See also 2tax
1tax ಟ್ಯಾಕ್ಸ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಗಳು, ಸರಕುಗಳು, ಮೊದಲಾದವುಗಳ ಮೇಲೆ) ತೆರಿಗೆ, ಕಂದಾಯ, ಕರ–ವಿಧಿಸು, ಹಾಕು, ಹೊರಿಸು.
  2. (ಆದಾಯ ಮೊದಲಾದವುಗಳಿಂದ) ತೆರಿಗೆ ಕಟಾಯಿಸು, ಹಿಡಿ.
  3. (ಒಬ್ಬನ ಶಕ್ತಿ, ಬಉದ್ಧಿಕೌಶಲ, ಮೊದಲಾದವನ್ನು) ದಣಿಸು; ಶ್ರಮಪಡಿಸು; ದುಡಿಸು; (ಶಕ್ತಿ ಮೊದಲಾದವುಗಳ ಮೇಲೆ) ಭಾರ ಹಾಕು: tax one’s resources ಒಬ್ಬನ ಬಉದ್ಧಿಶಕ್ತಿಯನ್ನು ಮಿತಿಮೀರಿ ದಣಿಸು. tax one’s patience (ಹಲವಾರು ಅಸಂಬದ್ಧ ಪ್ರಶ್ನೆ ಮೊದಲಾದವುಗಳ ಮೂಲಕ) ಒಬ್ಬನ ತಾಳ್ಮೆ ಪರೀಕ್ಷಿಸು.
  4. (ನ್ಯಾಯಶಾಸ್ತ್ರ) ಖರ್ಚು ಗೊತ್ತುಮಾಡು; (ಕೋರ್ಟು ಖರ್ಚು ಮೊದಲಾದವುಗಳ ವಿಷಯದಲ್ಲಿ) ಬಾಬಉಗಳನ್ನು ಪರೀಕ್ಷಿಸಿ ಖರ್ಚು, ವೆಚ್ಚ–ಗೊತ್ತುಮಾಡು, ನಿರ್ಧರಿಸು, ನಿರ್ಣಯಿಸು.
  5. (ಒಬ್ಬನ ಮೇಲೆ ತಪ್ಪು, ದೋಷ, ಮೊದಲಾದವನ್ನು) ಹೊರಿಸು; ಆರೋಪಿಸು; ಆಪಾದಿಸು: tax a person with laziness ಒಬ್ಬನ ಮೇಲೆ ಸೋಮಾರಿತನದ ಆರೋಪಣೆ ಹೊರಿಸು; (ಒಬ್ಬನನ್ನು) ಸೋಮಾರಿಯೆಂದು ಆರೋಪಿಸು.
  6. ಪ್ರಶ್ನಿಸು; ಕಾರಣ ಕೇಳು; ವಿವರಣೆ ಬಯಸು: prone to tax God’s wisdom ದೇವರ ವಿವೇಕವನ್ನು ಪ್ರಶ್ನಿಸುವ ಪ್ರವೃತ್ತಿಯುಳ್ಳ.
ಪದಗುಚ್ಛ

taxed cart (ಚರಿತ್ರೆ) ಕಡಮೆ ತೆರಿಗೆಯ ಯಾ ತೆರಿಗೆಯೇ ಇಲ್ಲದ ವ್ಯಾಪಾರದ ಬಂಡಿ.

See also 1tax
2tax ಟ್ಯಾಕ್ಸ್‍
ನಾಮವಾಚಕ
  1. (ರಾಷ್ಟ್ರದ ಆದಾಯಕ್ಕಾಗಿ ವ್ಯಕ್ತಿಗಳು, ಆಸ್ತಿ, ವ್ಯಾಪಾರಗಳ ಮೇಲೆ ವಿಧಿಸುವ) ತೆರಿಗೆ; ಕರ; ಕಂದಾಯ.
  2. (ಅತ್ಯಂತ ಭಾರವಾದ, ಹೊರಲಾರದಂಥ) ದಾಕ್ಷಿಣ್ಯ; ಕರ್ತವ್ಯ; ಉಪಕಾರ; ಉಪಕಾರದ ಹೊರೆ; ದಾಕ್ಷಿಣ್ಯದ ಭಾರ.
  3. (ಒಬ್ಬನ ಶಕ್ತಿ, ಬಉದ್ಧಿಕೌಶಲ, ಮೊದಲಾದವುಗಳ ಮೇಲೆ ಬೀಳುವ) ಭಾರ; ಹೊರೆ; ಶ್ರಮ.