See also 2yellow  3yellow
1yellow ಯೆಲೋ
ಗುಣವಾಚಕ
  1. ಹಳದಿಯ; ಅರಿಸಿನ ಬಣ್ಣದ; ಪೀತ; ಹರಿದ್ರ(ವರ್ಣದ); ಹಳದಿ ಬಣ್ಣದ (ಸಸ್ಯ ಮತ್ತು ಪ್ರಾಣಿಗಳ ಹೆಸರುಗಳಲ್ಲಿ ದೇಹಾಂಗಗಳ ಹಳದಿ ಬಣ್ಣದ ಕಾರಣದಿಂದ ವಿಶೇಷಣವಾಗಿ ಬಳಕೆ).
  2. ಹಣ್ಣೆಲೆ, ಬಲಿತ ಗೋಧಿ, ಮೊದಲಾದವುಗಳ ಬಣ್ಣದ.
  3. ಹಳದಿ ಚರ್ಮ ಯಾ ಹಳದಿ ಮೈ ಬಣ್ಣ ಉಳ್ಳ.
  4. (ರೂಪಕವಾಗಿ) (ದೃಷ್ಟಿ, ಮನೋಭಾವ, ಮೊದಲಾದವುಗಳ ವಿಷಯದಲ್ಲಿ)
    1. ಮತ್ಸರದ; ಅಸೂಯೆಯ; ಈರ್ಷ್ಯೆಯ.
    2. ಸಂಶಯಾತ್ಮಕ.
  5. ಹೇಡಿತನದ; ಪುಕ್ಕಲ.
  6. (ವೃತ್ತಪತ್ರಿಕೆಗಳು ಮೊದಲಾದವುಗಳ ವಿಷಯದಲ್ಲಿ) ಪೀತ; ಹಳದಿ; ನೀತಿನಿಷ್ಠೆಯಿಲ್ಲದೆ, ನಿರ್ಲಜ್ಜೆಯಿಂದ ಉದ್ರೇಕಕಾರಿ ಸುದ್ದಿಗಳನ್ನು ಹರಡುವ: the yellow press ಪೀತ (ಸುದ್ದಿ)ಪತ್ರಿಕೆಗಳು; ಪೀತ ಪತ್ರಿಕೋದ್ಯಮ.
See also 1yellow  3yellow
2yellow ಯೆಲೋ
ನಾಮವಾಚಕ
  1. ಹಳದಿ(ಬಣ್ಣ); ಹರಿದ್ರ; ಅರಿಸಿನ ಬಣ್ಣ ಯಾ ಪೀತವರ್ಣದ್ರವ್ಯ.
  2. ಹಳದಿ ಬಣ್ಣದ ಬಟ್ಟೆ, ಉಡುಪು, ಮೊದಲಾದವು: dressed in yellow ಹಳದಿಬಟ್ಟೆಯನ್ನುಟ್ಟು.
  3. (ಸ್ನೂಕರ್‍ ಮೊದಲಾದ ಆಟದಲ್ಲಿ)
    1. ಹಳದಿ ಚೆಂಡು, ಕಾಯಿ, ಮೊದಲಾದವು.
    2. ಇಂಥ ಹಳದಿ ಚೆಂಡು, ಕಾಯಿ, ಮೊದಲಾದವುಗಳಿಂದ ಆಡುವ ಆಟಗಾರ.
  4. (ಸಾಮಾನ್ಯವಾಗಿ ಸಂಯುಕ್ತಪದಗಳಲ್ಲಿ) ಹಳದಿ ಪತಂಗ ಯಾ ಚಿಟ್ಟೆ.
  5. (ಬಹುವಚನದಲ್ಲಿ) ಕುದುರೆ ಮೊದಲಾದವುಗಳ ಕಾಮಾಲೆ ರೋಗ.
  6. (ಅಮೆರಿಕನ್‍ ಪ್ರಯೋಗ) (ಪೀಚ್‍ ಗಿಡಗಳಿಗೆ ತಗುಲಿ ಎಲೆಗಳು ಹಳದಿಬಣ್ಣಕ್ಕೆ ತಿರುಗುವ) ಹಳದಿ ರೋಗ.
  7. (ಆಡುಮಾತು) ಪುಕ್ಕಲುತನ; ಹೇಡಿತನ; ಹಂದೆತನ.
See also 1yellow  2yellow
3yellow ಯೆಲೋ
ಸಕರ್ಮಕ ಕ್ರಿಯಾಪದ

ಹಳದಿಯಾಗಿಸು; ಹಳದಿ ಬಣ್ಣಕ್ಕೆ ತಿರುಗಿಸು: paper yellowed with age ಕಾಲವಶದಿಂದ ಹಳದಿಬಣ್ಣಕ್ಕೆ ತಿರುಗಿದ ಕಾಗದ.

ಅಕರ್ಮಕ ಕ್ರಿಯಾಪದ

ಹಳದಿಯಾಗು; ಹಳದಿ ಬಣ್ಣಕ್ಕೆ ತಿರುಗು: the yellowing leaves ಹಳದಿಯಾಗುತ್ತಿರುವ ಎಲೆಗಳು.