See also 2coal
1coal ಕೋಲ್‍
ನಾಮವಾಚಕ
  1. ಕಲ್ಲಿದ್ದಲು; ಭೂಮಿಯ ಒಳಗಿರುವ ಭೂಸ್ತರಗಳಲ್ಲಿ ಹಾಗೂ ಸ್ತರಗಳ ನಡುವಿನ ಪದರಗಳಲ್ಲಿ ಕಾಣಬರುವ, ಮುಖ್ಯವಾಗಿ ಸಸ್ಯ ಪದಾರ್ಥವು ಇಂಗಾಲವಾಗಿ ಮಾರ್ಪಟ್ಟಿರುವ, ಅನಿಲ, ಟಾರ್‍ ಮೊದಲಾದವನ್ನು ತಯಾರಿಸಲು ಮತ್ತು ಇಂಧನವಾಗಿ ಬಳಸುವ, ಅಪಾರದರ್ಶಕವಾಗಿ ಗಟ್ಟಿಯಾಗಿರುವ, ಕಪ್ಪು ಯಾ ನಸುಗಪ್ಪು ಬಣ್ಣದ ಖನಿಜ.
  2. (ಬ್ರಿಟಿಷ್‍ ಪ್ರಯೋಗ) ಕಲ್ಲಿದ್ದಲು; ಬೆಂಕಿಯಾಗಿ ಉರಿಸುವ ಕಲ್ಲಿದ್ದಲಿನ ತುಂಡು.
  3. ಕೆಂಡ; ಉರಿಯುತ್ತಿರುವ ಕಲ್ಲಿದ್ದಲು, ಮರ, ಮೊದಲಾದವುಗಳ ಕೆಂಪಗೆ ಕಾದಿರುವ ತುಂಡು.
  4. (ಬಹುವಚನದಲ್ಲಿ) (ಲೋಹವಿದ್ಯೆ) ವಿವಿಧ ಬಗೆಯ ಕಲ್ಲಿದ್ದಲು; ಆಂತ್ರಸೈಟ್‍, ಬಿಟುಮಿನಸ್‍ ಮತ್ತು ಲಿಗ್ನೈಟ್‍ ಕಲ್ಲಿದ್ದಲು.
ನುಡಿಗಟ್ಟು
  1. blow the coals
    1. ಉರಿ ಹೊತ್ತಿಸು; ಉರುವು.
    2. (ರಾಗದ್ವೇಷಾದಿಗಳನ್ನು) ಕೆರಳಿಸು; ಉದ್ರೇಕಿಸು; ಉತ್ತೇಜಿಸು.
  2. carry coals to Newcastle ಬೆಟ್ಟಕ್ಕೆ ಕಲ್ಲುಹೊರು; ವ್ಯರ್ಥಪ್ರಯಾಸಪಡು; ಅನಾವಶ್ಯಕವಾದ, ಬೇಡದ–ಕೆಲಸ ಮಾಡು, ನೆರವು ನೀಡು.
  3. haul or call over the coals ವಾಗ್ದಂಡನೆ ಮಾಡು; ಖಂಡಿಸು; ಝಂಕಿಸು; ತರಾಟೆಗೆ ತೆಗೆದುಕೊ; ಛೀಮಾರಿ–ಹಾಕು, ಮಾಡು.
  4. heap coals of fire on one’s head ಅಪಕಾರಕ್ಕೆ ಪ್ರತಿಯಾಗಿ ಉಪಕಾರ ಮಾಡಿ ಪಶ್ಚಾತ್ತಾಪ ಹುಟ್ಟಿಸು.