See also 2touch
1touch ಟಚ್‍
ಸಕರ್ಮಕ ಕ್ರಿಯಾಪದ
  1. ಮುಟ್ಟು; ಸೋಕು; ತಾಕು; ಸ್ಪರ್ಶಿಸು.
  2. (ಕೈ ಮೊದಲಾದವನ್ನು) ಮುಟ್ಟಿಸು; ಮುಟ್ಟುವಂತೆ ಮಾಡು; ಸೋಕಿಸು; ತಾಕಿಸು.
  3. (ಎರಡು ವಸ್ತುಗಳನ್ನು) ಪರಸ್ಪರ ತಾಕುವಂತೆ ಮಾಡು; ತಾಗಿಸು; ಮುಟ್ಟಿಸು: they touched hands ಅವರು ಪರಸ್ಪರ ಕೈಮುಟ್ಟಿಸಿದರು.
  4. (ಜ್ಯಾಮಿತಿ) ಸ್ಪರ್ಶಿಸು; (ಯಾವುದೇ ವಕ್ರಕ್ಕೆ) ಸ್ಪರ್ಶರೇಖೆಯಾಗು.
  5. (ವಾದ್ಯದ ತಂತಿ, ಮನೆ, ಮೊದಲಾದವನ್ನು) ಒತ್ತು; ಅದುಮು; ಮಿಡಿ; ಮೀಟು.
  6. (ಕೂರ್ಚ, ಸೀಸದ ಕಡ್ಡಿ, ಮೊದಲಾದವುಗಳಿಂದ, ಮುಖಭಾವ ಮೊದಲಾದವನ್ನು) ತೆಳ್ಳಗೆ ಗುರುತಿಸು; ರೇಖಿಸು; ನಸುಗೆರೆಗಳಿಂದ ಚಿತ್ರಿಸು, ತಿದ್ದು.
  7. (ಉಷ್ಣಮಾಪಕ ಮೊದಲಾದವುಗಳ ವಿಷಯದಲ್ಲಿ, ಪಾದರಸ ಮೊದಲಾದವು ಮುಖ್ಯವಾಗಿ ಕ್ಷಣಕಾಲ) ಏರು; ಮುಟ್ಟು; ತಲಪು: thermometer touched $90^\circ$ ಉಷ್ಣಮಾಪಕವು 90 ಡಿಗ್ರಿಯನ್ನು ಮುಟ್ಟಿತು.
  8. (ಸಾಮಾನ್ಯವಾಗಿ ನಿಷೇಧ ಪ್ರಯೋಗಗಳಲ್ಲಿ) (ಶ್ರೇಷ್ಠತೆ ಮೊದಲಾದವುಗಳಲ್ಲಿ) ಸಮಕ್ಕೆ ಬರು; ಸರಿಗಟ್ಟು; ಸಮವಾಗು: no one can touch him in light comedy ಲಘು ವೈನೋದಿಕ ರಚಿಸುವುದರಲ್ಲಿ ಅವನ ಸಮಕ್ಕೆ ಬರುವವರು ಯಾರೂ ಇಲ್ಲ.
  9. ಮನಮುಟ್ಟು; ಮನ ಕರಗಿಸು; ಮನಸ್ಸಿಗೆ ತಟ್ಟು: it touched me to the heart ಅದು ನನ್ನ ಹೃದಯ ಕರಗಿಸಿತು.
  10. (ಮನಸ್ಸನ್ನು) ನಾಟು; ಇರಿ; ನೋಯಿಸು; ಕೆರಳಿಸು: it touched him to the quick ಅದು ಅವನ ಮರ್ಮವನ್ನು ಇರಿಯಿತು.
  11. (ವಿಷಯವನ್ನು) ಸ್ವಲ್ಪಮಾತ್ರ ಸೂಚಿಸು; ಸ್ಥೂಲವಾಗಿ ಪ್ರಸ್ತಾಪಿಸು.
  12. ಸಂಬಂಧಿಸಿರು; ಕುರಿತಿರು: the question touches you closely ಆ ಪ್ರಶ್ನೆ ನಿಕಟವಾಗಿ ನಿನಗೆ ಸಂಬಂಧಿಸಿದೆ.
  13. (ಮುಖ್ಯವಾಗಿ ನಿಷೇಧ ಪ್ರಯೋಗಗಳಲ್ಲಿ ಮಾತ್ರ) ಮುಟ್ಟು:
    1. ಕೆದರು; ಕದಲಿಸು; ಚೆಲ್ಲಾಡು; ಕೆಡಿಸು: don’t touch my things ನನ್ನ ಸಾಮಾನುಗಳನ್ನು ಮುಟ್ಟಬೇಡ, ಕೆದರಬೇಡ.
    2. ಸೇವಿಸು; ತಿನ್ನು: dare not touch alcohol ಮದ್ಯವನ್ನು ಮುಟ್ಟುವ (ಕುಡಿಯುವ)ಧೈರ್ಯವಿಲ್ಲ (ಮುಟ್ಟಕೂಡದು ಎಂಬರ್ಥದಲ್ಲಿ). has not touched her breakfast ಅವಳು ಉಪಾಹಾರ ಮುಟ್ಟಿಲ್ಲ (ಸೇವಿಸಿಲ್ಲ).
    3. ಸಂಬಂಧ ಹೊಂದಿರು; ವ್ಯವಹಾರ ನಡೆಸು: don’t touch farming ಕೃಷಿ ಮುಟ್ಟಬೇಡ; ವ್ಯವಸಾಯಕ್ಕೆ ಕೈಹಾಕಬೇಡ.
    4. ಬಳಸು: need not touch your savings ನಿನ್ನ ಉಳಿತಾಯದ ಹಣವನ್ನು ಬಳಸಬೇಕಾಗಿಲ್ಲ.
  14. ಹಾನಿಯುಂಟುಮಾಡು; ಕೆಡಿಸು; ಹಾಳುಮಾಡು: blossom is a little touched by the frost ಹಿಮ ಬಿದು ಹೂವು ಸ್ವಲ್ಪ ಹಾಳಾಗಿದೆ.
  15. ಸ್ವಲ್ಪ ಪರಿಣಾಮ ಬೀರು; ಮಾರ್ಪಾಡು ಮಾಡು; ವ್ಯತ್ಯಾಸ ಮಾಡು: morality touched with emotion ರಾಗಭಾವಗಳಿಂದ ಮಾರ್ಪಾಟಾದ ನೈತಿಕ ಪ್ರಜ್ಞೆ. brass-polish won’t touch these candle sticks ಹಿತ್ತಾಳೆಯ ಮೆರುಗು ಈ ದೀಪದ ಕಂಬಗಳ ಮೇಲೆ ಯಾವ ಪರಿಣಾಮವನ್ನೂ ಬೀರಲಾರದು (ಮೆರುಗು ಈ ಕಂಬಗಳಿಗೆ ಹತ್ತುವುದಿಲ್ಲ).
  16. (ಒಂದರ ಜತೆ) ಹೆಣಗಾಡು; ನಿಭಾಯಿಸು; ಏಗು: couldn’t touch the Algebra paper ಬೀಜಗಣಿತದ (ಪ್ರಶ್ನ)ಪತ್ರಿಕೆಯನ್ನು ನಾನು ನಿಭಾಯಿಸಲಾರದೆ ಹೋದೆ.
  17. (ಇಂಗ್ಲಿಷ್‍ ಚರಿತ್ರೆ) (ರಾಜನು) ರೋಗಿಯ ಗಂಡಮಾಲೆ ಪರಿಹಾರಾರ್ಥವಾಗಿ ಅವನನ್ನು ಕೈಯಿಂದ ಮುಟ್ಟು.
  18. (ಅಶಿಷ್ಟ) (ಒಬ್ಬನಿಂದ) (ಸಾಲವಾಗಿ ಯಾ ಇನಾಮಾಗಿ) ಹಣ ಕೀಳು, ಪಡೆ: he touched me Rs.50 ಅವನು ನನ್ನಿಂದ ಐವತ್ತು ರೂಪಾಯಿ (ಹಣ) ಕಿತ್ತ.
ಅಕರ್ಮಕ ಕ್ರಿಯಾಪದ

(ಎರಡು ವಸ್ತುಗಳು ಮೊದಲಾದವುಗಳ ವಿಷಯದಲ್ಲಿ) ಒಂದಕ್ಕೊಂದು ಹತ್ತಿರದಲ್ಲಿರು, ಮುಟ್ಟಿರು, ಮುಟ್ಟುವಂತಿರು; ತಾಕಿರು: the walls were touching ಗೋಡೆಗಳು ಒಂದಕ್ಕೊಂದು ತಾಕಿದ್ದವು.

ಪದಗುಚ್ಛ
  1. touch at (ನೌಕಾಯಾನ) (ರೇವು ಪಟ್ಟಣ ಮೊದಲಾದವುಗಳಲ್ಲಿ) ಹೊಕ್ಕು ಹೋಗು; ತಂಗಿ ಹೋಗು.
  2. touch $^1$bottom.
  3. touch down
    1. (ರಗ್ಬಿ ಕಾಲ್ಚೆಂಡಾಟ ಯಾ ಅಮೆರಿಕನ್‍ ಕಾಲ್ಚೆಂಡಾಟದಲ್ಲಿ) (ತನ್ನ ಯಾ ಎದುರಾಳಿಯ) ಗೋಲಿನ ಹಿಂದೆ ಚೆಂಡುಸಹಿತ ನೆಲಮುಟ್ಟು.
    2. (ವಿಮಾನ) ನೆಲಮುಟ್ಟು; ಕೆಳಕ್ಕಿಳಿ.
  4. touch off
    1. (ಚಿತ್ರ ಮೊದಲಾದವುಗಳಲ್ಲಿ) ಕರಾರುವಾಕ್ಕಾಗಿ ಚಿತ್ರಿಸು; ರೂಪಿಸು.
    2. (ಬೆಂಕಿಕಡ್ಡಿ ಮೊದಲಾದವುಗಳನ್ನು ಗೀರಿದಾಗ) ಸ್ಫೋಟಿಸು; ಬೆಂಕಿ ಹೊತ್ತಿಕೊ.
    3. (ಕಾರ್ಯವಿಧಾನ, ಪ್ರಕ್ರಿಯೆ, ಮೊದಲಾದವನ್ನು) ಫಕ್ಕನೆ ಪ್ರಾರಂಭಿಸು.
  5. touch on (or upon)
    1. (ವಿಷಯವನ್ನು) ಸ್ಥೂಲವಾಗಿ, ಸಂಕ್ಷೇಪವಾಗಿ–ಪ್ರಸ್ತಾಪಿಸು.
    2. ಅಂಚಿನಲ್ಲಿರು; ಸಮೀಪವಾಗಿರು: that touches on impudence ಅದು ಔದ್ಧತ್ಯಕ್ಕೆ ಸಮೀಪವಾಗಿದೆ, ಔದ್ಧತ್ಯದಂತಿದೆ.
  6. touch one’s hat (ತನ್ನ ಟೋಪಿ ಮುಟ್ಟಿ) ನಮಸ್ಕರಿಸು; ವಂದಿಸು.
  7. touch pitch ಕೆಸರು ಮುಟ್ಟು; ಕೆಸರಿಗೆ ಕೈಹಾಕು; ಕಳಂಕಾಸ್ಪದ, ಶಂಕಾಸ್ಪದ ಕೆಲಸದಲ್ಲಿ ಕೈ ಹಾಕು; ಕಳಂಕಾಸ್ಪದ, ಶಂಕಾಸ್ಪದ ವ್ಯಕ್ತಿಯೊಡನೆ ವ್ಯವಹರಿಸು.
  8. touch the spot (ಆಡುಮಾತು) ಅಗತ್ಯವಾದುದನ್ನು, ಅಪೇಕ್ಷಿತವಾದುದನ್ನು–ತಿಳಿದುಕೊ ಯಾ ಮಾಡು.
  9. touch up
    1. (ಚಿತ್ರ, ಬರವಣಿಗೆ, ಮೊದಲಾದವನ್ನು) ತಿದ್ದು; ಪರಿಷ್ಕರಿಸು; ಒಪ್ಪಕೊಡು.
    2. (ಕುದುರೆಯನ್ನು) ಚಾವಟಿಯಿಂದ ಮೆಲ್ಲಗೆ ಹೊಡೆ.
    3. (ನೆನಪನ್ನು) ಕುದುರಿಸು; ಚುರುಕಾಗಿಸು.
    4. (ಬ್ರಿಟಿಷ್‍ ಪ್ರಯೋಗ)(ಅಶಿಷ್ಟ) ಲೈಂಗಿಕವಾಗಿ ಉದ್ರೇಕವಾಗುವಂತೆ ಮುದ್ದಾಡು.
    5. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಬಲವಂತವಾಗಿ ಸಂಭೋಗಿಸು; ಅತ್ಯಾಚಾರ ಮಾಡು.
  10. touch wood ದುರದೃಷ್ಟವನ್ನು ತಪ್ಪಿಸಿಕೊಳ್ಳಲು ಯಾವುದಾದರೂ ಮರದ ಸಾಮಾನು ಮುಟ್ಟು.
  11. wouldn’t touch (person) with a barge-pole.
See also 1touch
2touch ಟಚ್‍
ನಾಮವಾಚಕ
  1. ಮುಟ್ಟುವುದು; ಸೋಕು; ಸೋಕುವುದು; ತಾಕುವುದು; ಸ್ಪರ್ಶ(ನ): felt a touch on my arm ನನ್ನ ತೋಳನ್ನು (ಯಾರೋ) ಮುಟ್ಟಿದ ಅನುಭವವಾಯಿತು.
    1. (ಮುಖ್ಯವಾಗಿ ಶರೀರದಿಂದ ಯಾ ಬೆರಳುಗಳಿಂದ ಆದ) ಸ್ಪರ್ಶಜ್ಞಾನ; ಮುಟ್ಟುವ ಮೂಲಕ ಅರಿವು ಪಡೆಯುವ ಶಕ್ತಿ: has no sense of touch in her right arm ಅವಳ ಬಲತೋಳಿನಲ್ಲಿ ಸ್ಪರ್ಶಜ್ಞಾನವಿಲ್ಲ.
    2. ಸ್ಪರ್ಶೇಂದ್ರಿಯ.
    3. ಸ್ಪರ್ಶ; ಸ್ಪರ್ಶಿಸುವ ಮೂಲಕ ಅರಿತ (ವಸ್ತು ಮೊದಲಾದವುಗಳ) ಗುಣಗಳು: the soft touch of silk ರೇಷ್ಮೆಯ ಮೃದುಸ್ಪರ್ಶ.
  2. (ಮುಖ್ಯವಾಗಿ ಬಹುವಚನದಲ್ಲಿ) (ಚಿತ್ರ ಕೆಲಸದಲ್ಲಿ ಕುಂಚ, ಸೀಸದಕಡ್ಡಿ, ಮೊದಲಾದವುಗಳ) ನಸುಗೆರೆ; ಲಘು ಸ್ಪರ್ಶ: added a few touches (ಚಿತ್ರಕ್ಕೆ) ಕೆಲವು ನಸುಗೆರೆಗಳನ್ನು ಸೇರಿಸಿದ.
  3. ಕೊಂಚ; ಸ್ವಲ್ಪ; ರವೆಯಷ್ಟು(ಪ್ರಮಾಣ); ಕ್ವಚಿತ್‍; ಸುಳಿವು; ಛಾಯೆ: wants a touch of salt ಒಂದು ಸ್ವಲ್ಪ ಉಪ್ಪು ಸಾಲದಾಗಿದೆ. a touch of colour in her cheeks ಅವಳ ಕೆನ್ನೆಗಳಲ್ಲಿ ಸ್ವಲ್ಪ ಕೆಂಪುಬಣ್ಣದ ಛಾಯೆ. an occasional touch of irony ಕ್ವಚಿತ್‍ ವ್ಯಂಗ್ಯದ ಸುಳಿವು.
  4. ಸವರಿಕೊಂಡು ಹೋಗುವುದು; ಸ್ವಲ್ಪದರಲ್ಲಿ ಪಾರು (ಆಗುವುದು).
    1. ವಾದನ ರೀತಿ; ವಾದ್ಯಗಾರನು ತಂತಿ ಮೀಟುವ, ಕೀಲಿ ಒತ್ತುವ ರೀತಿ: has a firm on piano ಅವನು ಪಿಯಾನೋ ವಾದನದಲ್ಲಿ ಗಟ್ಟಿಗ; ಅವನಿಗೆ ಪಿಯಾನೋ ಮೇಲೆ ಒಳ್ಳೆಯ ಹಿಡಿತವಿದೆ.
    2. ಮಿಡಿತ; ನುಡಿತ; ಮೀಟಿದಾಗ ವಾದ್ಯದ ಕೀಲಿಗಳು ಯಾ ತಂತಿಗಳು ಪ್ರತಿಕ್ರಿಯಿಸುವ ರೀತಿ.
    1. (ಕೆತ್ತನೆ, ಲೇಖನ, ಮೊದಲಾದವುಗಳ) ರೀತಿ; ಶೈಲಿ; ಕೈವಾಡ; ಕುಶಲತೆ: the writer has light touch ಆ ಲೇಖಕನ ಶೈಲಿ ಲಲಿತವಾಗಿದೆ (ಅವನದು ನವುರಾದ ಕಲಾಕುಶಲತೆ).
    2. ವಿಶಿಷ್ಟ ಗುಣ ಯಾ ಲಕ್ಷಣ: a professional touch ಕಸುಬಉದಾರಿಕೆ; ವೃತ್ತಿಗುಣ.
  5. ಮಾನಸಿಕ ಸಂಪರ್ಕ; ಅಂತಃಕರಣ ಸಂಬಂಧ: to be out of touch with reality ವಾಸ್ತವಿಕ ಜೀವನದ ಸಂಪರ್ಕವಿಲ್ಲದಿರುವುದು.
  6. (ಪ್ರಾಚೀನ ಪ್ರಯೋಗ) ಒರೆಗಲ್ಲು; ಪರೀಕ್ಷೆ: put it to the touch ಅದನ್ನು ಒರೆಹಚ್ಚಿ ನೋಡು.
  7. (ಕಾಲ್ಚೆಂಡಾಟ) ಹೊರಬದಿ; ಆಟದ ಬಯಲಿನ ಪಕ್ಕ ಎಲ್ಲೆಗಳ ಹೊರಬದಿ.
  8. (ಅಶಿಷ್ಟ)
    1. (ಒಬ್ಬನಿಂದ) ಸಾಲವಾಗಿ ಯಾ ಬೇರೆ ರೀತಿಯಲ್ಲಿ ಹಣ ಕೇಳುವುದು ಮತ್ತು ಪಡೆಯುವುದು.
    2. ಯಾರಿಂದ ಹಣ ಕಸಿಯಬೇಕೋ ಆತ.
  9. = 2tag\((2)\).
  10. ಸ್ವಲ್ಪ–ವ್ಯತ್ಯಾಸ, ಮಾರ್ಪಾಡು, ಪರಿಷ್ಕಾರ: the speech needs a few touches ಭಾಷಣದಲ್ಲಿ ಕೆಲವು ಮಾರ್ಪಾಡು ಮಾಡಬೇಕು.
ಪದಗುಚ್ಛ
  1. at a touch ಸ್ವಲ್ಪ ಮುಟ್ಟಿದರೆ; ಸ್ವಲ್ಪ ಮುಟ್ಟಿದಷ್ಟಕ್ಕೆ: opened at a touch ಮುಟ್ಟಿದಷ್ಟಕ್ಕೇ ತೆರೆದುಕೊಂಡಿತು.
  2. a touch ಕಿಂಚಿತ್ತು: is a touch too arrogant ಸ್ವಲ್ಪ ದುರಹಂಕಾರಿ.
  3. finishing touch (or touches) (ಲೇಖನ, ವ್ಯವಹಾರ, ಉಸ್ತುವಾರಿ, ಮೊದಲಾದವುಗಳ ವಿಷಯದಲ್ಲಿ) ಒಪ್ಪವಿಡುವ ಕೆಲಸ; ಪರಿಷ್ಕರಣ; ಮುಕ್ತಾಯ ಸಂಸ್ಕಾರ; ಕೃತಿ ಮೊದಲಾದವನ್ನು ಪೂರ್ಣಗೊಳಿಸಿ ಅವುಗಳ ಗುಣಮಟ್ಟ ಹೆಚ್ಚಿಸುವ ಕೊನೆಯ ಹಂತದ ವಿವರಗಳು.
  4. get in (or into) touch with ಸಂಪರ್ಕ ಹೊಂದಿರು; ಸಂಪರ್ಕಿಸು.
  5. put in(to) touch with ಸಂಪರ್ಕ ಯಾ ಸಂಬಂಧ ಏರ್ಪಡಿಸು.
  6. in touch (with)
    1. ಸಂಪರ್ಕ, ಸಂಬಂಧ ಇಟ್ಟುಕೊಂಡು: still in touch after all these years ಇಷ್ಟು ವರ್ಷಗಳ ತರುವಾಯವೂ ಸಂಪರ್ಕ ಇರಿಸಿಕೊಂಡು.
    2. (ಮುಖ್ಯವಾಗಿ ಸುದ್ದಿ ಸಮಾಚಾರ ಮೊದಲಾದವುಗಳ ವಿಷಯದಲ್ಲಿ) ಇಂದಿನವರೆಗೆ; ಸದ್ಯದತನಕ: in touch with events ಸದ್ಯದ ಸಂಗತಿಗಳವರೆಗೆ ಅರಿತಿದ್ದು.
    3. ಅರಿವಿದ್ದು; ಅರಿವು–ಹೊಂದಿದ್ದು, ಪಡೆದಿದ್ದು: not in touch with her own feelings ತನ್ನದೇ ಭಾವಗಳ ಅರಿವಿಲ್ಲದಿದ್ದ.
  7. keep in touch (with)
    1. ಅರಿತಿರು; ಅರಿವು ಹೊಂದಿರು: keep in touch (with) the latest developments ಇತ್ತೀಚಿನ ಬೆಳೆವಣಿಗೆಗಳ ಅರಿವು ಹೊಂದಿರು.
    2. ಸಂಪರ್ಕ, ಸಂಬಂಧ ಇಟ್ಟುಕೊಂಡಿರು; ಪತ್ರವ್ಯವಹಾರ, ಸ್ನೇಹ, ಮೊದಲಾದವನ್ನು ಮುಂದುವರಿಸಿರು.
  8. lose touch (with)
    1. ಅರಿಯದಾಗಿರು; ಅರಿಯದೆ ಹೋಗು.
    2. (ಬೇರೊಬ್ಬರ ಜೊತೆ) ವ್ಯವಹಾರ ಯಾ ಸಂಪರ್ಕ ಕಳೆದುಕೊ.
  9. lose one’s touch ಅಭ್ಯಾಸ ತಪ್ಪಿಹೋಗು; ತನ್ನ ರೂಢಿಯ ಕೌಶಲ ತೋರಿಸದಿರು.
  10. out of touch (with)
    1. ಸಂಪರ್ಕ, ಸಂಬಂಧ, ವ್ಯವಹಾರ - ತಪ್ಪಿರು, ಕಳೆದುಕೊಂಡಿರು.
    2. ಆಧುನಿಕವಾಗಿಲ್ಲದಿರು; ಇಂದಿನದನ್ನು ತಿಳಿಯದಿರು.
    3. ಅರಿವು ಯಾ ಸಹಾನುಭೂತಿಇಲ್ಲದಿರು: out of touch with his son’s beliefs ತನ್ನ ಮಗನ ನಂಬಿಕೆಗಳನ್ನು ಅರಿತಿರದೆ ಯಾ ಅವುಗಳ ಬಗ್ಗೆ ಸಹಾನುಭೂತಿಯಿಲ್ಲದೆ.
  11. personal touch ವೈಯಕ್ತಿಕ ರೀತಿ; ಪರಿಸ್ಥಿತಿಯೊಂದರ ಬಗ್ಗೆ ಒಬ್ಬನ ವಿಶಿಷ್ಟ ಯಾ ವೈಯಕ್ತಿಕ ರೀತಿ ರಿವಾಜು, ನಡವಳಿಕೆ, ಮೊದಲಾದವು.
  12. the Nelson touch (ಒಂದು ಸಂದರ್ಭವನ್ನು ನಿರ್ವಹಿಸುವುದರಲ್ಲಿ) ಸಮರ್ಥ, ದಕ್ಷ ಯಾ ಸಹಾನುಭೂತಿಯಿಂದ ಕೂಡಿದ ಕೈವಾಡ, ಕುಶಲತೆ, ಜಾಣ್ಮೆ.
  13. touch of nature
    1. ಸಹಜ ಗುಣ.
    2. (ಆಡುಮಾತು) ಯಾವ ಸಂವೇದನೆಗೆ ಇತರರೂ ಪ್ರತಿಸ್ಪಂದಿಸುತ್ತಾರೋ ಅಂಥ ಭಾವ; ಅಂತಃಕರಣ.
  14. touch of the sun
    1. ಲಘುವಾದ ಸೂರ್ಯಾಘಾತ, ಬಿಸಿಲಿನ ಹೊಡೆತ.
    2. ತುಸು ಸೂರ್ಯನ ಬೆಳಕು; ಸೂರ್ಯನ ಮಂದಪ್ರಕಾಶ.
  15. to the touch ಮುಟ್ಟಿದಾಗ; ಮುಟ್ಟಿದರೆ; ಸ್ಪರ್ಶಕ್ಕೆ.