See also 2tap  3tap  4tap
1tap ಟ್ಯಾಪ್‍
ನಾಮವಾಚಕ
  1. ನಲ್ಲಿ; ಕೊಳಾಯಿ.
  2. (ಪೀಪಾಯಿನ) ತಿರುಪು ಬಿರುಡೆ.
  3. (ಅದರ ಗುಣಕ್ಕೆ ಸಂಬಂಧಿಸಿದಂತೆ) ನಿರ್ದಿಷ್ಟ ಬಟ್ಟಿಯ ಮದ್ಯ.
  4. (ಬ್ರಿಟಿಷ್‍ ಪ್ರಯೋಗ) ಮದ್ಯ (ಮಾರುವ ಯಾ ಕುಡಿಯುವ) ಕೋಣೆ.
  5. ಟೆಲಿಹೋನ್‍ನಲ್ಲಿ ಕದ್ದಾಲಿಕೆ; (ಸಂಪರ್ಕವನ್ನು ಅಡ್ಡ ತಿರುಗಿಸಿ)ಕದ್ದು ಕೇಳುವುದು.
  6. ಒಳ ತಿರುಪು ಕೊರಕ; ಒಳತಿರುಪಿನ ಸುತ್ತುಗೆರೆ ಕೊರೆಯುವ ಬೈರಿಗೆ, ಸಲಕರಣೆ.
ಪದಗುಚ್ಛ
  1. on tap (ಪೀಪಾಯಿಯಲ್ಲಿನ ಮದ್ಯ) ಹೊರಕ್ಕೆ ಹರಿಸಲು ಸಿದ್ಧವಾಗಿರುವ.
  2. (ರೂಪಕವಾಗಿ) ತಕ್ಷಣದ ಬಳಕೆಗೆ ಸಿದ್ಧವಾಗಿರುವ.
  3. (ಸರ್ಕಾರಿ ಸಾಪತ್ರ ಮೊದಲಾದವುಗಳ ವಿಷಯದಲ್ಲಿ) ಸುಭವಾಗಿ ಸಿಕ್ಕುವ, ಒದಗುವ.
See also 1tap  3tap  4tap
2tap ಟ್ಯಾಪ್‍
ಸಕರ್ಮಕ ಕ್ರಿಯಾಪದ
  1. (ಪೀಪಾಯಿಗೆ) ತಿರುಪು ಬಿರಡೆ ಹಾಕು.
  2. (ಒಳಗಿನ ದ್ರವ ತೆಗೆಯುವುದಕ್ಕಾಗಿ) (ಪೀಪಾಯಿ ಮೊದಲಾದವಕ್ಕೆ) ತೂತುಮಾಡು; ಕಂಡಿ ಕೊರೆ; ತೂತು ಮಾಡಿ ಈಚೆಗೆ ಬಿಡು.
  3. (ಶಸ್ತ್ರವೈದ್ಯ) ಶರೀರದೊಳಗೆ ಕೂಡಿಕೊಂಡ ದ್ರವವನ್ನು ಕಂಡಿ ಮಾಡಿ ಹೊರಬಿಡು, ಈಚೆಗೆ ತೆಗೆ.
  4. ಹೀಗೆ ಹೊರಬಿಡಲು (ವ್ಯಕ್ತಿ ಮೊದಲಾದವರ ಮೇಲೆ) ಕಂಡಿ ಶಸ್ತ್ರಚಿಕಿತ್ಸೆ ನಡೆಸು.
  5. ಕೊರೆದು, ಕಚ್ಚುಮಾಡಿ ಮರದ ರಸ ತೆಗೆ, ಇಳಿಸು.
  6. (ಒಂದು ಜಿಲ್ಲೆ, ಪ್ರಾಂತ, ಮೊದಲಾದವುಗಳೊಡನೆ) ಸಂಪರ್ಕ ಸ್ಥಾಪಿಸು; ವ್ಯವಹಾರ ಬೆಳೆಸು; ವ್ಯಾಪಾರ ಹೂಡು.
  7. (ಚಂದಾ ಸಂಗ್ರಹಣೆ ಮೊದಲಾದ ವಿಷಯಕ್ಕಾಗಿ ಒಬ್ಬ ವ್ಯಕ್ತಿಯನ್ನು) ಕೇಳು; ಕೋರು.
  8. (ಒಬ್ಬನಿಂದ) ಮಾಹಿತಿ ಯಾ ಅಗತ್ಯ ವಸ್ತುಗಳು ಯಾ ಸಂಪನ್ಮೂಲಗಳನ್ನು–ಸಂಗ್ರಹಿಸು, ಪಡೆದುಕೊ.
  9. (ದೂರವಾಣಿಯ ಕರೆ ಯಾ ತಂತಿ ಸಮಾಚಾರವನ್ನು ಕದ್ದಾಲಿಸಲು ದೂರವಾಣಿ, ವಾಹಕ ತಂತಿ, ಮೊದಲಾದವುಗಳಿಗೆ) ಗ್ರಾಹಕ ಸಲಕರಣೆ ಯಾ ಕೇಳಿಸಿಕೊಳ್ಳುವ ಸಾಧನವನ್ನು ಅಳವಡಿಸು, ಜೋಡಿಸು.
  10. ಒಳತಿರುಪು ಕೊರೆ; ಒಳತಿರುಪು ಸುತ್ತುಗಳನ್ನು ಮಾಡು.
See also 1tap  2tap  4tap
3tap ಟ್ಯಾಪ್‍
ಕ್ರಿಯಾಪದ
ಸಕರ್ಮಕ ಕ್ರಿಯಾಪದ
  1. ಮೆಲ್ಲಗೆ–ತಟ್ಟು, ಬಡಿ, ಕುಟ್ಟು: tapped me on the shoulder ನನ್ನ ಭುಜದ ಮೇಲೆ ತಟ್ಟಿದ.
  2. (ಒಂದು ವಸ್ತುವನ್ನು) ಮೆಲ್ಲಗೆ ತಾಕಿಸು, ಕುಟ್ಟು, ತಟ್ಟು: tapped a stick against the window ಕಿಟಕಿಯ ಮೇಲೆ ಕೋಲಿನಿಂದ ಮೆತ್ತಗೆ ಕುಟ್ಟಿದ.
ಅಕರ್ಮಕ ಕ್ರಿಯಾಪದ
  1. ಕಿವಿಗೆ ಕೇಳಿಸುವಂತೆ ಮೆಲ್ಲಗೆ ತಟ್ಟು.
  2. = 2tap-dance.
See also 1tap  2tap  3tap
4tap ಟ್ಯಾಪ್‍
ನಾಮವಾಚಕ
    1. ಮೆಲ್ಲನೆ ತಟ್ಟು(ವುದು), ಕುಟ್ಟು(ವುದು); ಬಡಿತ.
    2. ತಟ್ಟಿದ ಶಬ್ದ: hears a tap at the door ಬಾಗಿಲು ತಟ್ಟಿದ ಶಬ್ದ ಕೇಳಿಸಿತು.
  1. (ಸಾಮಾನ್ಯವಾಗಿ, ಬಹುವಚನದಲ್ಲಿ) (ಅಮೆರಿಕನ್‍ ಪ್ರಯೋಗ) (ಸಿಪಾಯಿಗಳ ಬೀಡಿನಲ್ಲಿ) ದೀಪ ಆರಿಸಬೇಕೆಂದು ಸೂಚಿಸುವ ಯಾ ಸೈನಿಕ ಶವಸಂಸ್ಕಾರ ಸಂದರ್ಭ ಸೂಚಿಸುವ ನಗಾರಿಯ ಯಾ ತುತ್ತೂರಿಯ ಸೂಚನೆ.
    1. = 1tap-dance.
    2. ಟ್ಯಾಪ್‍ನೃತ್ಯದಲ್ಲಿ ಕುಟ್ಟುವ ಶಬ್ದ ಮಾಡಲು ನರ್ತಕನ ಪಾದರಕ್ಷೆಯ ಹೆಬ್ಬೆಟ್ಟು ಮತ್ತು ಹಿಮ್ಮಡಿಗಳಿಗೆ ಜೋಡಿಸಿದ ಲೋಹದ ತುಣುಕು.