See also 2through  3through
1through ತ್ರೂ
ಉಪಸರ್ಗ
  1. ಮೂಲಕ; ಮೇಲೆ; ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೆ ಭೇದಿಸಿ ಕೊಂಡು; ಮುಖಾಂತರ; ದ್ವಾರಾ (ರೂಪಕವಾಗಿ ಸಹ): marched through the town ಪಟ್ಟಣದ ಮೇಲೆ ಹೋದ. arrow went through his arm ಬಾಣವು ಅವನ ತೋಳನ್ನು ಭೇದಿಸಿಕೊಂಡುಹೋಯಿತು. saw through a telescope ದೂರದರ್ಶಕದ ಮೂಲಕ ನೋಡಿದ. (ರೂಪಕವಾಗಿ) went through many trials ಅನೇಕ ಕಷ್ಟಗಳನ್ನು ಅನುಭವಿಸಿದ. I saw through his hypocrisy ಅವನ ಬಊಟಾಟಿಕೆಯನ್ನು (ಭೇದಿಸಿ) ಗುರುತಿಸಿದೆ. flashed through his mind ಅವನ ಮನಸ್ಸಿಗೆ ಹೊಳೆಯಿತು.
  2. ಮೊದಲಿನಿಂದ ಕೊನೆಯವರೆಗೆ; ಆದ್ಯಂತವಾಗಿ: read through the whole book ಆ ಪುಸ್ತಕವನ್ನು ಮೊದಲಿನಿಂದ ಕೊನೆಯವರೆಗೂ ಓದಿದ.
  3. ಕಾರಣದಿಂದ; ದೆಸೆಯಿಂದ; ಮೂಲಕ: it was all through you that we were late ನಾವು ತಡವಾದುದಕ್ಕೆ ನೀನೇ ಕಾರಣ. concealed it through shame ನಾಚಿಕೆಯ ಕಾರಣದಿಂದ ಅವನು ಅದನ್ನು ಮುಚ್ಚಿಟ್ಟ.
  4. (ಅಮೆರಿಕನ್‍ ಪ್ರಯೋಗ)–ಸೇರಿದಂತೆ, –ವರೆಗೆ: Friday through Tuesday ಮಂಗಳವಾರವೂ ಸೇರಿದಂತೆ ಶುಕ್ರವಾರದವರೆಗೆ.
  5. ನಡುವೆ; ಮಧ್ಯೆ: swam through the waves ಅಲೆಗಳ ನಡುವೆ ಈಜಿದ.