See also 2touch
1touch ಟಚ್‍
ಸಕರ್ಮಕ ಕ್ರಿಯಾಪದ
  1. ಮುಟ್ಟು; ಸೋಕು; ತಾಕು; ಸ್ಪರ್ಶಿಸು.
  2. (ಕೈ ಮೊದಲಾದವನ್ನು) ಮುಟ್ಟಿಸು; ಮುಟ್ಟುವಂತೆ ಮಾಡು; ಸೋಕಿಸು; ತಾಕಿಸು.
  3. (ಎರಡು ವಸ್ತುಗಳನ್ನು) ಪರಸ್ಪರ ತಾಕುವಂತೆ ಮಾಡು; ತಾಗಿಸು; ಮುಟ್ಟಿಸು: they touched hands ಅವರು ಪರಸ್ಪರ ಕೈಮುಟ್ಟಿಸಿದರು.
  4. (ಜ್ಯಾಮಿತಿ) ಸ್ಪರ್ಶಿಸು; (ಯಾವುದೇ ವಕ್ರಕ್ಕೆ) ಸ್ಪರ್ಶರೇಖೆಯಾಗು.
  5. (ವಾದ್ಯದ ತಂತಿ, ಮನೆ, ಮೊದಲಾದವನ್ನು) ಒತ್ತು; ಅದುಮು; ಮಿಡಿ; ಮೀಟು.
  6. (ಕೂರ್ಚ, ಸೀಸದ ಕಡ್ಡಿ, ಮೊದಲಾದವುಗಳಿಂದ, ಮುಖಭಾವ ಮೊದಲಾದವನ್ನು) ತೆಳ್ಳಗೆ ಗುರುತಿಸು; ರೇಖಿಸು; ನಸುಗೆರೆಗಳಿಂದ ಚಿತ್ರಿಸು, ತಿದ್ದು.
  7. (ಉಷ್ಣಮಾಪಕ ಮೊದಲಾದವುಗಳ ವಿಷಯದಲ್ಲಿ, ಪಾದರಸ ಮೊದಲಾದವು ಮುಖ್ಯವಾಗಿ ಕ್ಷಣಕಾಲ) ಏರು; ಮುಟ್ಟು; ತಲಪು: thermometer touched $90^\circ$ ಉಷ್ಣಮಾಪಕವು 90 ಡಿಗ್ರಿಯನ್ನು ಮುಟ್ಟಿತು.
  8. (ಸಾಮಾನ್ಯವಾಗಿ ನಿಷೇಧ ಪ್ರಯೋಗಗಳಲ್ಲಿ) (ಶ್ರೇಷ್ಠತೆ ಮೊದಲಾದವುಗಳಲ್ಲಿ) ಸಮಕ್ಕೆ ಬರು; ಸರಿಗಟ್ಟು; ಸಮವಾಗು: no one can touch him in light comedy ಲಘು ವೈನೋದಿಕ ರಚಿಸುವುದರಲ್ಲಿ ಅವನ ಸಮಕ್ಕೆ ಬರುವವರು ಯಾರೂ ಇಲ್ಲ.
  9. ಮನಮುಟ್ಟು; ಮನ ಕರಗಿಸು; ಮನಸ್ಸಿಗೆ ತಟ್ಟು: it touched me to the heart ಅದು ನನ್ನ ಹೃದಯ ಕರಗಿಸಿತು.
  10. (ಮನಸ್ಸನ್ನು) ನಾಟು; ಇರಿ; ನೋಯಿಸು; ಕೆರಳಿಸು: it touched him to the quick ಅದು ಅವನ ಮರ್ಮವನ್ನು ಇರಿಯಿತು.
  11. (ವಿಷಯವನ್ನು) ಸ್ವಲ್ಪಮಾತ್ರ ಸೂಚಿಸು; ಸ್ಥೂಲವಾಗಿ ಪ್ರಸ್ತಾಪಿಸು.
  12. ಸಂಬಂಧಿಸಿರು; ಕುರಿತಿರು: the question touches you closely ಆ ಪ್ರಶ್ನೆ ನಿಕಟವಾಗಿ ನಿನಗೆ ಸಂಬಂಧಿಸಿದೆ.
  13. (ಮುಖ್ಯವಾಗಿ ನಿಷೇಧ ಪ್ರಯೋಗಗಳಲ್ಲಿ ಮಾತ್ರ) ಮುಟ್ಟು:
    1. ಕೆದರು; ಕದಲಿಸು; ಚೆಲ್ಲಾಡು; ಕೆಡಿಸು: don’t touch my things ನನ್ನ ಸಾಮಾನುಗಳನ್ನು ಮುಟ್ಟಬೇಡ, ಕೆದರಬೇಡ.
    2. ಸೇವಿಸು; ತಿನ್ನು: dare not touch alcohol ಮದ್ಯವನ್ನು ಮುಟ್ಟುವ (ಕುಡಿಯುವ)ಧೈರ್ಯವಿಲ್ಲ (ಮುಟ್ಟಕೂಡದು ಎಂಬರ್ಥದಲ್ಲಿ). has not touched her breakfast ಅವಳು ಉಪಾಹಾರ ಮುಟ್ಟಿಲ್ಲ (ಸೇವಿಸಿಲ್ಲ).
    3. ಸಂಬಂಧ ಹೊಂದಿರು; ವ್ಯವಹಾರ ನಡೆಸು: don’t touch farming ಕೃಷಿ ಮುಟ್ಟಬೇಡ; ವ್ಯವಸಾಯಕ್ಕೆ ಕೈಹಾಕಬೇಡ.
    4. ಬಳಸು: need not touch your savings ನಿನ್ನ ಉಳಿತಾಯದ ಹಣವನ್ನು ಬಳಸಬೇಕಾಗಿಲ್ಲ.
  14. ಹಾನಿಯುಂಟುಮಾಡು; ಕೆಡಿಸು; ಹಾಳುಮಾಡು: blossom is a little touched by the frost ಹಿಮ ಬಿದು ಹೂವು ಸ್ವಲ್ಪ ಹಾಳಾಗಿದೆ.
  15. ಸ್ವಲ್ಪ ಪರಿಣಾಮ ಬೀರು; ಮಾರ್ಪಾಡು ಮಾಡು; ವ್ಯತ್ಯಾಸ ಮಾಡು: morality touched with emotion ರಾಗಭಾವಗಳಿಂದ ಮಾರ್ಪಾಟಾದ ನೈತಿಕ ಪ್ರಜ್ಞೆ. brass-polish won’t touch these candle sticks ಹಿತ್ತಾಳೆಯ ಮೆರುಗು ಈ ದೀಪದ ಕಂಬಗಳ ಮೇಲೆ ಯಾವ ಪರಿಣಾಮವನ್ನೂ ಬೀರಲಾರದು (ಮೆರುಗು ಈ ಕಂಬಗಳಿಗೆ ಹತ್ತುವುದಿಲ್ಲ).
  16. (ಒಂದರ ಜತೆ) ಹೆಣಗಾಡು; ನಿಭಾಯಿಸು; ಏಗು: couldn’t touch the Algebra paper ಬೀಜಗಣಿತದ (ಪ್ರಶ್ನ)ಪತ್ರಿಕೆಯನ್ನು ನಾನು ನಿಭಾಯಿಸಲಾರದೆ ಹೋದೆ.
  17. (ಇಂಗ್ಲಿಷ್‍ ಚರಿತ್ರೆ) (ರಾಜನು) ರೋಗಿಯ ಗಂಡಮಾಲೆ ಪರಿಹಾರಾರ್ಥವಾಗಿ ಅವನನ್ನು ಕೈಯಿಂದ ಮುಟ್ಟು.
  18. (ಅಶಿಷ್ಟ) (ಒಬ್ಬನಿಂದ) (ಸಾಲವಾಗಿ ಯಾ ಇನಾಮಾಗಿ) ಹಣ ಕೀಳು, ಪಡೆ: he touched me Rs.50 ಅವನು ನನ್ನಿಂದ ಐವತ್ತು ರೂಪಾಯಿ (ಹಣ) ಕಿತ್ತ.
ಅಕರ್ಮಕ ಕ್ರಿಯಾಪದ

(ಎರಡು ವಸ್ತುಗಳು ಮೊದಲಾದವುಗಳ ವಿಷಯದಲ್ಲಿ) ಒಂದಕ್ಕೊಂದು ಹತ್ತಿರದಲ್ಲಿರು, ಮುಟ್ಟಿರು, ಮುಟ್ಟುವಂತಿರು; ತಾಕಿರು: the walls were touching ಗೋಡೆಗಳು ಒಂದಕ್ಕೊಂದು ತಾಕಿದ್ದವು.

ಪದಗುಚ್ಛ
  1. touch at (ನೌಕಾಯಾನ) (ರೇವು ಪಟ್ಟಣ ಮೊದಲಾದವುಗಳಲ್ಲಿ) ಹೊಕ್ಕು ಹೋಗು; ತಂಗಿ ಹೋಗು.
  2. touch $^1$bottom.
  3. touch down
    1. (ರಗ್ಬಿ ಕಾಲ್ಚೆಂಡಾಟ ಯಾ ಅಮೆರಿಕನ್‍ ಕಾಲ್ಚೆಂಡಾಟದಲ್ಲಿ) (ತನ್ನ ಯಾ ಎದುರಾಳಿಯ) ಗೋಲಿನ ಹಿಂದೆ ಚೆಂಡುಸಹಿತ ನೆಲಮುಟ್ಟು.
    2. (ವಿಮಾನ) ನೆಲಮುಟ್ಟು; ಕೆಳಕ್ಕಿಳಿ.
  4. touch off
    1. (ಚಿತ್ರ ಮೊದಲಾದವುಗಳಲ್ಲಿ) ಕರಾರುವಾಕ್ಕಾಗಿ ಚಿತ್ರಿಸು; ರೂಪಿಸು.
    2. (ಬೆಂಕಿಕಡ್ಡಿ ಮೊದಲಾದವುಗಳನ್ನು ಗೀರಿದಾಗ) ಸ್ಫೋಟಿಸು; ಬೆಂಕಿ ಹೊತ್ತಿಕೊ.
    3. (ಕಾರ್ಯವಿಧಾನ, ಪ್ರಕ್ರಿಯೆ, ಮೊದಲಾದವನ್ನು) ಫಕ್ಕನೆ ಪ್ರಾರಂಭಿಸು.
  5. touch on (or upon)
    1. (ವಿಷಯವನ್ನು) ಸ್ಥೂಲವಾಗಿ, ಸಂಕ್ಷೇಪವಾಗಿ–ಪ್ರಸ್ತಾಪಿಸು.
    2. ಅಂಚಿನಲ್ಲಿರು; ಸಮೀಪವಾಗಿರು: that touches on impudence ಅದು ಔದ್ಧತ್ಯಕ್ಕೆ ಸಮೀಪವಾಗಿದೆ, ಔದ್ಧತ್ಯದಂತಿದೆ.
  6. touch one’s hat (ತನ್ನ ಟೋಪಿ ಮುಟ್ಟಿ) ನಮಸ್ಕರಿಸು; ವಂದಿಸು.
  7. touch pitch ಕೆಸರು ಮುಟ್ಟು; ಕೆಸರಿಗೆ ಕೈಹಾಕು; ಕಳಂಕಾಸ್ಪದ, ಶಂಕಾಸ್ಪದ ಕೆಲಸದಲ್ಲಿ ಕೈ ಹಾಕು; ಕಳಂಕಾಸ್ಪದ, ಶಂಕಾಸ್ಪದ ವ್ಯಕ್ತಿಯೊಡನೆ ವ್ಯವಹರಿಸು.
  8. touch the spot (ಆಡುಮಾತು) ಅಗತ್ಯವಾದುದನ್ನು, ಅಪೇಕ್ಷಿತವಾದುದನ್ನು–ತಿಳಿದುಕೊ ಯಾ ಮಾಡು.
  9. touch up
    1. (ಚಿತ್ರ, ಬರವಣಿಗೆ, ಮೊದಲಾದವನ್ನು) ತಿದ್ದು; ಪರಿಷ್ಕರಿಸು; ಒಪ್ಪಕೊಡು.
    2. (ಕುದುರೆಯನ್ನು) ಚಾವಟಿಯಿಂದ ಮೆಲ್ಲಗೆ ಹೊಡೆ.
    3. (ನೆನಪನ್ನು) ಕುದುರಿಸು; ಚುರುಕಾಗಿಸು.
    4. (ಬ್ರಿಟಿಷ್‍ ಪ್ರಯೋಗ)(ಅಶಿಷ್ಟ) ಲೈಂಗಿಕವಾಗಿ ಉದ್ರೇಕವಾಗುವಂತೆ ಮುದ್ದಾಡು.
    5. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಬಲವಂತವಾಗಿ ಸಂಭೋಗಿಸು; ಅತ್ಯಾಚಾರ ಮಾಡು.
  10. touch wood ದುರದೃಷ್ಟವನ್ನು ತಪ್ಪಿಸಿಕೊಳ್ಳಲು ಯಾವುದಾದರೂ ಮರದ ಸಾಮಾನು ಮುಟ್ಟು.
  11. wouldn’t touch (person) with a barge-pole.