See also 2tax
1tax ಟ್ಯಾಕ್ಸ್‍
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಗಳು, ಸರಕುಗಳು, ಮೊದಲಾದವುಗಳ ಮೇಲೆ) ತೆರಿಗೆ, ಕಂದಾಯ, ಕರ–ವಿಧಿಸು, ಹಾಕು, ಹೊರಿಸು.
  2. (ಆದಾಯ ಮೊದಲಾದವುಗಳಿಂದ) ತೆರಿಗೆ ಕಟಾಯಿಸು, ಹಿಡಿ.
  3. (ಒಬ್ಬನ ಶಕ್ತಿ, ಬಉದ್ಧಿಕೌಶಲ, ಮೊದಲಾದವನ್ನು) ದಣಿಸು; ಶ್ರಮಪಡಿಸು; ದುಡಿಸು; (ಶಕ್ತಿ ಮೊದಲಾದವುಗಳ ಮೇಲೆ) ಭಾರ ಹಾಕು: tax one’s resources ಒಬ್ಬನ ಬಉದ್ಧಿಶಕ್ತಿಯನ್ನು ಮಿತಿಮೀರಿ ದಣಿಸು. tax one’s patience (ಹಲವಾರು ಅಸಂಬದ್ಧ ಪ್ರಶ್ನೆ ಮೊದಲಾದವುಗಳ ಮೂಲಕ) ಒಬ್ಬನ ತಾಳ್ಮೆ ಪರೀಕ್ಷಿಸು.
  4. (ನ್ಯಾಯಶಾಸ್ತ್ರ) ಖರ್ಚು ಗೊತ್ತುಮಾಡು; (ಕೋರ್ಟು ಖರ್ಚು ಮೊದಲಾದವುಗಳ ವಿಷಯದಲ್ಲಿ) ಬಾಬಉಗಳನ್ನು ಪರೀಕ್ಷಿಸಿ ಖರ್ಚು, ವೆಚ್ಚ–ಗೊತ್ತುಮಾಡು, ನಿರ್ಧರಿಸು, ನಿರ್ಣಯಿಸು.
  5. (ಒಬ್ಬನ ಮೇಲೆ ತಪ್ಪು, ದೋಷ, ಮೊದಲಾದವನ್ನು) ಹೊರಿಸು; ಆರೋಪಿಸು; ಆಪಾದಿಸು: tax a person with laziness ಒಬ್ಬನ ಮೇಲೆ ಸೋಮಾರಿತನದ ಆರೋಪಣೆ ಹೊರಿಸು; (ಒಬ್ಬನನ್ನು) ಸೋಮಾರಿಯೆಂದು ಆರೋಪಿಸು.
  6. ಪ್ರಶ್ನಿಸು; ಕಾರಣ ಕೇಳು; ವಿವರಣೆ ಬಯಸು: prone to tax God’s wisdom ದೇವರ ವಿವೇಕವನ್ನು ಪ್ರಶ್ನಿಸುವ ಪ್ರವೃತ್ತಿಯುಳ್ಳ.
ಪದಗುಚ್ಛ

taxed cart (ಚರಿತ್ರೆ) ಕಡಮೆ ತೆರಿಗೆಯ ಯಾ ತೆರಿಗೆಯೇ ಇಲ್ಲದ ವ್ಯಾಪಾರದ ಬಂಡಿ.