See also 2think
1think ತಿಂಕ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ thought ಉಚ್ಚಾರಣೆ ತಾಟ್‍).
ಸಕರ್ಮಕ ಕ್ರಿಯಾಪದ
  1. ಭಾವಿಸು; ಎಣಿಸು; ಯೋಚಿಸು; ಆಲೋಚಿಸು: we think (that) he will come ಅವನು ಬರುತ್ತಾನೆಂದು ನಾವು ಭಾವಿಸುತ್ತೇವೆ. I think it a shame ಅದು ಶುದ್ಧ ನಾಚಿಕೆಗೇಡೆಂದು ನಾನು ಎಣಿಸುತ್ತೇನೆ.
  2. ಉದ್ದೇಶಿಸು; ನಿರೀಕ್ಷಿಸು: thinks to deceive us ನಮ್ಮನ್ನು ಮೋಸಗೊಳಿಸಲುದ್ದೇಶಿಸುತ್ತಾನೆ.
  3. (ಆಡುಮಾತು) ಜ್ಞಾಪಕದಲ್ಲಿಟ್ಟುಕೊ; ನೆನಪಿಟ್ಟುಕೊ: did not think to lock the door ಬಾಗಿಲಿಗೆ ಬೀಗ ಹಾಕಬೇಕೆಂದು ನೆನಪಿಟ್ಟುಕೊಳ್ಳಲಿಲ್ಲ.
  4. ಕಲ್ಪನೆ ಮಾಡಿಕೊ; ಊಹಿಸಿಕೊ: cannot think the infinite ಅನಂತತೆಯ ಕಲ್ಪನೆ ಮಾಡಿಕೊಳ್ಳಲಾರೆ. I cannot think how you do it ನೀನು ಹೇಗೆ ಮಾಡುವೆಯೋ ನಾನು ಕಾಣೆ, ಊಹಿಸಿಕೊಳ್ಳಲಾರೆ.
  5. (ಯಾವುದೇ ಇರುವುದನ್ನು) ಮನಗಾಣು; ಕಂಡುಕೊ; ಅರಿತುಕೊ; ತಿಳಿದುಕೊ: the child thought no harm ಅಪಾಯವೆಂದು ಮಗು ಅರಿಯಲಿಲ್ಲ.
  6. ಕೇವಲ ಆಲೋಚನೆಯಿಂದ–ಬಗೆಹರಿಸು, ನಿವಾರಿಸು: cannot think away a toothache ಕೇವಲ ಆಲೋಚನೆಯಿಂದ ಹಲ್ಲುನೋವನ್ನು ಹೋಗಲಾಡಿಸಲು ಆಗುವುದಿಲ್ಲ.
  7. ಪರಿಗಣಿಸು; ಅಭಿಪ್ರಾಯಪಡು: is thought to be a fraud (ಅವನೊಬ್ಬ) ಮೋಸಗಾರನೆಂದು ಪರಿಗಣಿಸಲಾಗಿದೆ.
  8. ಆಲೋಚನೆ ಮಾಡು; ಚಿಂತಿಸು: think of you constantly ಸದಾ ನಿನ್ನ ಬಗ್ಗೆ ಚಿಂತಿಸುತ್ತೇನೆ.
  9. ಯೋಚಿಸು; ಮಾನಸಿಕವಾಗಿ ಆಯ್ಕೆಮಾಡು: think of a number ಸಂಖ್ಯೆಯೊಂದನ್ನು ಯೋಚಿಸು.
  10. ಅರೆಮನಸ್ಸಿನ ಉದ್ದೇಶ ಹೊಂದಿರು: I think I’ll try ನಾನು ಪ್ರಯತ್ನ ಮಾಡಬಹುದು (ಎನಿಸುತ್ತದೆ).
ಅಕರ್ಮಕ ಕ್ರಿಯಾಪದ

ಆಲೋಚಿಸು; ಯೋಚಿಸು; ವಿಚಾರ ಮಾಡು: let me think for a moment ಒಂದು ನಿಮಿಷ ಯೋಚನೆ ಮಾಡುತ್ತೇನೆ.

ಪದಗುಚ್ಛ
  1. cannot (or just) think of his not guessing it ಅವನು ಅದನ್ನು ಊಹಿಸಿರಲಿಲ್ಲ ಎಂಬಉದನ್ನು–ಯೋಚಿಸಲಾರೆ, ನಂಬಉವುದು ಕಷ್ಟ.
  2. let me think (ಏನಾದರೂ ಉತ್ತರ ಹೇಳಬೇಕಾದಾಗ, ಇನ್ನಷ್ಟು ಕಾಲಾವಕಾಶಬೇಕೆಂದು ಸೂಚಿಸುವಲ್ಲಿ) ಯೋಚಿಸಲು ಇನ್ನಷ್ಟು ನನಗೆ ಅವಕಾಶ ಕೊಡಿ.
  3. let me think about it (ಯೋಚನೆ, ಸಲಹೆ, ಮೊದಲಾದವನ್ನು ಗಂಭೀರವಾಗಿ ಪರಿಶೀಲಿಸಬೇಕಾಗಿ ಬಂದಾಗ) ನಾನು ಅದನ್ನು ಪ್ರಾಮಾಣಿಕವಾಗಿ ಪರಿಶೀಲಿಸಿ ನೋಡುತ್ತೇನೆ.
  4. think again ತನ್ನ ನಿರ್ಧಾರ ಯಾ ಯೋಜನೆಗಳನ್ನು ಪುನರಾಲೋಚಿಸು; ಮತ್ತೆ ಪರಿಶೀಲಿಸು; ಇನ್ನೊಮ್ಮೆ ಚಿಂತಿಸು.
  5. think aloud ಗಟ್ಟಿಯಾಗಿ ಆಲೋಚಿಸು; ಮನಸ್ಸಿನಲ್ಲಿ ಹೊಳೆದುದನ್ನು ಹೊಳೆಯುತ್ತಿದ್ದಂತೆಯೇ ಹೇಳಿಬಿಡು, ಕೂಡಲೇ ಒದರು.
  6. think back to (ನಡೆದು ಹೋದ ಘಟನೆ, ಕಾಲ, ಮೊದಲಾದವನ್ನು) ನೆನಪಿಸಿಕೊ; ಜ್ಞಾಪಿಸಿಕೊ.
  7. think better of
    1. ಪುನಃ ಆಲೋಚಿಸಿ ಸರಿಯಾದ ತೀರ್ಮಾನಕ್ಕೆ ಬರು.
    2. (ಒಬ್ಬ ವ್ಯಕ್ತಿಯ ವಿಷಯದಲ್ಲಿ) ಉತ್ತಮ ಅಭಿಪ್ರಾಯ ತಳೆ.
  8. think big ಮಹತ್ತ್ವಾಕಾಂಕ್ಷೆ ಹೊಂದಿರು.
  9. think $^3$fit.
  10. think for oneself ಸ್ವತಂತ್ರವಾಗಿ ಯೋಚನೆ ಮಾಡು.
  11. think little (or nothing) of ಲೆಕ್ಕಿಸದಿರು; ಅಲ್ಪವೆಂದು ಪರಿಗಣಿಸು: thinks nothing of walking 30 miles a day ದಿನಕ್ಕೆ 30 ಮೈಲಿ ನಡೆಯುವುದೆಂದರೆ ಅವನಿಗೆ ಲೆಕ್ಕವೇ ಇಲ್ಲ. I think nothing of your friend ನಿನ್ನ ಸ್ನೇಹಿತ ಅಪ್ರಯೋಜಕನೆಂದು ನನ್ನ ಭಾವನೆ.
  12. think much (or a lot or well or highly) of ಬಹಳವಾಗಿ ಭಾವಿಸು, ಎಣಿಸು; ಅತ್ಯಂತ ಗೌರವದಿಂದ ಕಾಣು.
  13. think no small $^1$beer of.
  14. think of (ಒಂದರ ಬಗ್ಗೆ) ಯೋಚಿಸು; ಚಿಂತಿಸು; ವಿಚಾರ ಮಾಡು: think of you constantly ನಿನ್ನ ಬಗ್ಗೆಯೇ ನಾನು ನಿರಂತರ ಚಿಂತಿಸುತ್ತೇನೆ. could not think of (doing) such a thing ಅಂಥ ಕೆಲಸ ಮಾಡಲು (ಎಂದೆಂದಿಗೂ) ಯೋಚಿಸಲಾರೆ.
  15. think on (or upon) (ಪ್ರಾಚೀನ ಪ್ರಯೋಗ) ಒಂದರ ಬಗ್ಗೆ ಯೋಚಿಸು, ವಿಚಾರ ಮಾಡು.
  16. think out
    1. (ಒಂದರ ಬಗ್ಗೆ) ಕೂಲಂಕಷವಾಗಿ ಯೋಚಿಸು, ವಿಚಾರಮಾಡು, ಪರ್ಯಾಲೋಚಿಸು.
    2. (ಯೋಜನೆ ಮೊದಲಾದವನ್ನು) ಕಲ್ಪಿಸು; ಹುಡುಕು; ಹಂಚಿಕೆ ಮಾಡು.
  17. think over (ನಿರ್ಧಾರಕ್ಕೆ ಬರುವ ಮೊದಲು) ಚಿಂತನೆ ಮಾಡು; ಪರ್ಯಾಲೋಚಿಸು; ಮನಸ್ಸಿನಲ್ಲಿ ವಿಚಾರ ಮಾಡು: think over what I have said ನಾನು ಹೇಳಿರುವುದನ್ನು (ನಿಧಾನವಾಗಿ) ವಿಚಾರ ಮಾಡಿ ನೋಡು.
  18. think through (ಸಮಸ್ಯೆ ಮೊದಲಾದವುಗಳನ್ನು ಕುರಿತು) ಕೂಲಂಕಷವಾಗಿ ವಿಚಾರ ಮಾಡು.
  19. think twice (ಆತುರಪಡದೆ) ಮತ್ತೆ ಮತ್ತೆ ಯೋಚಿಸು; ಪುನರಾಲೋಚಿಸು.
  20. think up (ಆಡುಮಾತು) ಯೋಚಿಸಿ ಉಪಾಯ ಹುಡುಕು; ಯೋಜನೆ (ಹಂಚಿಕೆ) ತಯಾರಿಸು.
See also 1think
2think ತಿಂಕ್‍
ನಾಮವಾಚಕ

(ಆಡುಮಾತು) ಆಲೋಚನೆ; ಯೋಚನೆ; ಚಿಂತನೆ; ಪರಿಶೀಲನೆ: must have a think about it ಅದರ ಬಗ್ಗೆ ಆಲೋಚನೆ ಮಾಡಬೇಕು.