too ಟೂ
ಕ್ರಿಯಾವಿಶೇಷಣ
  1. ಅತಿಯಾಗಿ; ತೀರಾ; ವಿಪರೀತವಾಗಿ; (ಒಂದು ವಿಶಿಷ್ಟ ಉದ್ದೇಶ, ಗುರಿ, ಮಟ್ಟ)ಕ್ಕಿಂತ ಹೆಚ್ಚಾಗಿರುವ: too good to be true ಎಷ್ಟು ಚೆನ್ನಾಗಿದೆಯೆಂದರೆ, ಅದನ್ನು ನಂಬಉವುದೇ ಕಷ್ಟ. it is too large for me ನನಗೆ ಅದು ತೀರಾ ದೊಡ್ಡದಾಗಿದೆ. is too fond of comfort ಅವನು ಅತಿಯಾಗಿ ಸುಖ ಬಯಸುತ್ತಾನೆ.
  2. (ಆಡುಮಾತು) ಬಹಳ; ತುಂಬಾ: you are too kind ನೀವು ತುಂಬಾ ದಯಾಮಯರು.
  3. ಅದೂ ಸಹ; ಇನ್ನೊಂದು ಕೂಡ; ಅವನೂ, ಅದೂ, ಅವಳೂ, ಅವರೂ - ಸೇರಿದಂತೆ: are they coming too ? ಅವರೂ ಬರುತ್ತಿದ್ದಾರೆಯೆ? mean to do it too ಅದನ್ನೂ ಸಹ ಮಾಡುವ ಉದ್ದೇಶವಿದೆ.
  4. ಜೊತೆಗೆ; ಅಲ್ಲದೆ; ಮಾತ್ರವಲ್ಲದೆ: achieved too, at small cost ಸಾಧಿಸಿದ್ದು ಮಾತ್ರವಲ್ಲ, ಕಡಮೆ ವೆಚ್ಚದಲ್ಲಿ ಸಾಧಿಸಿದ.
ಪದಗುಚ್ಛ
  1. none too ಅಷ್ಟೇನೂ ಇಲ್ಲ ಯಾ ಅಲ್ಲ: he is feeling none too well today ಇವತ್ತು ಅವನ ಆರೋಗ್ಯ ಅಷ್ಟೇನೂ ಚೆನ್ನಾಗಿಲ್ಲ.
  2. too $^1$bad.
  3. too $^1$much.
  4. too $^1$much for.
  5. too $^1$right.