See also 1tap  3tap  4tap
2tap ಟ್ಯಾಪ್‍
ಸಕರ್ಮಕ ಕ್ರಿಯಾಪದ
  1. (ಪೀಪಾಯಿಗೆ) ತಿರುಪು ಬಿರಡೆ ಹಾಕು.
  2. (ಒಳಗಿನ ದ್ರವ ತೆಗೆಯುವುದಕ್ಕಾಗಿ) (ಪೀಪಾಯಿ ಮೊದಲಾದವಕ್ಕೆ) ತೂತುಮಾಡು; ಕಂಡಿ ಕೊರೆ; ತೂತು ಮಾಡಿ ಈಚೆಗೆ ಬಿಡು.
  3. (ಶಸ್ತ್ರವೈದ್ಯ) ಶರೀರದೊಳಗೆ ಕೂಡಿಕೊಂಡ ದ್ರವವನ್ನು ಕಂಡಿ ಮಾಡಿ ಹೊರಬಿಡು, ಈಚೆಗೆ ತೆಗೆ.
  4. ಹೀಗೆ ಹೊರಬಿಡಲು (ವ್ಯಕ್ತಿ ಮೊದಲಾದವರ ಮೇಲೆ) ಕಂಡಿ ಶಸ್ತ್ರಚಿಕಿತ್ಸೆ ನಡೆಸು.
  5. ಕೊರೆದು, ಕಚ್ಚುಮಾಡಿ ಮರದ ರಸ ತೆಗೆ, ಇಳಿಸು.
  6. (ಒಂದು ಜಿಲ್ಲೆ, ಪ್ರಾಂತ, ಮೊದಲಾದವುಗಳೊಡನೆ) ಸಂಪರ್ಕ ಸ್ಥಾಪಿಸು; ವ್ಯವಹಾರ ಬೆಳೆಸು; ವ್ಯಾಪಾರ ಹೂಡು.
  7. (ಚಂದಾ ಸಂಗ್ರಹಣೆ ಮೊದಲಾದ ವಿಷಯಕ್ಕಾಗಿ ಒಬ್ಬ ವ್ಯಕ್ತಿಯನ್ನು) ಕೇಳು; ಕೋರು.
  8. (ಒಬ್ಬನಿಂದ) ಮಾಹಿತಿ ಯಾ ಅಗತ್ಯ ವಸ್ತುಗಳು ಯಾ ಸಂಪನ್ಮೂಲಗಳನ್ನು–ಸಂಗ್ರಹಿಸು, ಪಡೆದುಕೊ.
  9. (ದೂರವಾಣಿಯ ಕರೆ ಯಾ ತಂತಿ ಸಮಾಚಾರವನ್ನು ಕದ್ದಾಲಿಸಲು ದೂರವಾಣಿ, ವಾಹಕ ತಂತಿ, ಮೊದಲಾದವುಗಳಿಗೆ) ಗ್ರಾಹಕ ಸಲಕರಣೆ ಯಾ ಕೇಳಿಸಿಕೊಳ್ಳುವ ಸಾಧನವನ್ನು ಅಳವಡಿಸು, ಜೋಡಿಸು.
  10. ಒಳತಿರುಪು ಕೊರೆ; ಒಳತಿರುಪು ಸುತ್ತುಗಳನ್ನು ಮಾಡು.