ್ಪು ಮತ್ತು ಬಿಳುಪು ಮಾತ್ರವಲ್ಲದೆ, ಎಲ್ಲ ಬಣ್ಣಗಳನ್ನೂ ಬಳಸುವುದು.
  23. (ಮುದ್ರಣ) ಮುದ್ರಿತ ಅಕ್ಷರದ ಕಪ್ಪು (ಬಣ್ಣ).
  24. (ಮುಖ್ಯವಾಗಿ ಪೂರ್ವಗ್ರಹ, ಪಕ್ಷಪಾತ, ಮೊದಲಾದವುಗಳಿಗೆ ಕಾರಣವಾಗಿರುವ) ಚರ್ಮದ (ಕಪ್ಪು) ಬಣ್ಣ, ವರ್ಣ.
  25. (ವಂಶಲಾಂಛನ ವಿದ್ಯೆ) (ಕೆಂಪು, ಬಾನ್ನೀಲಿ, ಮೊದಲಾದ) ಸಾಂಪ್ರದಾಯಿಕ ವರ್ಣ; ಪರಂಪರಾಗತ ಬಣ್ಣ.
  26. (ಬಹುವಚನದಲ್ಲಿ) ರಾಷ್ಟ್ರಧ್ವಜ.
  27. ಕಾಲೇಜು, ಆಟದ ತಂಡ, ಕ್ರೀಡಾಸಂಘ, ಮೊದಲಾದವುಗಳ ಸಂಕೇತವಾಗಿ ಧರಿಸುವ ರಿಬ್ಬನ್ನು, ಉಡುಪು, ಮೊದಲಾದವುಗಳನ್ನು ಪಡೆದ ಆಟಗಾರ.
  28. (ನ್ಯಾಯಶಾಸ್ತ್ರ) ತೋರಿಕೆಯ ಹಕ್ಕು; ಮೇಲ್ನೋಟಕ್ಕೆ ಸರಿಯೆಂದು ತೋರುವ ಹಕ್ಕು: hold possession under colour of title ತೋರಿಕೆಯ ಹಕ್ಕಿನ ಮೇಲೆ ಸ್ವಾಮ್ಯ ಪಡೆದಿರು.
ಪದಗುಚ್ಛ
  1. accidental colour ಬಾಹ್ಯವಲ್ಲದ, ಮನಸ್ಸಿಗೆ ಮಾತ್ರ ಗೋಚರವಾಗುವ–ಬಣ್ಣ.
  2. complementary colour ಪೂರಕವರ್ಣ; ಯಾವುದೇ ಬಣ್ಣವನ್ನು ಬಿಳುಪಿಗೆ ಯಾ ಕಪ್ಪಿಗೆ ತಿರುಗಿಸಲು ಅದರೊಡನೆ ಸೇರಿಸಬೇಕಾದ ಬಣ್ಣ.
  3. dead colour (ವರ್ಣಚಿತ್ರಣದಲ್ಲಿ) ನಿರ್ಜೀವ ವರ್ಣ; ಮೊದಲ–ತೊಡೆತ, ಬಳಿತ; ಪ್ರಥಮ ಲೇಪನ; ಕಾಂತಿಯಿಲ್ಲದ, ಹೊಳಪಿಲ್ಲದ, ನಿರ್ಜೀವವಾದ–ಮೊದಲ ತೊಡೆತ.
  4. fundamental, primary, simple colours ಜನಕವರ್ಣಗಳು; ಆದ್ಯವರ್ಣಗಳು; ಒಂದರೊಡನೆ ಇನ್ನೊಂದನ್ನು ಬೆರೆಸುವುದರಿಂದ ಉಳಿದೆಲ್ಲ ಬಣ್ಣಗಳನ್ನು ಉತ್ಪತ್ತಿಮಾಡುವ ಕೆಂಪು, ಹಸುರು ಮತ್ತು ನೇರಳೆ ಬಣ್ಣಗಳು, ಅಥವಾ ಪೇಂಟುಗಳ ತಯಾರಿಕೆಗೆ ಬಳಸುವ ಕೆಂಪು, ನೀಲಿ ಮತ್ತು ಹಳದಿ ಬಣ್ಣಗಳು.
  5. local colour (ಕಥೆ, ಕಾದಂಬರಿ, ಮೊದಲಾದವುಗಳಿಗೆ ವಾಸ್ತವಿಕತೆಯನ್ನು ಕಲ್ಪಿಸುವ) ಪರಿಸರ ಛಾಯೆ; ಸನ್ನಿವೇಶ ವರ್ಣನೆ.
  6. man, woman, etc. of colour ವರ್ಣೀಯ; ಶ್ವೇತವರ್ಣೀಯರಲ್ಲದ ನೀಗ್ರೋ ಮೊದಲಾದ ಜನಾಂಗದವರು.
  7. secondary colours ಜನ್ಯವರ್ಣಗಳು; ಯಾವುದೇ ಎರಡು ಮೂಲವರ್ಣಗಳನ್ನು ಬೆರಸುವುದರಿಂದ ಉಂಟಾಗುವ ಇತರ ಬಣ್ಣಗಳು.
  8. water colours ಜಲವರ್ಣಗಳು; ನೀರುಬಣ್ಣಗಳು; ಎಣ್ಣೆಯೊಡನಲ್ಲದೆ ನೀರಿನೊಡನೆ ಬೆರಸುವ ಬಣ್ಣಗಳು.
ನುಡಿಗಟ್ಟು
  1. call to the colours ಸೈನ್ಯಕ್ಕೆ ಸೇರಲು ಕರೆ ಕೊಡು.
  2. change colours (ಮುಖದ) ಬಣ್ಣ ಬದಲಾಯಿಸು; ನಾಚಿಕೆ ಮೊದಲಾದವುಗಳಿಂದ ಕೆಂಪೇರು; ಭಯ ಮೊದಲಾದವುಗಳಿಂದ ಬಿಳಿಚಿಕೊ.
  3. come off with or through flying colours (ಯಾವುದೇ ಸ್ಪರ್ಧೆ ಯಾ ಹೋರಾಟದಲ್ಲಿ) ಗೆಲ್ಲು; ಜಯಭೇರಿ ಹೊಡೆ; ಜಯ ಗಳಿಸು; ಯಶಸ್ವಿಯಾಗು.
  4. get (win) one’s colour (ಕಾಲೇಜು ಮೊದಲಾದವುಗಳಲ್ಲಿ) ಕ್ರೀಡಾತಂಡದಲ್ಲಿ ಸ್ಥಾನ–ಗಳಿಸು, ಪಡೆ, ಸಂಪಾದಿಸು.
  5. give a false colour to ತಪ್ಪು ಅರ್ಥ ಯಾ ಧ್ವನಿ ನೀಡು: newspapers often give a false colour to the news they report ವರ್ತಮಾನ ಪತ್ರಿಕೆಗಳು ಹಲವು ವೇಳೆ ತಾವು ವರದಿ ಮಾಡುವ ಸುದ್ದಿಗೆ ತಪ್ಪರ್ಥ ನೀಡುತ್ತವೆ.
  6. give (lend) colour to ಸಂಭಾವ್ಯವಾಗಿ ಕಾಣುವಂತೆ ಮಾಡು.
  7. give one his colours ಕ್ರೀಡಾ ತಂಡಕ್ಕೆ ಸೇರಿಸು.
  8. haul down one’s colours ಸೋಲನ್ನು ಒಪ್ಪಿಕೊ; ಪರಾಜಯವನ್ನು ಸ್ವೀಕರಿಸು ಯಾ ಅಂಗೀಕರಿಸು.
  9. nail colours to the mast ಜಗ್ಗದಿರು; ತನ್ನ ನಿಲುವನ್ನು ಬಿಡದೆ ಪಟ್ಟುಹಿಡಿ.
  10. paint in bright colours
    1. ಮೆರುಗಿಟ್ಟು ಬಣ್ಣಿಸು; ಉಜ್ಜ್ವಲವಾಗಿ ವರ್ಣಿಸು; ಪ್ರಭಾವಶಾಲಿಯಾಗಿ, ಪರಿಣಾಮಕಾರಿಯಾಗಿ, ಒಳ್ಳೆಯ ಅಭಿಪ್ರಾಯ ಮೂಡಿಸುವಂತೆ–ನಿರೂಪಿಸು.
    2. ಆಶಾದಾಯಕವಾಗಿರುವಂತೆ ವರ್ಣಿಸು, ನಿರೂಪಿಸು.
  11. paint in dark colours
    1. ಮಸಿ ಬಳಿದು ಬಣ್ಣಿಸು; ದೋಷಪೂರ್ಣವಾಗಿ ನಿರೂಪಿಸು; ಕೆಟ್ಟ ಅಭಿಪ್ರಾಯ ಬರುವಂತೆ ವರ್ಣಿಸು.
    2. ನಿರಾಶಾದಾಯಕವಾಗಿರುವಂತೆ–ವರ್ಣಿಸು, ನಿರೂಪಿಸು.
  12. put false colours upon ಸಲ್ಲದ ಬಣ್ಣ ಕೊಡು; ಇಲ್ಲದ ಗುಣ ದೋಷಗಳನ್ನು ಹೊರಿಸು, ಆರೋಪಿಸು.
  13. sail under false colours ಕಪಟಿಯಾಗಿ ಯಾ ಆಷಾಡಭೂತಿಯಾಗಿ ವರ್ತಿಸು; ಕಪಟವೇಷ ಹಾಕಿಕೊ; ರಾವಣ ಸಂನ್ಯಾಸಿಯಾಗು.
  14. see in its true colours ನಿಜಸ್ಥಿತಿಯಲ್ಲಿ ನೋಡು; (ವ್ಯಕ್ತಿ ಯಾ ವಸ್ತುವನ್ನು) ಅದರ ನಿಜಸ್ವರೂಪದಲ್ಲಿ ಕಾಣು.
  15. see the colour of one’s money ಕಾಸಿನ ಮುಖ ಕಾಣುವ ಸೂಚನೆ ಕಂಡುಬರು; ಒಬ್ಬನಿಂದ ತನಗೆ ಬರಬೇಕಾದ ಹಣದ ಸೂಚನೆ ಕಾಣು.
  16. show one’s (true) colours
    1. ತನ್ನ ಬಣ್ಣವನ್ನು, ಸ್ವರೂಪವನ್ನು ತೋರಿಸಿಕೊ; ನಿಜರೂಪ ಪ್ರಕಟಿಸು.
    2. ತನ್ನ ಪಕ್ಷ ಯಾವುದೆಂದು ತೋರಿಸಿಕೊ.
  17. stick to one’s colours ತನ್ನ ಅಭಿಪ್ರಾಯ ಯಾ ಪಕ್ಷವನ್ನು ಬಿಡದಿರು, ಬದಲಾಯಿಸಲು ನಿರಾಕರಿಸು; ಅಭಿಪ್ರಾಯಕ್ಕೆ ಯಾ ಪಕ್ಷಕ್ಕೆ ಭದ್ರವಾಗಿ ಅಂಟಿಕೊಂಡಿರು, ಕಟ್ಟುಬಿದ್ದಿರು.
  18. take one’s colour from ಛಾಯಾನುವರ್ತಿಯಾಗು; ಇನ್ನೊಬ್ಬರ ರೀತಿ, ಶೈಲಿ, ಮನೋಧರ್ಮ ಅನುಸರಿಸು.
  19. with the colours ಸೈನ್ಯಕ್ಕೆ ಸೇರಿ; ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಾ.