See also 2trust
1trust ಟ್ರಸ್ಟ್‍
ನಾಮವಾಚಕ
    1. (ವ್ಯಕ್ತಿಯ ಯಾ ವಸ್ತುವೊಂದರ ವಿಶ್ವಾಸಾರ್ಹತೆ, ಪ್ರಾಮಾಣಿಕತೆ, ಶಕ್ತಿ, ಮೊದಲಾದವುಗಳಲ್ಲಿ) ದೃಢನಂಬಿಕೆ; ನೆಚ್ಚಿಕೆ; ವಿಶ್ವಾಸ.
    2. ನಂಬಿಕೆ; ಶ್ರದ್ಧೆ; ನೆಚ್ಚಿಕೆಗೆ ಒಳಪಟ್ಟಿರುವ ಸ್ಥಿತಿ: our trust in God ದೇವರಲ್ಲಿ ನಂಬಿಕೆ.
  1. ಭರವಸೆಯಿಂದ ಕೂಡಿದ ನಿರೀಕ್ಷೆ.
  2. ವಿಶ್ವಾಸ ಪಾತ್ರ; ನಂಬಿಕೆಯ ವ್ಯಕ್ತಿ, ವಸ್ತು: he is our sole trust ಅವನು ನಮ್ಮ ಏಕೈಕ ವಿಶ್ವಾಸಕ್ಕೆ ಪಾತ್ರನಾದವನು.
  3. ಕೇವಲ ನಂಬಿಕೆ; ಪರೀಕ್ಷಿಸದೆ ಹೇಳಿಕೆ ಮೊದಲಾದವನ್ನು ಸತ್ಯ ಯಾ ನಿರಾಧಾರ ಎಂದು ನಂಬಉವುದು.
  4. (ವ್ಯಾಪಾರ) ಖಾತ್ರಿ ಸಾಲ; ನಂಬಿಕೆ ಉದ್ದರಿ: obtained goods on trust ಖಾತ್ರಿ ಸಾಲದ ಮೇಲೆ ಮಾಲುಗಳನ್ನು ಪಡೆದ.
  5. ನಂಬಿಕೆ; ನಂಬಿಕೆಯ ಹೊಣೆ; ಇನ್ನೊಬ್ಬರ ನಂಬಿಕೆಯಿಂದ ಒದಗಿದ ನಮ್ಮ ಜವಾಬ್ದಾರಿ: am in a position of trust ನನ್ನದು ನಂಬಿಕೆಯ ಹೊಣೆಗಾರಿಕೆ.
  6. (ನ್ಯಾಯಶಾಸ್ತ್ರ)
    1. ನ್ಯಾಸ ವಿಶ್ವಾಸ; ಬೇರೊಬ್ಬನ ಪ್ರಯೋಜನಾರ್ಥ ನಿರ್ವಹಿಸಬೇಕಾದ ಆಸ್ತಿಗೆ ಒಬ್ಬನನ್ನು ಹೆಸರಿಗೆ ಮಾತ್ರ ಒಡೆಯನನ್ನಾಗಿ ಮಾಡಿ ಅವನಲ್ಲಿ ನಂಬಿಕೆ ಇಡುವುದು.
    2. ನ್ಯಾಸಾನುಭೋಗ; ನ್ಯಾಸಾನುಭೋಗದ ಹಕ್ಕು; ಯಾರಿಗಾಗಿ ನ್ಯಾಸ ಇಟ್ಟಿದೆಯೋ ಅವನು ಅದರಿಂದ ಪ್ರಯೋಜನ ಪಡೆಯುವ ಹಕ್ಕು.
    3. ನ್ಯಾಸ; ನ್ಯಾಸವಾಗಿಟ್ಟ ಆಸ್ತಿ.
    4. ನ್ಯಾಸ ಸಂಬಂಧ; ನ್ಯಾಸದಾರನಿಗೂ ನ್ಯಾಸದ ಆಸ್ತಿಗೂ ಇರುವ ಸಂಬಂಧ.
  7. ಕೈಯೆಣೆ; ನ್ಯಾಸ; ಒಬ್ಬನ ವಶಕ್ಕೆ ಒಪ್ಪಿಸಿದ ವಸ್ತು ಯಾ ವ್ಯಕ್ತಿ.
  8. ನ್ಯಾಸದ ಹೊಣೆ: have fulfilled my trust ನನ್ನ ನ್ಯಾಸದ ಹೊಣೆ ನಿರ್ವಹಿಸಿದ್ದೇನೆ.
    1. ನ್ಯಾಸದರ್ಶಿಗಳು, ವಿಶ್ವಸ್ಥರು, ಧರ್ಮದರ್ಶಿಗಳು, ಮೇಲ್ವಿಚಾರಣೆ ನೋಡಿಕೊಳ್ಳುವ ಸಂಸ್ಥೆ.
    2. ಧರ್ಮದರ್ಶಿಗಳ ಯಾ ನ್ಯಾಸದರ್ಶಿಗಳ ಯಾ ವಿಶ್ವಸ್ಥರ–ಮಂಡಲಿ.
  9. ಕೂಡುವ್ಯಾಪಾರ ಸಂಸ್ಥೆ; ಪೈಪೋಟಿ ಕಡಮೆ ಮಾಡಲು ಯಾ ನಿಷ್ಫಲಗೊಳಿಸಲು ಹಲವು ವ್ಯಾಪಾರ ಸಂಘಗಳು ಎಲ್ಲಾ ಹೊಣೆಗಾರಿಕೆಯನ್ನೂ ಕೇಂದ್ರ ಸಮಿತಿಗೆ ವಹಿಸಿ ವಹಿವಾಟು ನಡೆಸುವ ಸಂಸ್ಥೆ; (ಮುಖ್ಯವಾಗಿ) ಎಲ್ಲಾ ಬಂಡವಾಳ ಸ್ಟಾಕುಗಳನ್ನೂ ಕೇಂದ್ರ ಸಮಿತಿಗೆ ವರ್ಗಾಯಿಸಿ, ಪಾಲುದಾರರು ತಮ್ಮ ಮತ ಚಲಾವಣೆ ಹಕ್ಕನ್ನೂ ಬಿಟ್ಟುಕೊಟ್ಟು, ಕೇವಲ ಲಾಭದಲ್ಲಿ ಪಾಲುಗೊಳ್ಳುವುದನ್ನು ಮಾತ್ರ ಉಳಿಸಿಕೊಂಡ ಸಂಸ್ಥೆ.
ಪದಗುಚ್ಛ
  1. in trust (ನ್ಯಾಯಶಾಸ್ತ್ರ) ನ್ಯಾಸವಾಗಿ; ನ್ಯಾಸದಲ್ಲಿ.
  2. on trust ಖಾತ್ರಿಸಾಲದ (ಆಧಾರದ) ಮೇಲೆ.
  3. ನಂಬಿಕೆಯ ಆಧಾರದ ಮೇಲೆ.
  4. take on trust ಕೇವಲ ನಂಬಿಕೆಯ ಮೇಲೆ ಒಪ್ಪಿಕೊ, ಕೊಡು, ಇತ್ಯಾದಿ.
See also 1trust
2trust ಟ್ರಸ್ಟ್‍
ಸಕರ್ಮಕ ಕ್ರಿಯಾಪದ
  1. ನಂಬಉ; ನೆಚ್ಚು; ನಂಬಿಕೆ, ವಿಶ್ವಾಸ, ಭರವಸೆ–ಇಡು: have never trusted him ನಾನು ಎಂದೂ ಅವನಲ್ಲಿ ನಂಬಿಕೆ ಇಟ್ಟಿಲ್ಲ.
  2. (ಆಡುಮಾತು) (ಆಜ್ಞಾರೂಪ, ವ್ಯಂಗ್ಯೋಕ್ತಿ) ಖಂಡಿತ ನಂಬಉ: trust him to get it wrong ಅವನು ಅದನ್ನು ತಪ್ಪಾಗಿ ಗ್ರಹಿಸುತ್ತಾನೆಂಬಉದನ್ನು ಖಂಡಿತ ನಂಬಉ (ಅವನು ಅದನ್ನು ತಪ್ಪಾಗಿ ಗ್ರಹಿಸುವುದರಲ್ಲಿ ಒಂದಿಷ್ಟೂ ಸಂದೇಹವಿಲ್ಲ).
  3. (ವಸ್ತು ಮೊದಲಾದವನ್ನು, ಒಬ್ಬನ ವಶಕ್ಕೆ) ನಂಬಿಕೊಡು; (ಒಂದು ಸ್ಥಳದಲ್ಲಿ, ಒಬ್ಬನ ವಶದಲ್ಲಿ) ನಂಬಿ ಇಡು, ಬಿಡು; ನ್ಯಾಸವಿಡು.
  4. (ಗಿರಾಕಿಗೆ) ಖಾತ್ರಿಯ ಮೇಲೆ ಸರಕು (ಮೊದಲಾದವನ್ನು) ಸಾಲ ಕೊಡು.
  5. ನಂಬಉ; ನಂಬಿಕೊಂಡಿರು: I trust he is not hurt ಅವನಿಗೆ ಗಾಯವಾಗಿಲ್ಲವೆಂದು (ಯಾ ನೋವಾಗಿಲ್ಲವೆಂದು) ನಾನು ನಂಬಿದ್ದೇನೆ.
  6. (ನಡೆಯುತ್ತದೆಯೆಂದು, ಘಟಿಸುವುದೆಂದು) ನಂಬಿರು; ವಿಶ್ವಾಸವಿಟ್ಟಿರು; ಭರವಸೆ ಹೊಂದಿರು: I trust you will not be late ನೀನು ತಡಮಾಡುವುದಿಲ್ಲವೆಂದು ನಂಬಿದ್ದೇನೆ. I trust that she is recovering ಅವಳು ಚೇತರಿಸಿ ಕೊಳ್ಳುತ್ತಿದ್ದಾಳೆಂಬ ಭರವಸೆ ಹೊಂದಿದ್ದೇನೆ.
  7. (ವ್ಯಕ್ತಿಯು ಯಾವುದೇ ವಸ್ತುವನ್ನು ಸರಿಯಾಗಿ ಇಟ್ಟುಕೊಂಡಿದ್ದಾನೆ ಯಾ ಬಳಸುತ್ತಾನೆ ಎಂಬ) ನಂಬಿಕೆ ಹೊಂದಿರು, ಇಟ್ಟಿರು; ವಿಶ್ವಾಸ, ನೆಚ್ಚಿಕೆ–ಇರಿಸು: am reluctant to trust them with my books ನನ್ನ ಪುಸ್ತಕಗಳನ್ನು ಅವರು ಸರಿಯಾಗಿ ಉಪಯೋಗಿಸುತ್ತಾರೆಂದು ಯಾ ಇಟ್ಟುಕೊಂಡಿರುತ್ತಾರೆಂದು ನನಗೆ ನಂಬಿಕೆಯಿಲ್ಲ.
ಅಕರ್ಮಕ ಕ್ರಿಯಾಪದ

ನಂಬಉ; ನಂಬಿಕೆ ಇಡು; ವಿಶ್ವಾಸವಿಡು.

ಪದಗುಚ್ಛ

trust to ಅತಿ ನಂಬಿಕೆ ಇಡು; ಅತಿಯಾಗಿ ನೆಚ್ಚು: does not do to trust to memory in these things ಈ ವಿಷಯಗಳಲ್ಲಿ ನಮ್ಮ ನೆನಪನ್ನು ನಂಬಿ ಪ್ರಯೋಜನವಿಲ್ಲ (ನಮಗೆ ಎಲ್ಲಾ ವಿವರಗಳೂ ನೆನಪಿರುತ್ತವೆಂದು ನಂಬಬಾರದು). shall have to trust to luck ಅದೃಷ್ಟವನ್ನು ನಂಬಬೇಕಾಗುತ್ತದೆ.