See also 2tread
1tread ಟ್ರೆಡ್‍
ಕ್ರಿಯಾಪದ
(ಭೂತರೂಪ trod ಉಚ್ಚಾರಣೆ ಟ್ರಾಡ್‍;
ಸಕರ್ಮಕ ಕ್ರಿಯಾಪದ
  1. ನಡೆ; ತಿರುಗಾಡು; ಕಾಲು ಹಾಕು; ಹೆಜ್ಜೆಯಿಡು: treads a perilous path ಅಪಾಯದ ದಾರಿಯಲ್ಲಿ ನಡೆದಿದ್ದಾನೆ. trod the room from end to end ಕೋಣೆಯಲ್ಲಿ ಆ ತುದಿಯಿಂದ ಈ ತುದಿಯವರೆಗೆ ತಿರುಗಾಡಿದ.
  2. ಕಾಲಿನಿಂದ–ತುಳಿ, ಮೆಟ್ಟು, ಒತ್ತು, ಹಿಸುಕು, ನಜ್ಜುಗುಜ್ಜು ಮಾಡು.
  3. (ನೆಲದ ಮೇಲೆ ಕಾಲಿನ ಧೂಳು, ಕೊಳೆ, ಮೊದಲಾದವುಗಳಿಂದ) ಹೆಜ್ಜೆ ಮೂಡಿಸು; ಜಾಡು ಬೀಳಿಸು; ದಾರಿ ಮಾಡು.
  4. ನಡೆ; ಹೆಜ್ಜೆಹಾಕು; ನಡಗೆಯ ಮೂಲಕ ಸಾಧಿಸು: trod ten hurried paces ಹತ್ತು ಆತುರದ ಹೆಜ್ಜೆ ಹಾಕಿದ.
  5. ತುಳಿದು ತೂತು, ಹಳ್ಳ, ಮೊದಲಾದವನ್ನು ಮಾಡು.
  6. (ಹುಂಜ ಮೊದಲಾದ ಗಂಡುಪಕ್ಷಿಗಳ ವಿಷಯದಲ್ಲಿ) (ಹೇಂಟೆಯೊಡನೆ) ಕೂಡು; ಸಂಗ ಮಾಡು ( ಅಕರ್ಮಕ ಕ್ರಿಯಾಪದ ಸಹ).
ಅಕರ್ಮಕ ಕ್ರಿಯಾಪದ
    1. ನಡೆ; ನಡೆದಾಡು; ಕಾಲಿಡು; ಹೆಜ್ಜೆ ಇಡು: do not tread on the grass ಹುಲ್ಲಿನ ಮೇಲೆ ನಡೆದಾಡಬೇಡ. trod on a snake ಹಾವಿನ ಮೇಲೆ ಕಾಲಿಟ್ಟ.
    2. tread in mud ಕೆಸರಲ್ಲಿ ಕಾಲಿಡು.
  1. (ಪಾದದ ವಿಷಯದಲ್ಲಿ) ತುಳಿ; ಮೆಟ್ಟು.
  2. ತುಳಿ; ತುಳಿದು, ಹೊಸಕಿ–ಹಾಕು; ಮೆಟ್ಟು; ದಮನಮಾಡು; ನಿರ್ದಯವಾಗಿ–ಬಗ್ಗುಬಡಿ, ಅಡಗಿಸು.
ಪದಗುಚ್ಛ
  1. fools rush in where angels fear to tread ದೇವತೆಗಳು ಸಹ ಹೆಜ್ಜೆ ಇಡಲು ಹೆದರಿ ಹಿಂಜರಿಯುವಂಥ ಸ್ಥಳಕ್ಕೆ ದಡ್ಡರು ದುಡುಂ ಪ್ರವೇಶ ಮಾಡುತ್ತಾರೆ.
  2. tread a measure (ಪ್ರಾಚೀನ ಪ್ರಯೋಗ) ನೃತ್ಯಮಾಡು.
  3. tread down
    1. ಕಾಲಕೆಳಗೆ–ತುಳಿ, ತುಳಿದುಹಾಕು, ಹೊಸಕಿ ಹಾಕು, ಧ್ವಂಸಮಾಡು.
    2. ಅಡಗಿಸು; ದಮನಮಾಡು.
  4. tread lightly (ಸೂಕ್ಷ್ಮವಾದ ವಿಷಯದಲ್ಲಿ) ಜಾಗರೂಕತೆಯಿಂದ ವರ್ತಿಸು; ಹುಷಾರಾಗಿ ನಿರ್ವಹಿಸು.
  5. tread on air
    1. ಸಂತೋಷದಿಂದ, ಖುಷಿಯಾಗಿ–ನಲಿದಾಡು.
    2. (ಆನಂದಪರವಶನಾದವನ ವಿಷಯದಲ್ಲಿ) ಆಕಾಶದಲ್ಲಿ ಸಾಗು; ಆಕಾಶದಲ್ಲಿ ನಡೆದಾಡುವಂತೆ ಹೆಜ್ಜೆಹಾಕು.
  6. tread on eggs (ಅತಿ ಚಾತುರ್ಯದಿಂದ ವರ್ತಿಸಬೇಕಾದ ಸಂದರ್ಭದಲ್ಲಿ) ಬಲು ನಾಜೂಕಿನಿಂದ ನಡೆದುಕೊ, ಬಹಳ ಎಚ್ಚರಿಕೆಯಿಂದ ವರ್ತಿಸು.
  7. tread on (person’s) toes (or corns).
    1. ಒಬ್ಬನ ಮನಸ್ಸು ನೋಯಿಸು.
    2. ವ್ಯಕ್ತಿಯ ಹಕ್ಕುಗಳನ್ನು, ಸವಲತ್ತುಗಳನ್ನು ಅತಿಕ್ರಮದಿಂದ ಆಕ್ರಮಿಸು, ಒತ್ತುವರಿ ಮಾಡು.
  8. tread on the heels of (ಘಟನೆಗಳ ವಿಷಯದಲ್ಲಿ) (ಒಂದು ಇನ್ನೊಂದರ) ಒಡನೆಯೇ, ಬೆನ್ನುಹತ್ತಿ, ಹಿಂದೆಯೇ–ಬರು; ಒಂದಾದಮೇಲೊಂದರಂತೆ, ಸಾಲುಸಾಲಾಗಿ–ಬರು.
  9. tread on the neck of (person) (ಒಬ್ಬನ ಮೇಲೆ ತನ್ನ ಒಡೆತನ ಮೆರೆಸಲು) ಕುತ್ತಿಗೆ, ತಲೆ–ಮೆಟ್ಟು.
  10. tread out
    1. (ಬೆಂಕಿ, ದಂಗೆ, ಮೊದಲಾದವನ್ನು) ತುಳಿದುಹಾಕು; ತುಳಿದು–ಆರಿಸು, ಅಡಗಿಸು.
    2. (ದ್ರಾಕ್ಷಿ ಮೊದಲಾದವನ್ನು) ತುಳಿ(ದು ರಸ ಹಿಸುಕು).
    3. (ಕಣದಲ್ಲಿ ತೆನೆಗಳನ್ನು) ತುಳಿ; ತುಳಿದು (ಕಾಳು) ವಿಂಗಡಿಸು, ಧಾನ್ಯ ಒಕ್ಕು.
  11. tread the boards (or stage) ರಂಗದ ಮೇಲೆ ಬರು; ನಟನಾಗಿರು.
  12. tread under foot
    1. ತಿರಸ್ಕಾರದಿಂದ ಕಾಣು.
    2. ಧ್ವಂಸಮಾಡು; ನಾಶಗೊಳಿಸು.
    3. ಕಾಲಿನಿಂದ–ಹೊಸಕಿಹಾಕು, ತುಳಿದುಹಾಕು.
  13. tread water ಆಳವಾದ ನೀರಿನಲ್ಲಿ ನೆಟ್ಟಗೆ ನಡೆ; ನಿಲುವೀಜು ಈಜು.
See also 1tread
2tread ಟ್ರೆಡ್‍
ನಾಮವಾಚಕ
  1. ನಡಗೆ; ನಡೆಯುವ ರೀತಿ: recognized his heavy tread ಅವನ ಭಾರದ ನಡಗೆಯನ್ನು ಗುರುತಿಸಿದ.
  2. ಕಾಲಸಪ್ಪಳ; ಹೆಜ್ಜೆ(ಯ ಸದ್ದು).
  3. (ಗಂಡುಹಕ್ಕಿಯ ವಿಷಯದಲ್ಲಿ) ಸಂಗ; ಮೈಥುನ(ಕ್ರಿಯೆ) ಕೂಟ.
  4. = chalaza.
  5. = tread-board.
  6. (ಕಂಬಿಯ) ಸ್ಪರ್ಶಭಾಗ; ಸೋಕುಮೈ; ನೆಲವನ್ನು ಯಾ ಕಂಬಿಯನ್ನು ಸೋಕುವ ಚಕ್ರದ ಭಾಗ ಯಾ ಚಕ್ರವನ್ನು ಸೋಕುವ ಕಂಬಿಯ ಭಾಗ.
  7. (ಪಾದರಕ್ಷೆಯಲ್ಲಿ) ಅಟ್ಟೆ; ನೆಲ ಸೋಕುವ ಭಾಗ.
  8. (ನೆಲದ ಮೇಲೆ ಹಿಡಿತ ಸಾಧಿಸಲು ಗೊತ್ತಾದ ಆಕಾರದಲ್ಲಿ ಅಚ್ಚುಹಾಕಿರುವ) ವಾಹನದ ಟೈರಿನ ಭಾಗ.
ಪದಗುಚ್ಛ

with cautious tread ಎಚ್ಚರಿಕೆಯ ಹೆಜ್ಜೆಯಿಂದ; ಹುಷಾರಾಗಿ ಹೆಜ್ಜೆ ಹಾಕುತ್ತ.