See also 1tag  3tag  4tag
2tag ಟ್ಯಾಗ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ tagged; ವರ್ತಮಾನ ಕೃದಂತ tagging).
  1. ಬಊಟಿನ ಲಾಡಿಗೆ ಲೋಹದ ಮೊನೆ ಹಾಕು.
  2. (ಸಾಹಿತ್ಯ ಕೃತಿಗೆ) ಅನುಬಂಧ ಯಾ ಅನುಬಂಧಗಳನ್ನು ಸೇರಿಸು.
  3. ಒಂದು ಲೇಖನ ಭಾಗವನ್ನು ಇನ್ನೊಂದಕ್ಕೆ ಸೇರಿಸು.
  4. ಒಂದು ವಸ್ತುವನ್ನು ಇನ್ನೊಂದಕ್ಕೆ ಲಗತ್ತಿಸು ಯಾ ಸೇರಿಸು.
    1. (ಪದ್ಯಗಳಿಗೆ) ಪ್ರಾಸ–ಒದಗಿಸು, ಹೊಂದಿಸು.
    2. ಪ್ರಾಸಗಳನ್ನು ಒಟ್ಟಿಗೆ ಹೆಣೆ.
  5. (ಕುರಿಯ) ತುಪ್ಪಬೊಂತೆ ಹಾಗೂ ಗಂಟುಗಳನ್ನು ಕತ್ತರಿಸಿಹಾಕು.
  6. (ಆಡುಮಾತು) ಬಾಲದಂತೆ ಹಿಂಬಾಲಿಸು; ಹಿಂದೆಯೇ ಹೋಗು: I tagged him to an old house ನಾನು ಅವನನ್ನು ಒಂದು ಹಳೆಯ ಮನೆಗೆ ಹಿಂಬಾಲಿಸಿದೆ ( ಅಕರ್ಮಕ ಕ್ರಿಯಾಪದ ಸಹ).
  7. ಜೊತೆಯಲ್ಲೇ ಹೋಗು.
  8. (ವಸ್ತುಗಳಿಗೆ) ವಿಳಾಸ ಪಟ್ಟಿ ಯಾ ಪಟ್ಟಿಗಳನ್ನು ಒದಗಿಸು, ಹಚ್ಚು ಯಾ ಕಟ್ಟು.
  9. (ಕಂಪ್ಯೂಟರ್‍) (ಒಂದು ದತ್ತಾಂಶದ ಬಾಬನ್ನು) ಮುಂದೆ ಮತ್ತೆ ಪಡೆಯಲು ಅದರ ಮಾದರಿಯಿಂದ ಗುರುತಿಸು.
  10. = $^2$label(3).
ಪದಗುಚ್ಛ

tag along ಸುಮ್ಮನೆ ಜೊತೆಯಲ್ಲಿ ಹೋಗು ಯಾ ಜೊತೆಯಲ್ಲಿರು.