See also 2trench
1trench ಟ್ರೆಂಚ್‍
ಸಕರ್ಮಕ ಕ್ರಿಯಾಪದ
  1. (ನೆಲದಲ್ಲಿ) ಹಳ್ಳ, ಕಾಲುವೆ, ಕಂದಕ, ಅಗಳು–ತೋಡು, ಅಗೆ, ತೆಗೆ.
  2. ಕಂದಕ ಅಗತೆ ಮಾಡು; ತೋಡಗತೆ ಮಾಡು; (ಹೊಲ, ಗದ್ದೆ, ತೋಟ, ಮೊದಲಾದವುಗಳಲ್ಲಿ) ಪಕ್ಕ ಪಕ್ಕದಲ್ಲಿ ಆಳವಾದ ಸಮಾನಾಂತರ ಕಂದಕಗಳನ್ನು ತೋಡಿ, ಮಣ್ಣನ್ನು ಮಗುಚಿ ಹಾಕು.
ಅಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) (ಒಬ್ಬನ ಹಕ್ಕು, ಏಕಾಂತ, ಮೊದಲಾದವುಗಳ ಮೇಲೆ) ಆಕ್ರಮಣ ಮಾಡು; ಅತಿಕ್ರಮಿಸು; ಒತ್ತುವರಿ ಮಾಡು.
  2. (ಪ್ರಾಚೀನ ಪ್ರಯೋಗ) (ಅಸಭ್ಯತೆ, ಪಾಷಂಡಿತನ, ಮೊದಲಾದವುಗಳ) ಅಂಚಿನಲ್ಲಿರು; ಹತ್ತಿರವಿರು: his remarks were trenching on poor taste ಅವನ ಟೀಕೆಗಳು ಕೀಳು ಅಭಿರುಚಿಗೆ ಹತ್ತಿರವಾಗಿದ್ದವು.