1 trench
ಟ್ರೆಂಚ್
ಸಕರ್ಮಕ ಕ್ರಿಯಾಪದ
(ನೆಲದಲ್ಲಿ) ಹಳ್ಳ, ಕಾಲುವೆ, ಕಂದಕ, ಅಗಳು–ತೋಡು, ಅಗೆ, ತೆಗೆ.
ಕಂದಕ ಅಗತೆ ಮಾಡು; ತೋಡಗತೆ ಮಾಡು; (ಹೊಲ, ಗದ್ದೆ, ತೋಟ, ಮೊದಲಾದವುಗಳಲ್ಲಿ) ಪಕ್ಕ ಪಕ್ಕದಲ್ಲಿ ಆಳವಾದ ಸಮಾನಾಂತರ ಕಂದಕಗಳನ್ನು ತೋಡಿ, ಮಣ್ಣನ್ನು ಮಗುಚಿ ಹಾಕು.
ಅಕರ್ಮಕ ಕ್ರಿಯಾಪದ
(ಪ್ರಾಚೀನ ಪ್ರಯೋಗ) (ಒಬ್ಬನ ಹಕ್ಕು, ಏಕಾಂತ, ಮೊದಲಾದವುಗಳ ಮೇಲೆ) ಆಕ್ರಮಣ ಮಾಡು; ಅತಿಕ್ರಮಿಸು; ಒತ್ತುವರಿ ಮಾಡು.
(ಪ್ರಾಚೀನ ಪ್ರಯೋಗ) (ಅಸಭ್ಯತೆ, ಪಾಷಂಡಿತನ, ಮೊದಲಾದವುಗಳ) ಅಂಚಿನಲ್ಲಿರು; ಹತ್ತಿರವಿರು: his remarks were trenching on poor taste ಅವನ ಟೀಕೆಗಳು ಕೀಳು ಅಭಿರುಚಿಗೆ ಹತ್ತಿರವಾಗಿದ್ದವು.
2 trench
ಟ್ರೆಂಚ್
ನಾಮವಾಚಕ
ಹಳ್ಳ; ಕಾಲುವೆ; ತೋಡು; ಕಂದಕ; ಅಗಳು.
(ಸೈನ್ಯ)
(ತೋಡಿದ ಹಳ್ಳದಲ್ಲಿ ನಿಂತು ಶತ್ರುಗಳ ಗುಂಡೇಟಿನಿಂದ ರಕ್ಷಿಸಿಕೊಳ್ಳಲು ಅಗೆದ ಮಣ್ಣನ್ನು ಕಾಪುಗೋಡೆಯಾಗಿ ಒಟ್ಟಿದ) ಅಗಳು; ಕಂದಕ.
(ಬಹುವಚನದಲ್ಲಿ) ಕಂದಕ ರಕ್ಷಣಾ ವ್ಯವಸ್ಥೆ.
ಕಡ–ನಾಲೆ, ಕಂದಕ; ಸಮುದ್ರತಳದಲ್ಲಿ ಕಿರಿ ಅಗಲದ ಆಳವಾದ ಪ್ರದೇಶ.