See also 1fit  2fit  4fit  5fit  6fit
3fit ಹಿಟ್‍
ಗುಣವಾಚಕ
  1. (ಯಾವುದೇ ಉದ್ದೇಶ ಯಾ ಸ್ಥಾನಮಾನಕ್ಕೆ) ಹೊಂದಿಕೊಳ್ಳುವ; ತಕ್ಕ; ಒಪ್ಪುವ; ಸಲ್ಲುವ; ಹೊಂದುವ; ಸರಿಯಾದ: food that is fit to be eaten ತಿನ್ನಲು ತಕ್ಕ ಆಹಾರ.
  2. ಒಪ್ಪುವ; ತಕ್ಕ; ಯೋಗ್ಯವಾದ; ಉಚಿತ: a dinner fit for the king ರಾಜೋಚಿತ ಭೋಜನ; ದೊರೆಗೆ ತಕ್ಕ ಭೋಜನ.
  3. ಯೋಗ್ಯವಾದ; ತಕ್ಕ; ಒಪ್ಪುವ; ಉಚಿತ; ಶಿಷ್ಟ; ಸಮಂಜಸ; ಸರಿಯಾದ; ನ್ಯಾಯವಾದ: it is not fit that you should make merry ನೀನು ಮೋಜು ಮಾಡುವುದು ಸರಿಯಲ್ಲ.
  4. (ಯಾವುದೇ ಕೆಲಸಮಾಡಲು) ತಯಾರಿರುವ; ಸಿದ್ಧವಾಗಿರುವ; ಸನ್ನದ್ಧ; ಸುಸ್ಥಿತಿಲ್ಲಿರುವ; ಸಮರ್ಥನಾಗಿರುವ; ಸರಿಯಾದ ಸ್ಥಿತಿಯಲ್ಲಿರುವ.
  5. (ಯಾವುದಾದರೂ ಉಗ್ರಕಾರ್ಯ ಮಾಡುವಷ್ಟು) ಮುನಿಸಿಕೊಂಡ; ರೇಗಿದ; ಸಿಟ್ಟಿಗೆದ್ದ; ಕೋಪಗೊಂಡ: the countryfolk are fit to fell him ಗ್ರಾಮಾಂತರದ ಜನ ಅವನನ್ನು ಹೊಡೆದು ಕೆಡುವುವಷ್ಟು ಕೋಪಗೊಂಡಿದ್ದಾರೆ.
  6. ಕ್ಲೇಶಗೊಂಡ; ಚಿಂತೆಪಟ್ಟ; ಕಳವಳಗೊಂಡ; ಬೇಸರಗೊಂಡ.
  7. (ನೆಲಕ್ಕೆ ಬೀಳುವಷ್ಟು) ಬಳಲಿದ; ದಣಿದ; ಆಯಾಸಗೊಂಡ; ಸುಸ್ತಾದ: they went on working till they were fit to drop ಆಯಾಸದಿಂದ ಕುಸಿದುಬೀಳುವವರೆಗೂ ಅವರು ದುಡಿಯುತ್ತಾ ಹೋದರು.
  8. ಒಳ್ಳೆಯ ದೇಹದಾರ್ಢ್ಯವಿರುವ; ಒಳ್ಳೆಯ ಆರೋಗ್ಯ ಸ್ಥಿತಿಯಿರುವ.
ಪದಗುಚ್ಛ
  1. see (or think) fit to (ಹಾಗೆ) ನಿಶ್ಚಯಿಸು; ತೀರ್ಮಾನಿಸು; ನಿರ್ಣಯಿಸು: he didn’t see fit to adopt my suggestion ನನ್ನ ಸೂಚನೆಯಂತೆ ನಡೆಯಲು ಅವನು ಮನಸ್ಸು ಮಾಡಲಿಲ್ಲ (ನಿಶ್ಚಯಿಸಲಿಲ್ಲ).
  2. survival of the fittest ಸಮರ್ಥರ ಉಳಿವು; (ವಿವಿಧ ಜೀವಿಗಳು) ತಮ್ಮ ಉಳಿವಿಗಾಗಿ ನಡೆಸುವ ಹೋರಾಟದಲ್ಲಿ ಅತ್ಯಂತ ಯೋಗ್ಯವಾದವುಗಳ ಉಳಿವು.
ನುಡಿಗಟ್ಟು
  1. fit as a fiddle ಒಳ್ಳೆಯ ಆರೋಗ್ಯದಲ್ಲಿ ಮತ್ತು ಹುರುಪಿನಲ್ಲಿ; ಒಳ್ಳೆಯ ಹುಮ್ಮಸ್ಸಿನಲ್ಲಿ; ಸುಸ್ಥಿತಿಯಲ್ಲಿ.
  2. not fit to hold a candle to = $^1$candle ನುಡಿಗಟ್ಟು \((6)\).