See also 1yellow  3yellow
2yellow ಯೆಲೋ
ನಾಮವಾಚಕ
  1. ಹಳದಿ(ಬಣ್ಣ); ಹರಿದ್ರ; ಅರಿಸಿನ ಬಣ್ಣ ಯಾ ಪೀತವರ್ಣದ್ರವ್ಯ.
  2. ಹಳದಿ ಬಣ್ಣದ ಬಟ್ಟೆ, ಉಡುಪು, ಮೊದಲಾದವು: dressed in yellow ಹಳದಿಬಟ್ಟೆಯನ್ನುಟ್ಟು.
  3. (ಸ್ನೂಕರ್‍ ಮೊದಲಾದ ಆಟದಲ್ಲಿ)
    1. ಹಳದಿ ಚೆಂಡು, ಕಾಯಿ, ಮೊದಲಾದವು.
    2. ಇಂಥ ಹಳದಿ ಚೆಂಡು, ಕಾಯಿ, ಮೊದಲಾದವುಗಳಿಂದ ಆಡುವ ಆಟಗಾರ.
  4. (ಸಾಮಾನ್ಯವಾಗಿ ಸಂಯುಕ್ತಪದಗಳಲ್ಲಿ) ಹಳದಿ ಪತಂಗ ಯಾ ಚಿಟ್ಟೆ.
  5. (ಬಹುವಚನದಲ್ಲಿ) ಕುದುರೆ ಮೊದಲಾದವುಗಳ ಕಾಮಾಲೆ ರೋಗ.
  6. (ಅಮೆರಿಕನ್‍ ಪ್ರಯೋಗ) (ಪೀಚ್‍ ಗಿಡಗಳಿಗೆ ತಗುಲಿ ಎಲೆಗಳು ಹಳದಿಬಣ್ಣಕ್ಕೆ ತಿರುಗುವ) ಹಳದಿ ರೋಗ.
  7. (ಆಡುಮಾತು) ಪುಕ್ಕಲುತನ; ಹೇಡಿತನ; ಹಂದೆತನ.