See also 2through  3through
1through ತ್ರೂ
ಉಪಸರ್ಗ
  1. ಮೂಲಕ; ಮೇಲೆ; ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೆ ಭೇದಿಸಿ ಕೊಂಡು; ಮುಖಾಂತರ; ದ್ವಾರಾ (ರೂಪಕವಾಗಿ ಸಹ): marched through the town ಪಟ್ಟಣದ ಮೇಲೆ ಹೋದ. arrow went through his arm ಬಾಣವು ಅವನ ತೋಳನ್ನು ಭೇದಿಸಿಕೊಂಡುಹೋಯಿತು. saw through a telescope ದೂರದರ್ಶಕದ ಮೂಲಕ ನೋಡಿದ. (ರೂಪಕವಾಗಿ) went through many trials ಅನೇಕ ಕಷ್ಟಗಳನ್ನು ಅನುಭವಿಸಿದ. I saw through his hypocrisy ಅವನ ಬಊಟಾಟಿಕೆಯನ್ನು (ಭೇದಿಸಿ) ಗುರುತಿಸಿದೆ. flashed through his mind ಅವನ ಮನಸ್ಸಿಗೆ ಹೊಳೆಯಿತು.
  2. ಮೊದಲಿನಿಂದ ಕೊನೆಯವರೆಗೆ; ಆದ್ಯಂತವಾಗಿ: read through the whole book ಆ ಪುಸ್ತಕವನ್ನು ಮೊದಲಿನಿಂದ ಕೊನೆಯವರೆಗೂ ಓದಿದ.
  3. ಕಾರಣದಿಂದ; ದೆಸೆಯಿಂದ; ಮೂಲಕ: it was all through you that we were late ನಾವು ತಡವಾದುದಕ್ಕೆ ನೀನೇ ಕಾರಣ. concealed it through shame ನಾಚಿಕೆಯ ಕಾರಣದಿಂದ ಅವನು ಅದನ್ನು ಮುಚ್ಚಿಟ್ಟ.
  4. (ಅಮೆರಿಕನ್‍ ಪ್ರಯೋಗ)–ಸೇರಿದಂತೆ, –ವರೆಗೆ: Friday through Tuesday ಮಂಗಳವಾರವೂ ಸೇರಿದಂತೆ ಶುಕ್ರವಾರದವರೆಗೆ.
  5. ನಡುವೆ; ಮಧ್ಯೆ: swam through the waves ಅಲೆಗಳ ನಡುವೆ ಈಜಿದ.
See also 1through  3through
2through ತ್ರೂ
ಕ್ರಿಯಾವಿಶೇಷಣ

(thro’, ಅಮೆರಿಕನ್‍ ಪ್ರಯೋಗ thru ಎಂದೂ ಪ್ರಯೋಗ).

  1. ಪಕ್ಕದಿಂದ ಪಕ್ಕಕ್ಕೆ; ಕೊನೆಯಿಂದ ಕೊನೆಗೆ; ಮೊದಲಿನಿಂದ ಕಡೆಯವರೆಗೆ; ಆದ್ಯಂತವಾಗಿ: let us stroll through ಒಳಗೆಲ್ಲಾ ಸುತ್ತಾಡೋಣ. read it carefully through ಎಚ್ಚರಿಕೆಯಿಂದ ಅದನ್ನು ಆದ್ಯಂತವಾಗಿ ಓದಿದೆನು.
  2. ಮೂಲಕ: went through to the garden ಆ ಮೂಲಕ ತೋಟಕ್ಕೆ ಹೋದ. would not let us through ಆ ಮೂಲಕ ಹೋಗಲು ನಮ್ಮನ್ನು ಬಿಡಲಿಲ್ಲ.
  3. (ಮುಖ್ಯವಾಗಿ ಯಶಸ್ವಿಯಾಗಿ) ಮುಗಿಸಿ: are through their examinations ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
  4. (ದೂರವಾಣಿಯ ಮೂಲಕ) ಸಂಪರ್ಕ ಕಲ್ಪಿಸುವಂತೆ: will put you through ನಿಮಗೆ ಸಂಪರ್ಕ ಕಲ್ಪಿಸಲಾಗುತ್ತದೆ.
ಪದಗುಚ್ಛ

be through

    1. ಮುಗಿಸು.
    2. ಬೇಕಾದ ದೂರವಾಣಿಯೊಂದಿಗೆ ಸಂಪರ್ಕ ಗಳಿಸು, ಪಡೆ.
    3. (ಒಬ್ಬನೊಡನೆ, ಒಂದರೊಡನೆ) ವ್ಯವಹಾರ ನಿಲ್ಲಿಸು; ಒಬ್ಬನ, ಒಂದರ–ಸಂಪರ್ಕ, ಸಂಬಂಧ, ಸಹವಾಸ ಬಿಟ್ಟುಬಿಡು.
    4. ಮುಂದೆ ಯಾವ ಭವಿಷ್ಯವೂ ಇಲ್ಲವಾಗು: is through as a politician ರಾಜಕಾರಣಿಯಾಗಿ ಯಾವ ಭವಿಷ್ಯವೂ ಇಲ್ಲವಾಗಿದೆ.
  1. through and through
    1. ಮತ್ತೆ ಮತ್ತೆ; ಪದೇಪದೇ.
    2. ಒಂದಿಷ್ಟೂ ಬಿಡದೆ; ಚಾಚೂ ತಪ್ಪದೆ; ಆಮೂಲಾಗ್ರವಾಗಿ.
See also 1through  2through
3through ತ್ರೂ
ಗುಣವಾಚಕ

(thro’, ಅಮೆರಿಕನ್‍ ಪ್ರಯೋಗ thru ಎಂದೂ ಪ್ರಯೋಗ).

  1. ಒಂದರ ಮೂಲಕ ಹೋಗಗೊಡುವ; ಪೂರ್ತಿ ದೂರ ಹೋಗುವ, ಹಾದು ಹೋಗುವ: a through bolt ಒಂದು ಕೊನೆಯಿಂದ ಇನ್ನೊಂದರವರೆಗೆ ಪೂರ್ತಿ ತೂರಿಹೋಗುವ ಗುಬ್ಬಿ ಮೊಳೆ.
  2. (ರೈಲು, ಜಹಜು, ವಿಮಾನ ಪ್ರಯಾಣಗಳ ವಿಷಯದಲ್ಲಿ) ಸೀದಾ; ನೇರ:
    1. ಮಧ್ಯದಲ್ಲಿ ವಾಹನ ಯಾ ಮಾರ್ಗ ಬದಲಾಯಿಸದೆ ಸೀದಾ ಹೋಗುವ.
    2. ಅದೇ ಟಿಕೆಟ್ಟಿನ ಮೇಲೆ ಬೇರೆಬೇರೆ ಕಂಪೆನಿಗಳ ವಾಹನ ಮಾರ್ಗದಲ್ಲಿ ಹೋಗಬಹುದಾದ: through carriage ಸೀದಾ ಹೋಗುವ ರೈಲುಗಾಡಿ (ಡಬ್ಬಿ). through train ನೇರ ಹೋಗುವ ರೈಲು. through passenger (ಮಧ್ಯದಲ್ಲಿ ಇಳಿಯದ, ಟಿಕೆಟ್‍ ಬದಲಾಯಿಸದೆ ಹೋಗುವ) ನೇರ ಪ್ರಯಾಣಿಕ. through ticket ಸೀದಾ ಟಿಕೆಟ್ಟು.
  3. (ವಾಹನಸಂಚಾರ) ಜಾಗವೊಂದರ ಮಾರ್ಗವಾಗಿ ಯಾ ಮೂಲಕ ಉದ್ದಿಷ್ಟ ಸ್ಥಳಕ್ಕೆ ಹೋಗುವ.
ಪದಗುಚ್ಛ

no through road = no thoroughfare.