See also 1trust
2trust ಟ್ರಸ್ಟ್‍
ಸಕರ್ಮಕ ಕ್ರಿಯಾಪದ
  1. ನಂಬಉ; ನೆಚ್ಚು; ನಂಬಿಕೆ, ವಿಶ್ವಾಸ, ಭರವಸೆ–ಇಡು: have never trusted him ನಾನು ಎಂದೂ ಅವನಲ್ಲಿ ನಂಬಿಕೆ ಇಟ್ಟಿಲ್ಲ.
  2. (ಆಡುಮಾತು) (ಆಜ್ಞಾರೂಪ, ವ್ಯಂಗ್ಯೋಕ್ತಿ) ಖಂಡಿತ ನಂಬಉ: trust him to get it wrong ಅವನು ಅದನ್ನು ತಪ್ಪಾಗಿ ಗ್ರಹಿಸುತ್ತಾನೆಂಬಉದನ್ನು ಖಂಡಿತ ನಂಬಉ (ಅವನು ಅದನ್ನು ತಪ್ಪಾಗಿ ಗ್ರಹಿಸುವುದರಲ್ಲಿ ಒಂದಿಷ್ಟೂ ಸಂದೇಹವಿಲ್ಲ).
  3. (ವಸ್ತು ಮೊದಲಾದವನ್ನು, ಒಬ್ಬನ ವಶಕ್ಕೆ) ನಂಬಿಕೊಡು; (ಒಂದು ಸ್ಥಳದಲ್ಲಿ, ಒಬ್ಬನ ವಶದಲ್ಲಿ) ನಂಬಿ ಇಡು, ಬಿಡು; ನ್ಯಾಸವಿಡು.
  4. (ಗಿರಾಕಿಗೆ) ಖಾತ್ರಿಯ ಮೇಲೆ ಸರಕು (ಮೊದಲಾದವನ್ನು) ಸಾಲ ಕೊಡು.
  5. ನಂಬಉ; ನಂಬಿಕೊಂಡಿರು: I trust he is not hurt ಅವನಿಗೆ ಗಾಯವಾಗಿಲ್ಲವೆಂದು (ಯಾ ನೋವಾಗಿಲ್ಲವೆಂದು) ನಾನು ನಂಬಿದ್ದೇನೆ.
  6. (ನಡೆಯುತ್ತದೆಯೆಂದು, ಘಟಿಸುವುದೆಂದು) ನಂಬಿರು; ವಿಶ್ವಾಸವಿಟ್ಟಿರು; ಭರವಸೆ ಹೊಂದಿರು: I trust you will not be late ನೀನು ತಡಮಾಡುವುದಿಲ್ಲವೆಂದು ನಂಬಿದ್ದೇನೆ. I trust that she is recovering ಅವಳು ಚೇತರಿಸಿ ಕೊಳ್ಳುತ್ತಿದ್ದಾಳೆಂಬ ಭರವಸೆ ಹೊಂದಿದ್ದೇನೆ.
  7. (ವ್ಯಕ್ತಿಯು ಯಾವುದೇ ವಸ್ತುವನ್ನು ಸರಿಯಾಗಿ ಇಟ್ಟುಕೊಂಡಿದ್ದಾನೆ ಯಾ ಬಳಸುತ್ತಾನೆ ಎಂಬ) ನಂಬಿಕೆ ಹೊಂದಿರು, ಇಟ್ಟಿರು; ವಿಶ್ವಾಸ, ನೆಚ್ಚಿಕೆ–ಇರಿಸು: am reluctant to trust them with my books ನನ್ನ ಪುಸ್ತಕಗಳನ್ನು ಅವರು ಸರಿಯಾಗಿ ಉಪಯೋಗಿಸುತ್ತಾರೆಂದು ಯಾ ಇಟ್ಟುಕೊಂಡಿರುತ್ತಾರೆಂದು ನನಗೆ ನಂಬಿಕೆಯಿಲ್ಲ.
ಅಕರ್ಮಕ ಕ್ರಿಯಾಪದ

ನಂಬಉ; ನಂಬಿಕೆ ಇಡು; ವಿಶ್ವಾಸವಿಡು.

ಪದಗುಚ್ಛ

trust to ಅತಿ ನಂಬಿಕೆ ಇಡು; ಅತಿಯಾಗಿ ನೆಚ್ಚು: does not do to trust to memory in these things ಈ ವಿಷಯಗಳಲ್ಲಿ ನಮ್ಮ ನೆನಪನ್ನು ನಂಬಿ ಪ್ರಯೋಜನವಿಲ್ಲ (ನಮಗೆ ಎಲ್ಲಾ ವಿವರಗಳೂ ನೆನಪಿರುತ್ತವೆಂದು ನಂಬಬಾರದು). shall have to trust to luck ಅದೃಷ್ಟವನ್ನು ನಂಬಬೇಕಾಗುತ್ತದೆ.