See also 2thin  3thin
1thin ತಿನ್‍
ಗುಣವಾಚಕ
( ತರರೂಪ thinner, ತಮರೂಪ thinnest).
  1. ತೆಳ್ಳನೆಯ; ತೆಳುವಾದ; ನವುರಾದ; ಸಣಕಲ: thin board ತೆಳ್ಳನೆಯ ಹಲಗೆ. thin sheet ತೆಳು ಹಾಳೆ.
  2. ಒತ್ತಾಗಿಲ್ಲದ; ವಿರಳ; ಹೇರಳವಲ್ಲದ: thin hair ಒತ್ತಾಗಿಲ್ಲದ ಕೂದಲು.
  3. ದಟ್ಟವಾಗಿಲ್ಲದ; ಜನ ತುಂಬಿಲ್ಲದ: a thin audience ಜನ ಕಡಿಮೆಯಿದ್ದ ಪ್ರೇಕ್ಷಕಾಂಗಣ.
  4. ತೆಳ್ಳನೆಯ; ಗಟ್ಟಿಯಲ್ಲದ; ನೀರಾದ; ಅಳ್ಳಕವಾದ: thin gruel (ತೆಳ್ಳನೆ) ನೀರು ಗಂಜಿ.
  5. ನಿಸ್ಸಾರ; ಸಪ್ಪೆಯಾದ: thin humour ನಿಸ್ಸಾರ ಹಾಸ್ಯ.
  6. (ರೂಪಕವಾಗಿ) (ನೆಪ, ವಾದ, ಮರೆಮಾಚುವುದು, ಮೊದಲಾದವುಗಳ ವಿಷಯದಲ್ಲಿ) ಹುರುಳಿಲ್ಲದ; ಕ್ಷುಲ್ಲಕ; ಪೊಳ್ಳು; ಸುಭವಾಗಿ ಕಣ್ಣಿಗೆ ಬೀಳುವ: thin disguise ಪೊಳ್ಳು ವೇಷ. thin excuse ಕ್ಷುಲ್ಲಕ ಕಾರಣ.
  7. ಸಣಕಲಾದ; ಬಡಕಲಾದ; ತುಂಬಿಕೊಂಡಿಲ್ಲದ: a thin man ಸಣಕಲ ಮನುಷ್ಯ.
  8. ದುರ್ಬಲ; ತೆಳು; ಮುಖ್ಯವಾದ ಅಂಶದ ಕೊರತೆಯಿರುವ: thin blood ತೆಳು ರಕ್ತ. thin voice ದುರ್ಬಲ ಧ್ವನಿ.
  9. (ಗೆರೆಯ ವಿಷಯದಲ್ಲಿ) ತೆಳ್ಳನೆಯ; ನಾಜೂಕಾದ; ಸೂಕ್ಷ್ಮವಾದ.
  10. (ಲಿಪಿ, ಅಚ್ಚುಮೊಳೆ) ತೆಳುಗೆರೆಗಳ.
  11. ತೆಳುಬಟ್ಟೆಯಿಂದ ಮಾಡಿದ: thin dress ತೆಳುಬಟ್ಟೆಯ ಉಡುಪು.
  12. (ಅಶಿಷ್ಟ) ಮುಜುಗರದ; ಬೇಸರದ; ಮನಸ್ಸಿಗೆ ಒಗ್ಗದ: had a thin time ಬೇಸರದಿಂದ ಕಾಲಕಳೆದೆ.
ಪದಗುಚ್ಛ
  1. patience is wearing thin ತಾಳ್ಮೆ ಕುಂದುತ್ತಿದೆ, ಸಮೆದು ಬೀಳುತ್ತಿದೆ.
  2. thin air (ರೂಪಕವಾಗಿ) ಅದೃಶ್ಯ ಯಾ ಅಭಾವ–ಸ್ಥಿತಿ; ಕಾಣದೆಡೆ; ಇಲ್ಲದೆಡೆ: appear out of thin air ಎಲ್ಲಿಂದಲೋ ಪ್ರತ್ಯಕ್ಷವಾಗು: disappeared into thin air ಎಲ್ಲಿಯೋ ಮಾಯವಾದ.
  3. thin end of the $^1$wedge.
  4. thin $^1$ice.
  5. thin on the $^1$ground.
  6. thin on top ಬಕ್ಕತಲೆಯಾಗುತ್ತಿರುವ; ತಲೆಯಲ್ಲಿ ಕೂದಲು ಬಿದ್ದುಹೋಗುತ್ತಿರುವ; ತಲೆ ಬೋಳಾಗುತ್ತಿರುವ.
See also 1thin  3thin
2thin ತಿನ್‍
ಕ್ರಿಯಾವಿಶೇಷಣ

ತೆಳ್ಳಗೆ; ತೆಳುವಾಗಿ; ತೆಳುವಾದ ರೀತಿಯಲ್ಲಿ: cut the bread very thin ಬ್ರೆಡ್ಡನ್ನು ತೀರಾ ತೆಳುವಾಗಿ ಕತ್ತರಿಸು.

See also 1thin  2thin
3thin ತಿನ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ thinned; ವರ್ತಮಾನ ಕೃದಂತ

thinning.)

ಸಕರ್ಮಕ ಕ್ರಿಯಾಪದ
  1. ತೆಳ್ಳಗಾಗಿಸು; ಕೃಶಗೊಳಿಸು.
  2. ಬಡಕಲು ಮಾಡು; ತೆಳ್ಳಗೆ ಮಾಡು; ತೆಳು ಮಾಡು; ನೀರುನೀರಾಗಿ ಮಾಡು.
  3. (ಬಳ್ಳಿ, ಗಿಡ, ಮೊದಲಾದವುಗಳಿಂದ) ಮಿಕ್ಕ ಕಾಯಿಗಳು ಹೊರವಾಗುವಂತೆ ಸಣ್ಣಕಾಯಿಗಳನ್ನು ಕಿತ್ತುಹಾಕು; (ಬೆಳೆ) ವಿರಳಗೊಳಿಸು.
ಅಕರ್ಮಕ ಕ್ರಿಯಾಪದ
  1. ಕೃಶವಾಗು; ಬಡಕಲಾಗು; ಸಣ್ಣಗಾಗು.
  2. ತೆಳ್ಳಗಾಗು; ತೆಳುವಾಗು.
  3. (ಗಾತ್ರದಲ್ಲಿ, ಸಂಖ್ಯೆಯಲ್ಲಿ) ಕಡಿಮೆಯಾಗು; ಕುಗ್ಗು.
ಪದಗುಚ್ಛ

thin out ಬೆಳೆ ವಿರಳ ಮಾಡು; ಕುಂಟೆ ಹೊಡೆದು, ಕೆಲವು ಸಸಿಗಳನ್ನು ಕಿತ್ತುಹಾಕಿ ವಿರಳಮಾಡು.