See also 1through  3through
2through ತ್ರೂ
ಕ್ರಿಯಾವಿಶೇಷಣ

(thro’, ಅಮೆರಿಕನ್‍ ಪ್ರಯೋಗ thru ಎಂದೂ ಪ್ರಯೋಗ).

  1. ಪಕ್ಕದಿಂದ ಪಕ್ಕಕ್ಕೆ; ಕೊನೆಯಿಂದ ಕೊನೆಗೆ; ಮೊದಲಿನಿಂದ ಕಡೆಯವರೆಗೆ; ಆದ್ಯಂತವಾಗಿ: let us stroll through ಒಳಗೆಲ್ಲಾ ಸುತ್ತಾಡೋಣ. read it carefully through ಎಚ್ಚರಿಕೆಯಿಂದ ಅದನ್ನು ಆದ್ಯಂತವಾಗಿ ಓದಿದೆನು.
  2. ಮೂಲಕ: went through to the garden ಆ ಮೂಲಕ ತೋಟಕ್ಕೆ ಹೋದ. would not let us through ಆ ಮೂಲಕ ಹೋಗಲು ನಮ್ಮನ್ನು ಬಿಡಲಿಲ್ಲ.
  3. (ಮುಖ್ಯವಾಗಿ ಯಶಸ್ವಿಯಾಗಿ) ಮುಗಿಸಿ: are through their examinations ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
  4. (ದೂರವಾಣಿಯ ಮೂಲಕ) ಸಂಪರ್ಕ ಕಲ್ಪಿಸುವಂತೆ: will put you through ನಿಮಗೆ ಸಂಪರ್ಕ ಕಲ್ಪಿಸಲಾಗುತ್ತದೆ.
ಪದಗುಚ್ಛ

be through

    1. ಮುಗಿಸು.
    2. ಬೇಕಾದ ದೂರವಾಣಿಯೊಂದಿಗೆ ಸಂಪರ್ಕ ಗಳಿಸು, ಪಡೆ.
    3. (ಒಬ್ಬನೊಡನೆ, ಒಂದರೊಡನೆ) ವ್ಯವಹಾರ ನಿಲ್ಲಿಸು; ಒಬ್ಬನ, ಒಂದರ–ಸಂಪರ್ಕ, ಸಂಬಂಧ, ಸಹವಾಸ ಬಿಟ್ಟುಬಿಡು.
    4. ಮುಂದೆ ಯಾವ ಭವಿಷ್ಯವೂ ಇಲ್ಲವಾಗು: is through as a politician ರಾಜಕಾರಣಿಯಾಗಿ ಯಾವ ಭವಿಷ್ಯವೂ ಇಲ್ಲವಾಗಿದೆ.
  1. through and through
    1. ಮತ್ತೆ ಮತ್ತೆ; ಪದೇಪದೇ.
    2. ಒಂದಿಷ್ಟೂ ಬಿಡದೆ; ಚಾಚೂ ತಪ್ಪದೆ; ಆಮೂಲಾಗ್ರವಾಗಿ.