See also 2yellow  3yellow
1yellow ಯೆಲೋ
ಗುಣವಾಚಕ
  1. ಹಳದಿಯ; ಅರಿಸಿನ ಬಣ್ಣದ; ಪೀತ; ಹರಿದ್ರ(ವರ್ಣದ); ಹಳದಿ ಬಣ್ಣದ (ಸಸ್ಯ ಮತ್ತು ಪ್ರಾಣಿಗಳ ಹೆಸರುಗಳಲ್ಲಿ ದೇಹಾಂಗಗಳ ಹಳದಿ ಬಣ್ಣದ ಕಾರಣದಿಂದ ವಿಶೇಷಣವಾಗಿ ಬಳಕೆ).
  2. ಹಣ್ಣೆಲೆ, ಬಲಿತ ಗೋಧಿ, ಮೊದಲಾದವುಗಳ ಬಣ್ಣದ.
  3. ಹಳದಿ ಚರ್ಮ ಯಾ ಹಳದಿ ಮೈ ಬಣ್ಣ ಉಳ್ಳ.
  4. (ರೂಪಕವಾಗಿ) (ದೃಷ್ಟಿ, ಮನೋಭಾವ, ಮೊದಲಾದವುಗಳ ವಿಷಯದಲ್ಲಿ)
    1. ಮತ್ಸರದ; ಅಸೂಯೆಯ; ಈರ್ಷ್ಯೆಯ.
    2. ಸಂಶಯಾತ್ಮಕ.
  5. ಹೇಡಿತನದ; ಪುಕ್ಕಲ.
  6. (ವೃತ್ತಪತ್ರಿಕೆಗಳು ಮೊದಲಾದವುಗಳ ವಿಷಯದಲ್ಲಿ) ಪೀತ; ಹಳದಿ; ನೀತಿನಿಷ್ಠೆಯಿಲ್ಲದೆ, ನಿರ್ಲಜ್ಜೆಯಿಂದ ಉದ್ರೇಕಕಾರಿ ಸುದ್ದಿಗಳನ್ನು ಹರಡುವ: the yellow press ಪೀತ (ಸುದ್ದಿ)ಪತ್ರಿಕೆಗಳು; ಪೀತ ಪತ್ರಿಕೋದ್ಯಮ.